ಗಂಗಾವತಿ ನಗರಸಭಾ ಸದಸ್ಯ ಮನೋಹರಸ್ವಾಮಿ ಕಿಡ್ನಾಪ್ : ಸಿಸಿಟಿವಿಯಲ್ಲಿ ದೃಶ್ಯಸೆರೆ ದೂರು ದಾಖಲು

ಕನ್ನಡನೆಟ್ ನ್ಯೂಸ್ : ನಿನ್ನೆ ತಡ ರಾತ್ರಿ ಗಂಗಾವತಿ ನಗರಸಭಾ ಸದಸ್ಯ ಮನೋಹರಸ್ವಾಮಿ ಕಿಡ್ನಾಪ್ ಮಾಡಲಾಗಿದೆ ಈ‌ಕುರಿತು ನಗರಠಾಣೆಯಲ್ಲಿ ದೂರು ದಾಖಲಾಗಿದೆ. ಅಪಹರಣದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.

ಪೋಲಿಸ್ ರಿಗೆ ನೀಡಲಾದ ದೂರು ಮತ್ತು ವರ್ತಮಾನ ವರದಿಯ ವಿವರ ಈ ರೀತಿ ಇದೆ

ಇಂದು ದಿನಾಂಕ 30-10-2020 ರಂದು 00-30 ಎಂಕ್ಕೆ ಹಚ್ , ಸುರೇಶ ತಂದೆ ಹೆಜ್ , ಗೌರಪ್ಪ ಹಣವಾಳ ವಯಸ್ಸು 49 ವರ್ಷ ಜಾಲಿಂಗಾಯತ ಉ ; ವ್ಯಾಪಾರ ಸಾ : ಜಯನಗರ , ಗಂಗಾವತಿ ಇವರು ಠಾಣೆಗೆ ಬಂದು ತಮ್ಮದೊಂದು ಫಿರ್ಯಾದಿ ನೀಡಿದ್ದು ಅವರ ಸಾರಂಶವೆನೆಂದರೆ , ದಿನಾಂಕ 29-10-2020 ರಂದು ರಾತ್ರಿ 10-00 ಗಂಟೆಯ ಸುಮಾರಿಗೆ ಫಿರ್ಯಾದಿದಾರರು ಮತ್ತು ಮನೋಹರಸಾಮಿ ತಂದೆ ಅಯ್ಯಸ್ವಾಮಿ ಹಿರೇಮಠ ಸಾ : ಇಸಾಂಪುರ ಗಂಗಾವತಿ ನಗರಸಭೆಯ ಸದಸ್ಯರು ಕೂಡಿಕೊಂಡು ಗಂಗಾವತಿ ನಗರದ ಕೊಪ್ಪಳ ರಸ್ತೆಯರುವ ನಕ್ಷತ್ರ ಬಾರ್ & ರೆಸ್ಟೋರೆಂಟದ ಮೇಲೇ ಊಟ ಮಾಡುತ್ತಿರುವಾಗ ಆಿಗೆ ಆರೋಪಿತರಾದ ಬಿಜೆಪಿ ಪಕ್ಷದ ನಗರಸಭೆಯ ಸದಸ್ಯರಾದ ( 01 ) ಅಜಯ ಬಿಬ್ರಾಲಿ , ( 02 ) ಪರಶುರಾಮ ಮಡ್ಕರ್ . ( 03 ) ನವೀನ್ ಮಾಲಿಪಾಟೀಲ್ . ( 04 ) ರಾಚಮ್ಮ ಸಿದ್ಧಾಪುರ ಮಾಜಿ ಸದಸ್ಯರು ಮತ್ತು ( 05 ) ರಾಘವೇಂದ್ರ ಶೆಟ್ಟಿ , ನಗರಸಭೆ ಮಾಜಿ ಅಧ್ಯಕ್ಷರು ಹೋಗಿ ಮನೋಹರಸಾಮಿಗೆ ನಗರಸಭೆಯ ಅಧ್ಯಕ್ಷ / ಉಪಾಧ್ಯಕ್ಷ ಚುನಾವಣೆಯ ವಿಷಯಕ್ಕೆ ಸಂಬಂಧಿಸಿದಂತೆ ನಿನ್ನದು ಬಹಳ ಆಗಿದೆ ಬೆಳಕು ಹರಿಯುವದೊರಳಗಾಗಿ ನಿನಗೆ ಏನು ಮಾಡುತ್ತೇವ ನೋಡು ಅಂತಾ ಹೇಳಿ ಅವರು ಕೆಳಗೆ ಹೋಗಿ ಕೆಳಗಡೆಗೆ ಇದ್ಯ ಅವರ ಸಹಚರರಾದ ( 06 ) ರವಿ ಲಿಂಗರಾಜ ಕಾಂಪ್ . ( 07 ) ಡಬರಿ ಶರಣ ಸಾ : ಲಿಂಗರಾಜ ಕ್ಯಾಂಪ್ , ಗಂಗಾವತಿ ಹಾಗೂ ಇತರೆ 08 ಜನರನ್ನು ಮೇಲಡೆಗೆ ಕಳುಹಿಸಿದ್ರು , ಅವರು ಮುಖಕ್ಕೆ ಮಾಸ್ಕ ಹಾಕಿಕೊಂಡು ಬಂದಿದ್ಭು ಅವರು ಫಿರ್ಯಾದಿ ಮತ್ತು ಮನೋಹರಸಾಮಿ ಇವರ ಹತ್ತಿರ ಇದ್ರ ಮೊಬೈಲ್ ತೆಗೆದುಕೊಂಡಿದ್ದು ಹಾಗೂ ಮನೋಹರಸ್ವಾಮಿಗೆ ಏನು ಮಾಡುತ್ತೇವೆ ನೋಡು ಅಂತಾ ಹೇಳುತ್ತಾ ಜೀವದ ಬೆದರಿಕೆ ಹಾಕುತ್ತಾ ಮುಖಕ್ಕೆ : ಹೊಡೆದು ಎತ್ತಿಕೊಂಡು ಬಾರ್ ನ ಕೆಳಗಡೆಗೆ ಇಳಿದು ಒಂದು ಕಾರಿನಲ್ಲಿ ಹಾಕಿಕೊಂಡು ಕೊಪ್ಪಳ ರಸ್ತೆ ಕಡೆಗೆ ಕರೆದುಕೊಂಡು ಹೋದರು , ಹಾಗೂ ಉಳಿದವರು ಸಹ ಕಾರ್ ಹಾಗೂ ಮೋಟಾರ ಸೈಕಲ್ ಗಳಕ್ಕೆ ಹೋಗಿರುತ್ತಾರೆ . ಕಾರಣ ಮನೋಹರಸ್ವಾಮಿ ಇವರಿಗೆ ಜೀವದ ಬೆದರಿಕೆ ಹಾಕಿ ಆಪಹರಣ ಮಾಡಿಕೊಂಡು ವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ವರೆ ಆಗಿ ನೀಡಿದ ಫಿರ್ಯಾದಿ ಮೇಲಿಂದ ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ 150/2020 ಕಲಂ 143 , 147 , 365 , 506 ಸಹಿತ 149 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.

Please follow and like us:
error