fbpx

ಕ್ಷೌರಿಕರು, ಅಗಸರಿಗೆ ಪರಿಹಾರ
ಸರ್ಕಾರದ ಸಹಾಯಧನ ಪಡೆಯಲು ಲೈಸನ್ಸ್ ಅಗತ್ಯವಿಲ್ಲ : A. ಶಿವರಾಮ ಹೆಬ್ಬಾರ

ಲಾಕ್‌ಡೌನ್ :
ಕೊಪ್ಪಳ ಜು): ಕೋವಿಡ್-19 ಹಿನ್ನೆಲೆ ಲಾಕ್‌ಡೌನ್‌ನಿಂದಾಗಿ ಸಂಕಷ್ಟಕ್ಕೊಳಗಾದ ಕ್ಷೌರಿಕರು ಹಾಗೂ ಅಗಸರಿಗೆ ಪರಿಹಾರದ ರೂಪವಾಗಿ ಸರ್ಕಾರದಿಂದ ಸಹಾಯಧನ ನೀಡಲಾಗುತ್ತಿದ್ದು, ಇದಕ್ಕಾಗಿ ಲೈಸನ್ಸ್ನ ಅವಶ್ಯಕತೆ ಇರುವುದಿಲ್ಲ ಎಂದು ಕರ್ನಾಟಕ ಸರ್ಕಾರದ ಕಾರ್ಮಿಕ ಮತ್ತು ಸಕ್ಕರೆ ಸಚಿವರಾದ ಅರಬೈಲ್ ಶಿವರಾಮ ಹೆಬ್ಬಾರ ಅವರು ಹೇಳಿದರು.  
ಅವರು ಗುರುವಾರದಂದು (ಜುಲೈ.30) ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾರ್ಮಿಕ ಸಂಘಟನೆಯೊAದಿಗೆ ಚರ್ಚೆ ಹಾಗೂ ಕಾರ್ಮಿಕ ಇಲಾಖೆಗೆ ಸಂಬAಧಿಸಿದ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.  
ಕ್ಷೌರಿಕ ಹಾಗೂ ಅಗಸರು ಗ್ರಾಮೀಣ ಪ್ರದೇದವರಾಗಿದ್ದರೆ ಪಿಡಿಒಗಳ ಮತ್ತು ನಗರ ಪ್ರದೇಶದವರಾಗಿದ್ದರೆ ಸಂಬAಧಿಸಿ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕರಿಗಳಿಂದ ಅಗತ್ಯವಾದ ಪ್ರಮಾಣ ಪತ್ರ ಪಡೆದರೆ ಸಾಕು ಅರ್ಜಿ ಸಲ್ಲಿಸಬಹುದು.  ಅದಕ್ಕಾಗಿ ಇದರ ಅವಧಿಯನ್ನು ಮೂರನೆ ಬಾರಿಗೆ ವಿಸ್ತರಿಸಿದ್ದು, ಇದು ಕೊನೆಯ ಕಾಲಾವಕಾಶವಗಿರುವುದರಿಂದ ಆಗಸ್ಟ್. 15 ರೊಳಗಾಗಿ ಅರ್ಜಿ ಸಲ್ಲಿಸಿ ಸಹಾಯಧನ ಸೌಲಭ್ಯ ಪಡೆಯಬಹುದಾಗಿದೆ.  ಕ್ಷೌರಿಕರು ಹಾಗೂ ಅಗಸರಿಗಾಗಿ ರಾಜ್ಯದಲ್ಲಿ ಒಟ್ಟು 3 ಲಕ್ಷ ಫಲಾನುಭವಿಗಳ ಗುರಿ ಹೊಂದಿದ್ದು, ಇದಕ್ಕಾಗಿ 150 ಕೋಟಿ ಹಣವನ್ನು  ಮೀಸಲಿಡಲಾಗಿದೆ.  ಕೊಪ್ಪಳ ಜಿಲ್ಲೆಯಲ್ಲಿ 691 ಕ್ಷೌರಿಕರು ಹಾಗೂ ಅಗಸ ವೃತ್ತಿಯ ಫಲಾನುಭವಿಗಳಿಗೆ ಸಹಾಯಧನ ಮಂಜೂರಾತಿಗೆ ಅನುಮೊದನೆ ನೀಡಲಾಗಿದ್ದು, ಇನ್ನುಳಿದ ಅರ್ಹ ಫಲಾನುಭವಿಗಳು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ, ಸಹಾಯಧನ ಸೌಲಭ್ಯವನ್ನು ಪಡೆದುಕೊಳ್ಳಬೇಕು ಎಂದರು.  
ಕಾರ್ಮಿ ಇಲಾಖೆಯ ಅಧಿಕಾರಿಗಳು ಹಳೇಯ ಆಲಸ್ಯತನ ಬಿಟ್ಟು ಇಲಾಖೆಯ ಕಾರ್ಮಿಕರ ರಕ್ಷಣೆ ಮತ್ತು ಅವರ ಅಭಿವೃದ್ಧಿಗೆ ಶ್ರಮೀಸಬೇಕು.  ನಮ್ಮ ಇಲಾಖೆಯ ಮುಖ್ಯ ಗುರಿ ಕಾರ್ಮಿಕರ ಕಲ್ಯಾಣವಾಗಿದೆ ಹೊರತು ಉದ್ದಿಮೆಗಳದ್ದಲ್ಲ.  ಕಾರ್ಮಿಕರ ಕಲ್ಯಾಣಕ್ಕಾಗಿ ಅವರು ಕೆಲಸ ಮಾಡುವ ಉದ್ದಿಮೆಗಳಲ್ಲಿ ಹಲವಾರು ನಿಯಮಗಳನ್ನು ಜಾರಿಗೆ ತಂದಿದ್ದು, ಅವುಗಳ ಅನುಷ್ಠಾನವಾಗುವಂತೆ ನೋಡಿಕೊಳ್ಳಬೇಕು.  ಹೊಸಪೇಟೆ, ಬಳ್ಳಾರಿ, ಕೊಪ್ಪಳ, ಈ ಭಾಗದಲ್ಲಿ ಹೆಚ್ಚಿನ ಉದ್ದಿಮೆಗಳಿದ್ದು, ಇಲ್ಲಿ ಇ.ಎಸ್.ಐ ಆಸ್ಪತ್ರೆಯ ಅವಶ್ಯಕತೆ ಇದೆ.  ಈ ಭಾಗದ ಸಂಸದರೊAದಿಗೆ ಸೇರಿ ಆದಷ್ಟು ಬೇಗನೆ ಈ ಕುರಿತು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.
       ಕಾರ್ಮಿಕ ಇಲಾಖೆಯ ಅಭಿವೃದ್ಧಿಗೆ ಮುಂದಿನ ದಿನಗಳಲ್ಲಿ ಮೂರು-ನಾಲ್ಕು ತಿದ್ದುಪಡಿಗಳನ್ನು ತಂದು ಅದರಲ್ಲಿರುವ ಲೋಪದೋಷಗಳನ್ನು ಸರಿಪಡಿಸಲಾಗುವುದು.  ಅಪಘಾತದಲ್ಲಿ ಮೃತಪಟ್ಟ ಕಾರ್ಮಿಕರಿಗೆ ಈ ಹಿಂದೆ ರೂ. 2 ಲಕ್ಷ ಪರಿಹಾರಧನ ನೀಡಲಾಗುತ್ತಿದ್ದು, ಅದನ್ನು ರೂ. 5 ಲಕ್ಷಕ್ಕೆ ಹೆಚ್ಚಿಸಲಾಗಿದೆ.  ಅಲ್ಲದೇ ಲಾಕ್‌ಡೌನ್ ಜಾರಿಯಾದ ಹಿನ್ನೆಲೆ ಕಾರ್ಮಿಕ ರಕ್ಷಣೆಗಾಗಿ ಪ್ರತಿ ಜಿಲ್ಲೆಗೆ ರೂ. 15 ಲಕ್ಷಗಳನ್ನು ನೀಡಲಾಗಿದೆ.  ಇ.ಎಸ್.ಐ. ಆಸ್ಪತ್ರೆಗಳಲ್ಲಿ ಖಾಲಿ ಇರುವ ವೈದ್ಯರ ಹುದ್ದೆಗಳ ಪೈಕಿ 146 ವೈದ್ಯಾಧಿಕಾರಿಗಳನ್ನು ನೇಮಕಾತಿ ಮಾಡಲಾಗಿದ್ದು, ಉತ್ತರ ಕರ್ನಾಟಕ ಭಾಗದ ಯಾವುದೇ ಇ.ಎಸ್.ಐ ಆಸ್ಯತ್ರಗಳಲ್ಲಿ ವೈದ್ಯರ ಕೊರತೆಯಾಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ.  ಕಾರ್ಮಿಕ ಇಲಾಖೆ ವತಿಯಿಂದ ನೀಡುವ ಕಾರ್ಮಿಕ ಕಾರ್ಡ್ನ್ನು ಮೂರು ವರ್ಷಕ್ಕೊಮ್ಮೆ ನವೀಕರಣ ಮಾಡಿಕೊಳ್ಳಬೇಕು.  ಆದರೆ ಕೋವಿಡ್-19 ಹಿನ್ನೆಲೆಯಲ್ಲಿ ನವೀಕರಣ ಮಾಡದ ಎಲ್ಲಾ ಕಟ್ಟಡ  ಕಾರ್ಮಿಕರಿಗೂ ಸಹಯಧನವನ್ನು ನೀಡಲಾಗುತ್ತಿದೆ ಎಂದರು.  
ಕಾರ್ಮಿಕರು ಅರ್ಜಿ ಸಲ್ಲಿಸುವ ಪ್ರಕ್ರಿಯೆಗೆ ಸಂಬAಧಿಸಿದAತೆ ಸೇವಾ ಸಿಂಧು ಆ್ಯಪ್ ಬಳಕೆಯಲ್ಲಿ ಕೆಲ ಲೋಪದೋಷಗಳು ಕಂಡು ಬರುತ್ತಿದ್ದು, ಆ್ಯಪ್ ಬಳಕೆಯಲ್ಲಿ ಯಾವುದೇ ರೀತಿಯಾ ತೊಂದರೆ ಆಗದಂತೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗುತ್ತಿದೆ.  ಕಾರ್ಮಿಕ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿ ಮತ್ತು ಜಿ.ಪಂ. ಸಿಇಒ ಸೇರಿ ಫಲಾನುಭವಿಗಳ ಮಾಹಿತಿ ಪಟ್ಟಿ ಕುರಿತು ಸಭೆ ಮಾಡಿ ತಕ್ಷಣ ಅಂತಿಮ ಪಟ್ಟಿಯನ್ನು ರಚಿಸಿ, ಕಾರ್ಮಿಕ ಇಲಾಖೆಗೆ ರವಾನಿಸಬೇಕು ಎಂದು ಸೂಚನೆ ನೀಡಿದರು.  
ಸಂಸದ ಸಂಗಣ್ಣ ಕರಡಿ ಮಾತನಾಡಿ, ಜಿಲ್ಲಾ ಕಾರ್ಮಿಕರ ಕುರಿತು ನಿಖರ ಮಾಹಿತಿ ನೀಡಿ, ಇನ್ನೂಳಿದ ಫಲಾನುಭವಿಗಳಿಗೆ ಶಿಘ್ರವಾಗಿ ಪರಿಹಾರವನ್ನು ನೀಡುವ ಕಾಯಕದಲ್ಲಿ ನಿರತರಾಗಬೇಕು ಎಂದು ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಾಪುರ ಮಾತನಾಡಿ, ಜಿಲ್ಲೆಯಲ್ಲಿರುವ ಸಂಘಟಿತ ಕಾರ್ಮಿಕರು ದುಡಿಯಲು ಹೊರನಗರಗಳಿಗೆ ಹೋಗಿದ್ದು, ಕೋವಿಡ್-19 ಹಿನ್ನಲೆಯಲ್ಲಿ ತಮ್ಮ ಸ್ವಂತ ನಿವಾಸಗಳಿಗೆ ಆಗಮಿಸಿದ್ದು, ಅವರಿಗೂ ಸಹ ಪರಿಹಾರ ಧನವನ್ನು ನೀಡಬೇಕೆಂದು ಸಚಿವರಿಗೆ ಮನವಿ ಮಾಡಿದರು.   ಕಾರ್ಮಿಕರಿಗೆ ಕೋವಿಡ್-19 ಕುರಿತು ಜಾಗೃತಿ ಮೂಡಿಸುವುದರ ಜೊತೆಗೆ ಮಾಸ್ಕ್, ಸ್ಯಾನಿಟೈಸರ್ ನೀಡಬೇಕು ಎಂದು ಹೇಳಿದರು.  
ಕನಕಗಿರಿ ಶಾಸಕ ಬಸವರಾಜ ದಢೇಸೂಗೂರ್, ಜಿಲ್ಲಾಧಿಕಾರಿ ಸುರಳ್ಕರ್ ವಿಕಾಸ್ ಕಿಶೋರ್, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಘುನಂದನ್ ಮೂರ್ತಿ, ಅಪರ ಜಿಲ್ಲಾಧಿಕಾರಿ ಎಂ.ಪಿ ಮಾರುತಿ, ಹಾಗೂ ಕಲಬುರಗಿ ವಿಭಾಗದ ಉಪ ಕಾರ್ಮಿಕ ಆಯುಕ್ತ ಡಾ. ಗಿರೀಶ್ ಪಾಟೀಲ್, ಜಿಲ್ಲಾ ಕಾರ್ಮಿಕಾಧಿಕಾರಿ ವೀಣಾ ಮಾಸ್ತಿ, ಕಾರ್ಖಾನೆ ಮತ್ತು ಬ್ಯೆöÊಲರ್ ಇಲಾಖೆಯ ಜಂಟಿ ನಿರ್ದೇಶಕ ರವೀಂದ್ರನಾಥ ರಾಥೋಟ್, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ನಿರ್ದೇಶಕ ಬಸವರಾಜ ಹಿರೇಗೌಡ್ರ, ಕಾರ್ಮಿಕ ನಿರೀಕ್ಷಕರಾದ ಕೊಪ್ಪಳ ಶಿವಶಂಕರ ತಳವಾರ, ಗಂಗಾವತಿಯ ಅಶೋಕ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿರಿದ್ದರು.    

Please follow and like us:
error
error: Content is protected !!