ಕೊಪ್ಪಳ : ನಾಳೆ ರಾತ್ರಿ ಎಂಟರಿಂದ ಮುಂದಿನ ಹತ್ತು ದಿನಗಳ ಕಾಲ ಗಂಗಾವತಿ ನಗರ , ಶ್ರೀರಾಮನಗರ ವನ್ನು ಲಾಕಡೌನ್ ಮಾಡಲಾಗುವುದು. ಕೊಪ್ಪಳ ತಾಲೂಕಿನ ಭಾಗ್ಯನಗರದ ಬಗ್ಗೆ ಜಿಲ್ಲಾಧಿಕಾರಿಗಳು ನಿರ್ಣಯ ಕೈಗೊಳ್ಳುತ್ತಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು. ಜಿ.ಪಂ ಸಭಾಂಗಣದಲ್ಲಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಕರೋನಾ ತಡೆಗಟ್ಟಲು ಹಾಟ್ ಸ್ಪಾಟ್ ಗಳನ್ನಯ ಗುರುತಿಸಲಾಗಿದೆ. ಈ ಕಾರಣಕ್ಕಾಗಿ ಗಂಗಾವತಿ ನಗರ ಶ್ರೀರಾಮನಗರವನ್ನಯ ಮುಂದಿನ ಹತ್ತು ದಿನಗಳ ಕಾಲ ಲಾಕಡೌನ್ ಮಾಡಲಾಗುವುದು . ಚೆಕ್ ಪೋಸ್ಟ್ ಗಳನ್ನಯ ಸ್ಥಾಪಿಸಲಾಗುವುದು ಎಂದು ಹೇಳಿದರು. ಈ ಸಂದರ್ಭದಲ್ಲಿ ಸಂಸದ ಕರಡಿ ಸಂಗಣ್ಣ, ಶಾಸಕ ಬಸವರಾಜ್ ದಡೆಸೂಗೂರು, ಜಿಲ್ಲಾಧಿಕಾರಿ ಸುರಳ್ಕರ್ ವಿಶಾಲ್ ಕಿಶೋರ್, ಎಸ್ಪಿ ಜಿ.ಸಂಗೀತಾ ಉಪಸ್ಥಿತರಿದ್ದರು

ತಕ್ಷಣದಿಂದ ಹತ್ತು ಸಾವಿರ ಆಂಟಿಜೆನ್ ಕಿಟ್ ಖರೀದಿಗೆ ಸೂಚನೆ 45 ಲಕ್ಷ ರೂಪಾಯಿ ಖರ್ಚಾಗುತ್ತದೆ. 21 ವೆಂಟಿಲೆಟರ್ ಖರೀದಿಗೆ ಸೂಚನೆ. ಅದಕ್ಕೆ 91 ಲಕ್ಷ ಖರ್ಚಾಗುತ್ತದೆ.1,343 ಹೆಲ್ತ್ ಕಿಟ್ ಅಂಗನವಾಡಿ ಕಾರ್ಯಕರ್ತರಿಗೆ 55 ಲಕ್ಷ. ಲ್ಯಾಬ್ ಟೆಕ್ನಿಷಿಯನ್. ಹೆಚ್ಚುವರಿಯಾಗಿ 30 ಮೊಬೈಲ್ ಯುನಿಟ್ ಜಿಲ್ಲಾದ್ಯಂತ. ಜಿಲ್ಲೆಯ ಗಡಿಭಾಗಗಳಲ್ಲಿ ಅಂತರ್ ಜಿಲ್ಲಾ ಚೆಕ್ಪೋಸ್ಟ್ ಆರಂಭಿಸುತ್ತಿದ್ದೇವೆ… ಗಂಗಾವತಿ, ಶ್ರೀರಾಮನಗರ ಹಾಟ್ಸ್ಪಾಟ್. ನಾಳೆ ರಾತ್ರಿ ಎಂಟರಿಂದ ಹತ್ತು ದಿನಗಳ ಕಾಲ ಲಾಕ್ಡೌನ್ . ಕೊಪ್ಪಳದ ತಾಲೂಕಿನ ಭಾಗ್ಯನಗರ ಹಾಟ್ಸ್ಪಾಟ್. ಅಗತ್ಯ ವಸ್ತುಗಳ ಅಂಗಡಿಗಳು ತೆರೆದಿರುತ್ತವೆ.ಜಿಲ್ಲೆಯ ಎಲ್ಲ ಕಡೆ ಜಾಗೃತಿ ಕಾರ್ಯಕ್ರಮಕ್ಕೆ ಯೋಜನೆ ರೂಪಿಸಲಾಗುತ್ತದೆ. ಜಿಲ್ಲೆಯಲ್ಲಿ 6 ಸಾವಿರ ಮೆಟ್ರಿಕ್ ಟನ್ ಯುರಿಯಾ ಗೊಬ್ಬರ ಸ್ಟಾಕ್ ಇದೆ. ಕೊರತೆ ಇಲ್ಲ ಎಂದು ಹೇಳಿದರು.