ಕೊಪ್ಪಳ : ಕೊಪ್ಪಳದಲ್ಲಿ ಮತ್ತೊಂದು ಕೊರೊನಾ ಪಾಸಿಟಿವ್ ಕೇಸ್ ಪತ್ತೆಯಾಗಿದೆ.
ಕೊಪ್ಪಳದ ಗಂಗಾವತಿಯಲ್ಲಿ ಪ್ರಕರಣ ಪತ್ತೆಯಾಗಿದ್ದು 32 ವರ್ಷ ವ್ಯಕ್ತಿಯಲ್ಲಿ ಕೊರೊನಾ ಪ್ರಕರಣ ಧೃಡವಾಗಿದೆ. ಜೂನ್ 8 ರಂದು ಆಂಧ್ರಪ್ರದೇಶದ ಆದೋನಿಯಿಂದ ಬಂದಿದ್ದ ವ್ಯಕ್ತಿ. ವೃತ್ತಿಯಲ್ಲಿ ಮೌಲ್ವಿಯಾಗಿ ಕಾರ್ಯನಿರ್ವಸುತ್ತಿದ್ದಾರೆ.ಸೋಂಕಿತನ ಪ್ರಾಥಮಿಕ ಸಂಪರ್ಕ ಹಾಗೂ, ದ್ವಿತೀಯ ಸಂಪರ್ಕಗಳ ಪತ್ತೆಗೆ ಹುಡುಕಾಟ ನಡೆದಿದೆ ಗಂಗಾವತಿಯ ಜಾಮೀಯಾ ಮಸೀದಿ ಅಂಜುಮನ್ ಬಜಾರ್, ಗಾಂಧಿ ಚೌಕ್ ನಿವಾಸಿಯಾಗಿರುವ ಸೋಂಕಿತನನ್ನು ಕೊಪ್ಪಳದ ಕೊವಿಡ್ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಮಾಹಿತಿ ನೀಡಿದ್ದಾರೆ

13 ಸೋಂಕಿತರ ಪೈಕಿ ನಾಲ್ವರು ಗುಣಮುಖ ರಾಗಿದ್ದಾರೆ. ಒಟ್ಟಾರೆ ಜಿಲ್ಲೆಯಲ್ಲಿ 13 ಕೊರೊನಾ ಕೇಸ್ಗಳು ದೃಢಪಟ್ಟಿದ್ದು, ನಾಲ್ವರು ಗುಣಮುಖರಾಗಿದ್ದಾರೆ. ಇನ್ನುಳಿದ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
Please follow and like us: