ಖಾಲಿ‌ ಇರುವ ಉಪನ್ಯಾಸಕರ ಹುದ್ದೆ ಭರ್ತಿ ಮಾಡಲು ಮನವಿ

ಕೊಪ್ಪಳ : ಬಾಲಕಿಯರ ಪದವಿ ಪೂರ್ವ ಕಾಲೇಜಿಗೆ 11 ವಿಷಯವಾರು ಉಪನ್ಯಾಸಕರ ಹುದ್ದೆಗಳು ಮತ್ತು 4 ಸಿಬ್ಬಂದಿಗಳ ಹುದ್ದೆಗಳು ಸುಮಾರು ವರ್ಷಗಳಿಂದ ಖಾಲಿ ಇದ್ದು ಅವುಗಳನ್ನು ಮಂಜೂರು ಮಾಡಲು ಶಾಲಾ ಅಭಿವೃದ್ದಿ ಸಮಿತಿ ಸದಸ್ಯರು ಮನವಿ ಮಾಡಿದ್ದಾರೆ

ಹೈದ್ರಾಬಾದ್ ಕರ್ನಾಟಕದ ಅತೀ ಹಿಂದುಳಿದ ಜಿಲ್ಲೆಯಾದ ಕೊಪ್ಪಳ ಜಿಲ್ಲೆಯಲ್ಲಿ ಇರುವ ಸರಕಾರಿ ಬಾಲಕೀಯರ ಪದವಿ ಪೂರ್ವ ಕಾಲೇಜಿನಲ್ಲಿ ಸುಮಾರು ವರ್ಷಗಳಿಂದ ಸುಮಾರು 11ವಿಷಯವಾರು ಉಪನ್ಯಾಸಕರ ಹುದ್ದೆಗಳು ಖಾಲಿ ಇದ್ದು ಮತ್ತು 4 ಜನ ಕಚೇರಿಯ ಸಿಬ್ಬಂದಿಗಳ ಹುದ್ದೆಗಳು ಖಾಲಿ ಇರುತ್ತವೆ…ಇದರಿಂದ ವಿಷಯವಾರು ಹುದ್ದೆಗಳು ಖಾಲಿ ಇರುವುದರಿಂದ ಇಲ್ಲಿರುವ ಬಡ ವಿಧ್ಯಾರ್ಥಿಗಳ ಕಲಿಕೆಯ ಬವಿಷ್ಯಕ್ಕೆ ಬಹಳ ತೊಂದರೆಯಾಗುತ್ತಿದೆ.21 ಜನ ಉಪನ್ಯಾಷಕರ ಹುದ್ದೆಯ ಪೈಕಿ 8 ಜನ ಉಪಾನ್ಯಸಕರು ಮಾತ್ರ ಕಾರ್ಯನಿರ್ವಹಿಸುತ್ತಿದ್ದು ಉಳಿದ ಎಲ್ಲಾ ವಿಷಯಗಳ ಉಪನ್ಯಾಸಕ ಹುದ್ದೆಗಳು ಖಾಲಿ ಇವೆ, ಈ ಸರಕಾರಿ ಬಾಲಕೀಯರ ಕಾಲೇಜಿನಲ್ಲಿ ಹೆಚ್ಚಾಗಿ ಗ್ರಾಮೀಣ ಪ್ರದೇಶದಿಂದ ಪ್ರತಿಭಾವಂತ ಬಡ ವಿದ್ಯಾರ್ಥಿಗಳು ಇದ್ದು ಇವರಿಗೆ ಎಲ್ಲಾ ವಿಷಯವಾರು ತರಗತಿಗಳ ಬೋದಣೆ ಕೊರತೆಯಿಂದ ಉನ್ನತ ಶಿಕ್ಷಣ ಮಾಡಲಿಕ್ಕೆ ತೊಂದರೆಯಾಗುತ್ತಿದೆ,ಶೀಘ್ರವೇ ಹುದ್ದೆಗಳನ್ನು ಭರ್ತಿ ಮಾಡಬೇಕೆಂದು
ಮಲ್ಲಿಕಾರ್ಜುನ ಪೂಜಾರ
ಶಾಲಾ ಅಭಿವೃದ್ದಿ ಸಮಿತಿ ಸದಸ್ಯರು
ಸರಕಾರಿ ಬಾಲಕೀಯರ ಪದವಿ ಪೂರ್ವ ಕಾಲೇಜ್ ಮನವಿ ಮಾಡಿದ್ದಾರೆ

Please follow and like us:
error