ಗಂಗಾವತಿ ಶಾಸಕ‌ ಪರಣ್ಣ ಮುನವಳ್ಳಿಯವರಿಗೆ ಕೋವಿಡ್-19 ದೃಢ!

ಕೊಪ್ಪಳ: ಜಿಲ್ಲೆಯಾದ್ಯಂತ ಸಾಮಾನ್ಯ ಜನರಲ್ಲಿ ಕಾಣಿಸಿಕೊಂಡಿದ್ದ ಕೋವಿಡ್-19 ಇತ್ತೀಚಿಗೆ ಗಂಗಾವತಿಯ ಶಾಮಿದ್ ಮನಿಯಾರ್ ಸೇರಿದಂತೆ ಇತರ ಗಣ್ಯರಲ್ಲಿ ಕಾಣಿಸಿಕೊಂಡಿತ್ತು. ಇಂದು ರವಿವಾರ ಗಂಗಾವತಿ ಶಾಸಕ‌ ಪರಣ್ಣ ಮುನವಳ್ಳಿ ಸೇರಿದಂತೆ ಜಿಲ್ಲೆಯ 69 ಜನರಿಗೆ ದೃಢಪಟ್ಟಿದೆ. ಈ ಮೂಲಕ ಜಿಲ್ಲೆಯಲ್ಲಿ ಮತ್ತೊಮ್ಮೆ ಗರಿಷ್ಠ ಸಂಖ್ಯೆಯ ಕೋವಿಡ್-19 ಪ್ರಕರಣಗಳು ದೃಢಪಟ್ಟಿವೆ. ರವಿವಾರ 46 ಜನರು ಸೋಂಕಿನಿಂದ ಮುಕ್ತಿ ಪಡೆದು ಗುಣಮುಖರಾಗಿದ್ದಾರೆ.

ಒಟ್ಟಾರೆ ಜಿಲ್ಲೆಯಲ್ಲಿ ದಾಖಲಾದ 515 ಕೇಸ್‌ಗಳ ಪೈಕಿ 328 ಜನರು ಗುಣಮುಖರಾಗಿದ್ದಾರೆ. 12 ಜನರು ಮೃತಪಟ್ಟಿದ್ದು 175 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಪರಣ್ಣ ಮುನವಳ್ಳಿಯವರಿಗೆ ಕಾಂಗ್ರೆಸ್ ಶಾಸಕರೇ ಪ್ರೈಮರಿ ಕಾಂಟ್ಯಾಕ್ಟ್ಸ್!
ಜುಲೈ 17ರಂದು ಸ್ವ್ಯಾಬ್ ಟೆಸ್ಟ್ ಕೊಟ್ಟಿದ್ದ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿಯವರಿಗೆ ಕೊರೊನಾ ವೈರಸ್ ಬಂದಿರುವುದು ಜುಲೈ 19ರಂದು ದೃಢಪಟ್ಟಿದೆ. ಜುಲೈ 16ರಂದು ಕೊರೊನಾ ನಿಯಂತ್ರಣ ಕುರಿತ ಜಿಲ್ಲಾಧಿಕಾರಿಗಳು ಆಹ್ವಾನಿಸಿದ್ದ ಸಭೆಗೆ ಜಿಲ್ಲೆಯ ಎಲ್ಲ ಶಾಸಕರು ಭಾಗವಹಿಸಿದ್ದರು. ಬಿಜೆಪಿ ಶಾಸಕ ಪರಣ್ಣ ಮುನವಳ್ಳಿಯವರ ಎಡ ಹಾಗೂ ಬಲಭಾಗಕ್ಕೆ ಕಾಂಗ್ರೆಸ್ ಶಾಸಕರಾದ ರಾಘವೇಂದ್ರ ಹಿಟ್ನಾಳ ಹಾಗೂ ಅಮರೇಗೌಡ ಬಯ್ಯಾಪುರ ಆಸೀನರಾಗಿದ್ದರು. ಇವರಿಬ್ಬರು ಪರಣ್ಣ ಮುನವಳ್ಳಿಯವರ ಪ್ರೈಮರಿ ಕಾಂಟ್ಯಾಕ್ಟ್ ಲಿಸ್ಟ್‌ನಲ್ಲಿ ಬರುತ್ತಾರೆ. ಇನ್ನುಳಿದ ಜನಪ್ರತಿನಿಧಿಗಳು, ಅಧಿಕಾರಿ ವರ್ಗ ಶಾಸಕ‌ ಪರಣ್ಣ ಮುನವಳ್ಳಿಯವರಿಂದ ಒಂದು ಮೀಟರ್‌ಗೂ ಅಧಿಕ ದೂರದಲ್ಲಿದ್ದರು. ಮೇಲಾಗಿ ಸಭೆಯಲ್ಲಿದ್ದ ಎಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಂಡಿದ್ದೇವು. ಮಾಸ್ಕ್ ಹಾಕಿಕೊಂಡು, ಸ್ಯಾನಿಟೈಸರ್ ಬಳಸಿದ್ದೇವೆ. ಯಾರೂ, ಯಾರಿಗೂ ಕೈ ಕುಲುಕಿಸಿಲ್ಲ ಎಂದು ಜಿಲ್ಲಾಧಿಕಾರಿ ಎಸ್.ವಿಕಾಸ್ ಕಿಶೋರ್ ತಿಳಿಸಿದ್ದಾರೆ. ಶಾಸಕ ಬಯ್ಯಾಪೂರ ರವರ ಆಪ್ತ ಸಹಾಯಕ ಹಾಗೂ ಗನ್ ಮನ್ ಸಹ ಕ್ವಾರಂಟೈನ್ ನಲ್ಲಿದ್ದಾರೆ‌

Please follow and like us:
error