ಗಂಗಾವತಿ ಜಿದ್ದಾಜಿದ್ದಿ : ಗೆಲುವಿನ ನಗೆಬೀರಿದ ಅನ್ಸಾರಿ

ಕನ್ನಡನೆಟ್ ನ್ಯೂಜ್ : ನಗರಸಭೆ ಸದಸ್ಯನ ಅಪಹರಣದಿಂದ ಕುತೂಹಲ ಕೆರಳಿಸಿದ್ದ ಗಂಗಾವತಿ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಗೆ ಶಾಂತಿಯುತ ತೆರೆ ಬಿದ್ದಿದೆ. ಅಧಿಕಾರ‌ ಹಿಡಿಯುವ ಕಮಲ ಪಾಳೆಯದ ಕನಸು ಭಗ್ನವಾಗುದ್ದು, ಅಧಿಕಾರ ಕೈ ವಶವಾಗಿದೆ.

ಬಿಜೆಪಿ ಸದಸ್ಯರು ಒಂದು ಬಸ್ ಹಾಗೂ ಕಾಂಗ್ರೆಸ್ ಸದಸ್ಯರು ಮತ್ತೊಂದು ಬಸ್‌ನಲ್ಲಿ‌ ಆಗಮಿಸಿ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿದರು. ಗಂಗಾವತಿ ನಗರಸಭೆಯ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಮಾಲಾಶ್ರೀ, ಬಿಜೆಪಿಯಿಂದ ಜಯಶ್ರೀ ಅವರು ಉಮೇದುವಾರಿಕೆ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದಲೇ ಸದಸ್ಯೆ ಆಗಿ ಆಯ್ಕೆ ಆಗಿರೋ ಸುಧಾ ಸೋಮನಾಥ ಕಾಂಗ್ರೆಸ್ ನಿಂದ, ಬಿಜೆಪಿಯಿಂದ ಹೀರಾಬಾಯಿ ನಾಮಪತ್ರ ಸಲ್ಲಿಸಿದ್ದರು. ಕಾಂಗ್ರೆಸ್ ನಿಂದ ನಾಮಪತ್ರ ಸಲ್ಲಿಸಿದ್ದ ಮಾಲಾಶ್ರೀ ಅಧ್ಯಕ್ಷೆಯಾಗಿ, ಸುಧಾ ಸೋಮನಾಥ ಉಪಾಧ್ಯಕ್ಷೆಯಾಗಿ ಆಯ್ಕೆಯಾದರು.

ಜಿದ್ದಾಜಿದ್ದಿಯಿಂದ ಕೂಡಿದ್ದ ಗಂಗಾವತಿ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ‌ ಅಧಿಕಾರ ಹಿಡಿಯುವ ವಿಶ್ವಾಸದಲ್ಲಿದ್ದ ಬಿಜೆಪಿಗೆ ಮುಖಭಂಗವಾಗಿದೆ. ಗೆಲ್ಲಬೇಕಿದ್ದರೂ ಸೋಲುವ ಭೀತಿ ಎದುರಿಸಿದ್ದ ಕಾಂಗ್ರೆಸ್ ಕೊನೆಗೂ ಜಯದ ನಗೆ ಬೀರಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗೌರವಿಸುತ್ತೇವೆ. ಪಕ್ಷ ವಿರೋಧಿ ಕೆಲಸ ಮಾಡಿದ ನಗರಸಭೆ ಸದಸ್ಯೆ ಸುಧಾ ಸೋಮನಾಥ ವಿರುದ್ಧ ತಿಂಗಳೊಳಗೆ ಕ್ರಮ ಕೈಗೊಳ್ಳಲು ಪಕ್ಷದ ವರಿಷ್ಠರಿಗೆ ಮನವಿ ಮಾಡಲಾಗುವುದು ಅಂತ ಶಾಸಕ ಪರಣ್ಣ ಮುನವಳ್ಳಿ ಹೇಳಿದ್ರು.

ಗಂಗಾವತಿ ನಗರಸಭೆ ಸುತ್ತ‌ಮುತ್ತ‌ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ನಗರಸಭೆಯ ಕಾಂಗ್ರೆಸ್ ಸದಸ್ಯನ ಅಪಹರಣ ಪ್ರಕರಣದಿಂದಾಗಿ ಸೂಕ್ಷ್ಮ ಪ್ರದೇಶವೆಂದು ಘೋಷಿಸಲಾಗಿದ್ದು, ನಗರಸಭೆಯ ಸುತ್ತಲಿನ 100 ಮೀಟರ್‌ ನಿಷೇಧಾಜ್ಞೆ ಹೊರಡಿಸಲಾಗಿತ್ತು. ಕೊನೆಗೂ ಚುನಾವಣಾ ಪ್ರಕ್ರಿಯೆ ಶಾಂತಿಯುತವಾಗಿ ಮುಗಿದಿದೆ. ಕಿಡ್ನಾಪ್ ಪ್ರಕರಣದಲ್ಲಿ ಡಿಸಿಸಿ ಅದ್ಯಕ್ಷ ಶಿವರಾಜ್ ತಂಗಡಗಿ , ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ನೇರವಾಗಿ ಎಚ್ಚರಿಕೆ ನೀಡಿದ್ದರು. ಕೊನೆಗೂ ಅನ್ಸಾರಿ ಗೆಲುವಿನ ನಗೆ ಬೀರಿದ್ದಾರೆ

Please follow and like us:
error