ಗಂಗಾವತಿ ತಹಶೀಲ್ದಾರ್ ಬೆದರಿಕೆ ನೀತಿ ಖಂಡಿಸಿ ಪತ್ರಕರ್ತರಿಂದ ಡಿಸಿ ಮನವಿ

ಗಂಗಾವತಿ: ಗಂಗಾವತಿ ತಾಲೂಕಿನ ವರದಿಗಾರರಾದ ವೀರೇಶ್ ಬಳ್ಳಾರಿ ಹಾಗೂ ವಾಗೀಶ್ ನವಲಿ ಹಿರೇಮಠ್ ಇವರು ಬರೆದ ವರದಿಗೆ ಸಾಕ್ಷö್ಯ ಒದಗಿಸುವಂತೆ ನೋಟಿಸ್ ನೀಡಿದ್ದ ಗಂಗಾವತಿ ತಾಲೂಕಾ ತಹಶೀಲ್ದಾರ್ ಕ್ರಮ ಖಂಡಿಸಿ ಗಂಗಾವತಿ ತಾಲೂಕಾ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಕೊಪ್ಪಳ ಜಿಲ್ಲಾಧಿಕಾರಿಗಳಿಗೆ ತಹಶೀಲ್ದಾರ್ ಮುಖಾಂತರ ಮನವಿ ಸಲ್ಲಿಸಲಾಯಿತು. ಈ ಸಂಧರ್ಭದಲ್ಲಿ ಮಾತನಾಡಿದ ಅಧ್ಯಕ್ಷ ವಿಶ್ವನಾಥ್ ಬೆಳಗಲ್ ಮಠ ಪತ್ರಕರ್ತರು ಸಾತಂತ್ರö್ಯವಾಗಿ ಸುದ್ದಿ ಮಾಡಲು ಬಿಡದೆ ಕೈ ಕಟ್ಟಿಹಾಕುವ ಯತ್ನ ನಡೆಯುತ್ತಿದೆ. ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ನೊಟೀಸ್ ನೀಡಿರುವುದು ಖಂಡನೀಯ ಎಂದರು.
ನಿಕಟಪೂರ್ವ ಅಧ್ಯಕ್ಷ ನಾಗರಾಜ್ ಇಂಗಳಗಿ ಮಾತನಾಡಿ ಕಳ್ಳನನ್ನು ಹಿಡಿಯುವ ಬದಲಾಗಿ ದಾರಿ ತೋರಿದವವನ ಮೇಲೆ ಕ್ರಮಕ್ಕೆ ಮುಂದಾಗಿರುವ ತಹಶೀಲ್ದಾರ್ ಕ್ರಮ ಸರಿಯಾದುದಲ್ಲ ಮಾದ್ಯಮ ದಮನಕಾರಿ ನೀತಿ ಅನುಸರಿಸುತ್ತಿರುವುದರ ವಿರುದ್ಧ ರಾಜ್ಯದಾದ್ಯಂತ ಹೋರಾಟಕ್ಕೆ ಅಣಿಯಾಗುತ್ತಿದ್ದು ತಹಶೀಲ್ದಾರ್ ನೊಟೀಸ್ ವಾಪಾಸ್ಸು ಪಡೆಯಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತರಾದ ವೀರಾಪುರ ಕೃಷ್ಣ, ಪಿ.ದಶರಥ್, ವೈ.ನಾಗರಾಜ್, ದೇವರಾಜ್, ವಾಗೀಶ್ ಸ್ವಾಮಿ ನವಲಿ ಹಿರೇಮಠ್, ಕಾಶೀಂಸಾಬ್ ಕೋನಿ, ವಸಂತ್, ಶಿವಪ್ಪ ನಾಯಕ, ಮಲ್ಲಿಕಾರ್ಜುನ್ ಗೋಟೂರ್, ಮಂಜುನಾಥ್ ಹೊಸಗೇರಿ, ಎಂ.ಡಿ.ಗೌಸ್ ಇದ್ದರು

Please follow and like us:
error