ಗಂಗಾವತಿ ತಹಶೀಲ್ದಾರ ಚಂದ್ರಕಾಂತ ಎಸಿಬಿ ಬಲೆಗೆ

ಗಂಗಾವತಿ ತಹಶೀಲ್ದಾರ್ ಚಂದ್ರಕಾಂತ್ ಮತ್ತು ಶಿರಸ್ತೇದರ್ ಶರಣಪ್ಪ ಎಸಿಬಿ ಬಲೆಗೆ

ಕೊಪ್ಪಳ : ಖಾತಾ ಉತಾರ ಮಾಡಿಕೊಡಲು ರೈತರೊಬ್ಬರಿಂದ 6000 ರೂಪಾಯಿ ಬೇಡಿಕೆಯಿಟ್ಟಿದ್ದ ಗಂಗಾವತಿ ತಹಶೀಲ್ದಾರ್ ಚಂದ್ರಕಾಂತ ಹಾಗೂ ಶಿರೇಸ್ತದಾರ್ ಶರಣಪ್ಪ ಲಂಚ ಪಡೆಯುವಾಗ ಎಸಿಬಿ ದಾಳಿ ನಡೆಸಿದ್ದು ಸಿಕ್ಕಿಬಿದ್ದಿದ್ದಾರೆ

ಗಂಗಾವತಿಯ ವಡ್ಡರಟ್ಟಿ ಗ್ರಾಮದ ಸುಂದರ್ ರಾಜ್ ಎನ್ನುವವರಿಗೆ ಖಾತಾ ಉತಾರ್ ಮಾಡಲು 6000 ಬೇಡಿಕೆಯಿಟ್ಟಿದ್ದರು ಇದರಲ್ಲಿ 3000 ರೂ, ಮುಂಗಡ ಸ್ವೀಕರಿಸುವಾಗ ಸಿಕ್ಕಿಬಿದ್ದಿದ್ದಾರೆ.

ಶರಣಪ್ಪ, ಶಿರಾಸ್ತೇದರ್ ಹಾಗೂ ತಹಶೀಲ್ದಾರ್ ಚಂದ್ರಕಾಂತ್ ಇಬ್ಬರನ್ನು ಬಂಧಿಸಿ ಲಂಚದ ಮೊತ್ತವನ್ನು ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಎಸಿಬಿ ಡಿಎಸ್ಪಿ ರುದ್ರೇಶ್ ಉಜ್ಜನಕೊಪ್ಪ ತಿಳಿಸಿದ್ದಾರೆ

Please follow and like us:
error