fbpx

ಗಂಗಾವತಿ, ಭಾಗ್ಯನಗರ ಸೇರಿದಂತೆ ಜಿಲ್ಲೆಯಾದ್ಯಂತ ೧೦ ಸ್ಥಳಗಳಲ್ಲಿ ಲಾಕಡೌನ್

ಕೊಪ್ಪಳ : ಜಿಲ್ಲೆಯಲ್ಲಿ ಮುಂದುವರೆದ ಕರೋನಾ ಹಾವಳಿ ಹಿನ್ನೆಲೆಯಲ್ಲಿ ಜಿಲ್ಲೆಯ ೧೦ ಸ್ಥಳಗಳಲ್ಲಿ ಲಾಕಡೌನ್ ಮಾಡಲಾಗುತ್ತಿದೆ. ಗಂಗಾವತಿ, ಶ್ರೀರಾಮನಗರ, ಭಾಗ್ಯನಗರ, ಮರ್ಲಾನಹಳ್ಳಿ, ಹಿರೇಸಿಂದೋಗಿ, ಮಂಗಳೂರು, ನವಲಹಳ್ಳಿ, ಮುನಿರಾಬಾದ್, ಹಣವಾಳ, ಹೇರೂರಿ ನಲ್ಲಿ ಲಾಕಡೌನ್ ಮಾಡಲಾಗುತ್ತಿದೆ .ಲಾಕಡೌನ್ ಆದೇಶ ನಾಳೆರಾತ್ರಿ ೮ ಗಂಟೆಯಿಂದ ಮುಂದಿನ ೧೦ ದಿನಗಳವರೆಗೆ ಜಾರಿಯಲ್ಲಿರುತ್ತದೆ. ಅಗತ್ಯ ಸೇವೆಗಳ ಹೊರತು ಪಡಿಸಿ ಎಲ್ಲ ಸೇವೆಗಳನ್ನು ರದ್ದುಗೊಳಿಸಲಾಗಿದೆ. ಎಂದು ಜಿಲ್ಲಾಧಿಕಾರಿ ಸುರಳ್ಕರ್ ವಿಶಾಲ್ ಕಿಶೋರ್ ಹೇಳಿದ್ದಾರೆ. ಲಾಕಡೌನ್ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕ್ರಮಗಳನ್ನು ರದ್ದು ಪಡಿಸಲಾಗುತ್ತದೆ. ಯಾವುದೇ ರೀತಿಯ ಮದುವೆ ಸೇರಿದಂತೆ ಆಚರಣೆಗಳನ್ನು ರದ್ದು ಗೊಳಿಸಲಾಗುತ್ತಿದೆ. ಮದ್ಯಮಾರಾಟ ರದ್ದುಗೊಳಿಸಲಾಗುವುದು. ಲಾಕಡೌನ ಉಲ್ಲಂಘಿಸಿದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಹೇಳಿದ್ದಾರೆ.

ಗಂಗಾವತಿಯ ಮೂಲಕ ಹಾದು ಹೋಗುವ ವಾಹನಗಳಿಗೆ ಮಾರ್ಗ ಬದಲಾವಣೆ ಮಾಡಲಾಗುತ್ತದೆ. ಸೂಕ್ತ ಬಂದೋಬಸ್ತ ಪೋಲಿಸ್ ಇಲಾಖೆ ಮಾಡಲಿದೆ ಎಂದು ಸಿಇಓ ರಘುನಂದನಮೂರ್ತಿ ತಿಳಿಸಿದ್ದಾರೆ.

Please follow and like us:
error
error: Content is protected !!