ಗಂಗಾವತಿ ಪ್ರಾಣೇಶ್ ನೇಮಕ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ

Koppal ಗಂಗಾವತಿ ಪ್ರಾಣೇಶ್ ಜಿಲ್ಲಾ ಐಕಾನ್ ಆಗಿ ನೇಮಕವಾಗಿರುವ ಹಿನ್ನೆಲೆಯಲ್ಲಿ ಅವರ ವಿರುದ್ದ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತದಾನದ ಜಾಗೃತಿಗಾಗಿ ಗಂಗಾವತಿ ಪ್ರಾಣೇಶ್ ಜಿಲ್ಲಾ ಐಕಾನ್ ಎಂದು ಚುನಾವಣೆ ಆಯೋಗದಿಂದ ನೇಮಕ ಮಾಡಲಾಗಿದೆ.ವಿವಿಧ ಮತದಾನ ಜಾಗೃತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.

ಲೋಫರ್ ಮನುವ್ಯಾದಿ , ಆರ್ ಎಸ್ ಎಸ್ ಮೂಲದ ಮನುವಾದ ಜಾರಿಗೊಳಿಸಲು ಶ್ರಮಿಸುತ್ತಿರುವ ವ್ಯಕ್ತಿಗೆ ಐಕಾನ್ ಮಾಡಿದ್ದು ದುರಂತ ಇವರ ಆಯ್ಕೆ ಮತದಾರರಿಗೆ ಮಾಡಿದ ದ್ರೋಹ, ತಮ್ಮ ಹಾಸ್ಯದಿಂದ ಕೆಳವರ್ಗದ ದುಡಿಯುವ ಜನರ ಬಗ್ಗೆ ಹಗುರವಾಗಿ ಮಾತನಾಡುವ ಪ್ರಾಣೇಶ್ ಕೈಬಿಡಬೇಕೆಂದು ಒತ್ತಾಯ ಮಾಡಿದ್ದಾರೆ.

ಗಂಗಾವತಿ ಪ್ರಾಣೇಶ್‌ರವರು ಆರ್ . ಎಸ್ . ಎಸ್ ಮೂಲ ಹಾಗೂ ಮನುವಾದ ಒಪ್ಪಿಕೊಂಡಂತಹ ಕಲಾವಿದ , ಕಲಾವಿದರಿಗೆ ಜಾತಿ , ಧರ್ಮ ಇರುವುದಿಲ್ಲ . ಆದರೆ ಪ್ರಾಣೇಶ್ ಮೂಲಭೂತವಾದಿ . ಇವರನ್ನು ಮತದಾರರನ್ನು ಜಾಗೃತಿಗೊಳಿಸಲು ‘ ಐಕಾನ್ ‘ ಆಗಿ ನೇಮಿಸಿರುವುದು ಜಿಲ್ಲೆಯ ಮತದಾರರಿಗೆ ಮಾಡಿದ ದ್ರೋಹವಾಗಿದೆ ಎಂದು ಭಾರಧ್ವಾಜ್ ಪ್ರಕಟಣೆಯಲ್ಲಿ ಖೇದ ವ್ಯಕ್ತಪಡಿಸಿದ್ದಾರೆ . ಗಂಗಾವತಿ ಪ್ರಾಣೇಶ್‌ರವರು ಹಾಸ್ಯ ಪ್ರಾರಂಭ ಮಾಡಿದಾಗಿನಿಂದಲೂ ಬಡವರನ್ನು , ದುಡಿಯುವವರನ್ನು ಅಲ್ಪಸಂಖ್ಯಾತರನ್ನು ಹಗುರ ಭಾವನೆಯಿಂದ ಮಾತನಾಡುತ್ತಾ , ಜನರಿಗೆ ಮನೋರಂಜನೆ ನೀಡಿದ್ದಾರೆ . ಕಲಾವಿದರಿಗೆ ಜಾತಿ , ಧರ್ಮ ಇರುವುದಿಲ್ಲ . ಆದರೆ ಇವರು ಸನಾತನ ಹಿಂದೂಗಳಾಗಿ ಮೂಲಭೂತ ಹಿಂದುತ್ವದಿಂದ ಹೊರಬರಲಾಗದೆ ಕೆಲವರ್ಗಗಳಿಗೆ ಮಾತ್ರ ಕಲಾವಿದರಾಗಿದ್ದಾರೆ . ಹೆಚ್ಚಿನ ವರ್ಗಗಳಿಗೆ ತಮ್ಮ ಹಾಸ್ಯದಿಂದ ಅಪಮಾನ ಮಾಡುತ್ತಿದ್ದಾರೆ . ಇದು ಕಲಾವಿದರಿಗೆ ಶೋಭೆ ತರುವಂತದ್ದಲ್ಲ . ಚುನಾವಣಾ ಆಯೋಗ ಕೂಡಲೇ ಇವರನ್ನು ‘ ಐಕಾನ್ ‘ ಜವಾಬ್ದಾರಿಯಿಂದ ಬಿಡಿಸಿ , ಒಳ್ಳೆಯ ಪ್ರಗತಿಪರರನ್ನು ಎಲ್ಲಾ ವರ್ಗಗಳನ್ನು , ಪಕ್ಷಗಳನ್ನು ಸಮನಾದ ದೃಷ್ಟಿಯಿಂದ ನೋಡುವವರನ್ನು ನೇಮಿಸಬೇಕೆಂದು ಸಿ . ಪಿ . ಐ . ಎಂ . ಎಲ್ ಪಕ್ಷ ಒತ್ತಾಯಿಸಿದೆ.

Please follow and like us:
error