ಕ್ಷಯರೋಗಿಗಳ ಪತ್ತೆಹಚ್ಚಿ ಕರೆತನ್ನಿ 500 ರೂ ಪಡೆಯಿರಿ!

ಕೊಪ್ಪಳದಲ್ಲಿ ಕ್ಷಯರೋಗ ನಿಯಂತ್ರಣಗೊಳಿಸಲು ಜಿಲ್ಲಾ ಆರೋಗ್ಯ ಇಲಾಖೆ ಹೊಸ ಐಡಿಯಾ

ಕೊಪ್ಪಳ ಜಿಲ್ಲೆ ಕ್ಷಯರೋಗದಲ್ಲಿ ರಾಜ್ಯದಲ್ಲಿ ಮೂರನೇ ಸ್ಥಾನದಲ್ಲಿದೆ. ಜಿಲ್ಲೆಯಲ್ಲಿ ಒಟ್ಟು 3027 ಕ್ಷಯರೋಗಿಗಳು ಇದ್ದಾರೆ ಕೊಪ್ಪಳ 794 ಹಾಗೂ ಗಂಗಾವತಿಯಲ್ಲಿ 596 ಜನರಲ್ಲಿ ಕ್ಷಯರೋಗಿಗಳಿದ್ದಾರೆ. ಅದರಲ್ಲೂ ಗ್ರಾಮೀಣ ಭಾಗದಲ್ಲಿ ಕ್ಷಯರೋಗಿಗಳಿದ್ದಾರೆ ಎನ್ನುವ ಮಾಹಿತಿಯನ್ನು ಆರೋಗ್ಯಾಧಿಕಾರಿ ಡಾ. ಮಹೇಶ ಕುಮಾರ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ 25379 ಸಂಶಯಾಸ್ಪದ ಕ್ಷಯರೋಗಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಅದರಲ್ಲೂ ಹೆಚ್ ಐ ವಿ ರೋಗಿಗಳಲ್ಲಿ 196, ಮಧುಮೇಹ 288, 533 ತಂಬಾಕು ಸೇವನೆ ಮಾಡಿದ ಕ್ಷಯರೋಗಿಗಳಿದ್ದಾರೆ. ಇನ್ನಷ್ಟು ಜಾಗೃತಿ ಮೂಡಿಸಲು ಹಾಗೂ ಸಂಶಯಾಸ್ಪದ ಕ್ಷಯರೋಗಿಗಳನ್ನು ಪತ್ತೆಹಚ್ಚಿ ಯಾರಾದ್ರೂ ಕರೆತಂದ್ರೆ ಕ್ಷಯರೋಗ ನಿರ್ಮೂಲನಾ, ಕೇಂದ್ರದಲ್ಲಿ ಬೇಡಿಕೆ ಮತ್ತು ಪೂರೈಕ ನಿರ್ವಾಹಣ ಘಟಕದಿಂದ 500 ರೂಪಾಯಿ ಸಹಾಯಧನ ನೀಡಲಾಗುತ್ತದೆ, ಅಲ್ದೆ ಟಿಬಿ ಸ್ವಯಂ ಸೇವಕರಿಗೆ 1000 ರೂಪಾಯಿ ಹಾಗೂ ಖಾಸಗಿ ವೈದ್ಯರಿಗೆ 1000 ನೀಡಲಾಗುತ್ತದೆ ಅಂತಾ ಆರೋಗ್ಯಾಧಿಕಾರಿ ತಿಳಿಸಿದ್ದಾರೆ. ಅಲ್ದೆ ನಿಕ್ಷಯ್ ಪೋಷಣಾ ಯೋಜನೆಯಡಿ ಪತ್ತೆಯಾದ ಕ್ಷಯರೋಗಿಗಳಿಗೆ ಪ್ರತಿ ತಿಂಗಳು 500 ರೂಪಾಯಿ ಪೌಷ್ಠಿಕ ಆಹಾರಕ್ಕಾಗಿ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

Please follow and like us:
error