ಗಂಗಾವತಿ ಸರ್ವೇ ಮೇಲ್ವಿಚಾರಕ ಎಸಿಬಿ ಬಲೆಗೆ

ಕೊಪ್ಪಳ : .ಗಂಗಾವತಿ ಸರ್ವೇ ಮೇಲ್ವಿಚಾರಕ ಗಂಗಾಧರ ತೇಜಪ್ಪ ಎಸಿಬಿ ಬಲೆಗೆ ಬಿದ್ದಿದ್ದಾರೆ. ಗಂಗಾವತಿ ತಾಲೂಕು ಹೆಬ್ಬಾಳ ಕ್ಯಾಂಪ್‌ನ ರಾಜು.ಪಿ. ಅವರಿಂದ 4 ಸಾವಿರ ಲಂಚ ಪಡೆಯುತ್ತಿದ್ದಾಗ ದಾಳಿ ಮಾಡಿದ ಎಸಿಬಿ ಅವರನ್ನು ಹಣದ ಸಮೇತ ಬಂದಿಸಿದೆ.

ದೂರುದಾರನ ತಾಯಿ ಆಸ್ತಿಯ 11ಇ ನಕ್ಷೆ ನೀಡಲು ಹಣ ಕೇಳಿದ್ದ‌ ಹಿನ್ನೆಲೆ ಗಂಗಾಧರ ಎಸಿಬಿಗೆ ದೂರು ನೀಡಿದ್ದರು. ಬಳ್ಳಾರಿ ಎಸಿಬಿ ಎಸ್ಪಿ ಗುರುನಾಥ ಮತ್ತೂರು ಮಾರ್ಗದರ್ಶನದಲ್ಲಿ ಕೊಪ್ಪಳ ಎಸಿಬಿ ಡಿವೈಎಸ್ಪಿ ಆರ್.ಎಸ್. ಉಜ್ಜಿನಕೊಪ್ಪ ನೇತೃತ್ವದಲ್ಲಿ ದಾಳಿ ಮಾಡಿ ಬಂಧಿಸಲಾಗಿದೆ.

Please follow and like us:
error