ಖ್ಯಾತ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಇನ್ನಿಲ್ಲ!


ಕಳೆದ ಆಗಸ್ಟ್ 5 ರಂದು ಸೋಂಕು ದೃಢಪಟ್ಟ ಕಾರಣ ಚೆನ್ನೈನ ಎಂಜಿಎಂ ಆಸ್ಪತ್ರೆಗೆ ದಾಖಲಾಗಿದ್ದರು. ಆರೋಗ್ಯ ಪರಿಸ್ಥಿತಿ ತೀವ್ರವಾಗಿ ಹದಗೆಟ್ಟ ಕಾರಣ ಅವರನ್ನು ಆಗಸ್ಟ್ 13 ರ ರಾತ್ರಿ ಐಸಿಯುಗೆ ಸ್ಥಳಾಂತರಿಸಲಾಗಿತ್ತು.
ಖ್ಯಾತ ಹಿನ್ನೆಲೆ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಇಂದು ಸಾವನ್ನಪ್ಪಿದ್ದಾರೆ. ಎಸ್‌ಪಿಬಿ ಕಳೆದ ಆಗಸ್ಟ್ 5 ರಂದು ಸೋಂಕು ದೃಢಪಟ್ಟ ಕಾರಣ ಚೆನ್ನೈನ ಎಂಜಿಎಂ ಆಸ್ಪತ್ರೆಗೆ ದಾಖಲಾಗಿದ್ದರು. ಆರೋಗ್ಯ ಪರಿಸ್ಥಿತಿ ತೀವ್ರವಾಗಿ ಹದಗೆಟ್ಟ ಕಾರಣ ಅವರನ್ನು ಆಗಸ್ಟ್ 13 ರ ರಾತ್ರಿ ಐಸಿಯುಗೆ ಸ್ಥಳಾಂತರಿಸಲಾಗಿತ್ತು.

ಆಗಸ್ಟ್ 5 ರಂದು ತನಗೆ ಸೋಂಕು ದೃಢಪಟ್ಟಿರುವುದರ ಕುರಿತು ವೀಡಿಯೊವೊಂದನ್ನು ಅಪ್ಲೋಡ್ ಮಾಡಿದ್ದರು.1946ರ ಜೂನ್ 4ರಂದು, ಆಂಧ್ರಪ್ರದೇಶದ ನೆಲ್ಲೂರ್ ಸಮೀಪದ ಕೋನೆತಮ್ಮಪೇಟ ಎನ್ನುವ ಒಂದು ಪುಟ್ಟ ಗ್ರಾಮದಲ್ಲಿ ಹುಟ್ಟಿ, ಭಾರತದ ಶ್ರೇಷ್ಠ ಗಾಯಕರ ಸ್ಥಾನಕ್ಕೇರಿದವರು ಎಸ್.ಪಿ.ಬಾಲಸುಬ್ರಹ್ಮಣ್ಯಂ. ನಾಲ್ಕು ದಶಕಕ್ಕೂ ಹೆಚ್ಚು ಕಾಲದಿಂದ 16 ಭಾಷೆಗಳಲ್ಲಿ 40 ಸಾವಿರಕ್ಕೂ ಹೆಚ್ಚು ಗೀತೆಗಳನ್ನು ಹಾಡಿದ ಹೆಗ್ಗಳಿಕೆ ಈ ಮಹಾನ್ ಗಾಯಕರದ್ದು. ಚಿಕ್ಕಂದಿನಿಂದಲೇ ಸಂಗೀತದ ಕಡೆಗೆ ಆಸಕ್ತಿ ಹೊಂದಿದ್ದರು.ಇಲ್ಲಿಂದ ಆರಂಭವಾದ ಈ ಗೀತಯಾತ್ರೆ ನಾಲ್ಕು ದಶಕಗಳ ಕಾಲ ನಿಲ್ಲದೆ ಸಾಗಿತು. ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ ಭಾಷೆಯ ನೂರಾರು ಚಿತ್ರಗಳಲ್ಲಿ ಎಸ್‌ಪಿಬಿ ಹಾಡಿದರು. ಹೀಗೆ ಅವರು ಹಾಡಿದ ಚಿತ್ರಗೀತೆಗಳ ಸಂಖ್ಯೆ 40 ಸಾವಿರಕ್ಕೂ ಅಧಿಕ. ಶಾಸ್ತ್ರೀಯ ಸಂಗೀತದ ಹಿನ್ನೆಲೆ ಇಲ್ಲದೆಯೇ ಹಿನ್ನೆಲೆ ಗಾಯನದಲ್ಲಿ ಎಸ್‌ಪಿಬಿ ಮಾಡಿದ ಸಾಧನೆ ನೋಡಿ ಇಡೀ ಚಿತ್ರರಂಗವೇ ಬೆರಗಾಯಿತು. ತಮಿಳಿನಲ್ಲಿ ಎಂ.ಎಸ್.ವಿಶ್ವನಾಥನ್, ಕನ್ನಡದಲ್ಲಿ ಜಿ.ಕೆ.ವೆಂಕಟೇಶ್ ಎಸ್‌ಪಿಬಿ ಸಾಮರ್ಥ್ಯವನ್ನರಿತು ಬೆನ್ನು ತಟ್ಟಿದರು. ಮಲಯಾಳಂ ಖ್ಯಾತ ಹಿನ್ನೆಲೆ ಗಾಯಕ ಜೇಸುದಾಸ್, “ನಿನಗೆ ಶಾಸ್ತ್ರೀಯ ಸಂಗೀತ ಗೊತ್ತಿಲ್ಲದಿದ್ದರೇನಂತೆ, ಸಂಗೀತಕ್ಕೆ ನೀನ್ಯಾರೆಂದು ಗೊತ್ತು. ನೀನು ಹಾಡುತ್ತಿರು” ಎಂದು ಧೈರ್ಯ ತುಂಬಿದ್ದರು.

ತೆಲುಗು ಚಿತ್ರಪ್ರೇಮಿಗಳಿಗೆ ಇವರ ಪರಿಚಯವಾಗುವ ಹೊತ್ತಿಗೆ ಇತರೆ ಭಾಷೆಗಳಿಂದಲೂ ಆಹ್ವಾನ ಬಂದವು. ಕನ್ನಡದಲ್ಲಿ ಎಸ್‌ಪಿಬಿ ಹಲವು ಚಿತ್ರಗಳಲ್ಲಿ ಹಾಡಿದರು. ನಟಿಸಿದರೂ ಕೂಡ. ತಿರುಗುಬಾಣ, ಬಾಳೊಂದು ಚದುರಂಗ ಸೇರಿದಂತೆ ಹತ್ತು ಹಲವು ಚಿತ್ರಗಳಿಗೆ ಹಾಡಿದರು. ಗಾನಯೋಗಿ ಪಂಚಾಕ್ಷರಿ ಗವಾಯಿ ಚಿತ್ರದಲ್ಲಿ ಇವರು ಹಾಡಿದ  “ಉಮಂಡು, ಘುಮಂಡು” ಹಿನ್ನೆಲೆಯ ಗೀತೆಗೆ ರಾಷ್ಟ್ರ ಪ್ರಶಸ್ತಿಯೂ ಬಂತು. ಇದೇ ರೀತಿಯಲ್ಲಿ ಎಸ್ಪಿಬಿ ಹಿಂದಿ ಚಿತ್ರರಂಗದಲ್ಲೂ ತಮ್ಮ ಗಾಯನ ಪ್ರತಿಭೆ ಪ್ರದರ್ಶಿಸುವ ಅವಕಾಶ ಲಭಿಸಿತು. ನಂತರ ಒಂದು ದಶಕದ ಅವಧಿಯಲ್ಲಿ  ಹತ್ತಾರು ಚಿತ್ರಗಳಲ್ಲಿ ಹಾಡಿ ಎಸ್‌ಪಿಬಿ ಹಿಂದಿ ಚಿತ್ರಪ್ರೇಮಿಗಳ ಹೃದಯ ಗೆದ್ದರು.

Please follow and like us:
error