ಗದಗ ಜಿಲ್ಲೆಯ ಕೊವಿಡ್-19 ಸೋಂಕು ನಿಯಂತ್ರಣ


ಆರು  ಕಂಟೇನ್‌ಮೆಂಟ್ ಪ್ರದೇಶಗಳ ನಿರ್ಬಂಧ ತೆರವು
ಗದಗ :  ಜಿಲ್ಲೆಯ ಗದಗ ತಾಲ್ಲೂಕಿನ  ಅಸುಂಡಿ ಗ್ರಾಮದ ವಾರ್ಡ ನಂ. 2ದ ಸಿದ್ದಲಿಂಗನಗೌಡಾ ಪಾಟೀಲ ಬಡಾವಣೆ ಪ್ರದೇಶ, ಹೊಂಬಳ ಗ್ರಾಮ ಪಂಚಾಯತಿ ವಾರ್ಡ ಸಂಖ್ಯೆ 4ರ ಬ್ರಾಹ್ಮಣರ ಕಾಲನಿ, ಯಲಿಶಿರೂರ ಗ್ರಾಮ ಪಂಚಾಯತಿಯ ವಾರ್ಡ ಸಂಖ್ಯೆ 1 ಹೊಸೂರ ಗ್ರಾಮ, ರೋಣ ಪುರಸಭೆಯ ವಾರ್ಡ ಸಂಖ್ಯೆ 22 ಕಲ್ಯಾಣ ನಗರ,  ಗದಗ ಬೆಟಗೇರಿ ನಗರಸಭೆಯ ವಾರ್ಡ ಸಂಖ್ಯೆ 35 ನಂದೀಶ್ವರ ನಗರದ 2ನೇ ಕ್ರಾಸ್ ಹಾಗೂ ನರಗುಂದ ಪುರಸಭೆಯ ವಾರ್ಡ ಸಂಖ್ಯೆ 16 ಶಿದ್ದನಭಾವಿ ಓಣಿ ಈ ಆರು ಪ್ರದೇಶಗಳನ್ನು ಗದಗ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ವರದಿಯನ್ವಯ  ಕೊವಿಡ್-19 ಸೋಂಕು ನಿಯಂತ್ರಣ ಪ್ರತಿಬಂಧಿತ (ಕಂಟೇನ್‌ಮೆಂಟ್) ಪ್ರದೇಶಗಳೆಂದು ಘೋಷಿಸಿರುವುದನ್ನು ಹಿಂಪಡೆದು ಸಾಮಾನ್ಯ ವಲಯವಾಗಿ ಬದಲಾವಣೆಗೊಳಿಸಿ ಗದಗ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ದಂಡಾಧಿಕಾರಿ ಎಂ.ಸುಂದರೇಶ ಬಾಬು ಆದೇಶ ಹೊರಡಿಸಿದ್ದಾರೆ.

Please follow and like us:
error