: ಕನ್ನಡಾಂಭೆಯ ಅದ್ದೂರಿ ಮೆರವಣಿಗೆ

ಭರ್ಜರಿ ಸ್ಟೆಪ್ ಹಾಕಿದ ಮಹಿಳೆಯರು





ಗಂಗಾವತಿ : ಕನ್ನಡಾಂಭೆಯ ಅದ್ದೂರಿ ಜಾತ್ರೆಗೆ ಜಿಲ್ಲೆಯ ಗಂಗಾವತಿ ತಾಲೂಕಿನ ಜಂಗಮರ ಕಲ್ಗುಡಿ ಸರ್ವಸನ್ನದ್ದಾಗಿದ್ದು, ಸಮ್ಮೇಳನದ ಅಂಗವಾಗಿ ಗ್ರಾಮದಲ್ಲಿ ಅದ್ದೂರಿ ಮೆರವಣಿಗೆ ನಡೆಯಿತು. ಸಮ್ಮೇಳನಾಧ್ಯಕ್ಷರಾದ ಡಾ. ಮುಮ್ತಾಜ್ ಬೇಗಂ ಅವರ ನೇತೃತ್ವದಲ್ಲಿ ಸಾಗಿದ ಜಾತ್ರೆಯಲ್ಲಿ, ವಿವಿಧ ಜಾನಪದ ಕಲಾತಂಡಗಳ ನೃತ್ಯ ಕನ್ನಡ ಕಂಪನ್ನು ಇನ್ನಷ್ಟು ಪಸರಿಸುವಂತೆ ಮಾಡಿತು. ಇನ್ನೂ ವಿಶೇಷವೇಂದ್ರ ಮೂಲ ಆಂದ್ರನಿವಾಸಿಗಳು ಮೆರವಣಿಗೆಯೂದ್ದಕ್ಕೂ ಭರ್ಜರಿ ಸ್ಟೆಪ್ ಹಾಕಿದ್ರು. ಅಲ್ಲದೇ ಸಾವಿರಾರು ಮಹಿಳೆಯರು ಹಳದಿ, ಕೆಂಪು ಸೀರೆಯನ್ನುಟ್ಟು ಪೂರ್ಣಕುಂಭದಲ್ಲಿ ಭಾಗಿಯಾಗಿದ್ದು, ಅದ್ದೂರಿ ಕನ್ನಡ ಜಾತ್ರೆಗೆ ಸಾಕ್ಷಿಯಾಗಿತ್ತು.
7ನೇ ಗಂಗಾವತಿ ತಾಲೂಕ ಕನ್ನಡ ಸಾಹಿತ್ಯ ಸಮ್ಮೇಳನ: ಗಣ್ಯರಿಂದ ಧ್ವಜಾರೋಹಣ
: ಇಂದಿನಿಂದ ಎರಡು ದಿನಗಳ ಕಾಲ ಕನ್ನಡಮ್ಮನ ಜಾತ್ರೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಜಂಗಮರ ಕಲ್ಗುಡಿ ಗ್ರಾಮದಲ್ಲಿ ನಡೆಯುತ್ತಿದ್ದು, ಸಾಹಿತ್ಯ ಸಮ್ಮೇಳನಕ್ಕೆ ಅದ್ದೂರಿ ಚಾಲನೆ ದೊರೆತಿದೆ. ಕನ್ನಡ ಧ್ವಜ, ಕನ್ನಡ ಸಾಹಿತ್ಯ ಪರಿಷತ್ತು ಧ್ಚಜ, ರಾಷ್ಟಧ್ವಜಾರೋಹಣವನ್ನು ಗಣ್ಯರು ನೆರವೇರಿಸುವ ಮೂಲಕ ಸಮ್ಮೇಳನಕ್ಕೆ ಚಾಲನೆ ನೀಡಿದರು. ಇನ್ನೂ ಆಂಧ್ರಪ್ರದೇಶದ ಮೂಲ ನಿವಾಸಿಗಳೇ ವಾಸಿಸಿರುವ ಗ್ರಾಮದಲ್ಲಿ ಕನ್ನಡದ ಕಂಪು ಜೋರಾಗಿದ್ದು, ಮೂಲ ಆಂಧ್ರಪ್ರದೇಶದ ನಿವಾಸಿಗಳೇ ಕನ್ನಡದ ತೇರು ಏಳೆಯುತ್ತಿರುವುದು ವಿಶೇಷವಾಗಿದೆ