ಕ್ರಾಂತಿಕಾರಿ ಸ್ವಾತಂತ್ರ್ಯಯೋಧ ಅಷ್ಫಾಖುಲ್ಲಾಖಾನ್ ಜನ್ಮದಿನಾಚರಣೆ

ಕೊಪ್ಪಳ : ಕ್ರಾಂತಿಕಾರಿ ಸ್ವಾತಂತ್ರ ಹೋರಾಟಗಾರ ೨೭ನೆ ವಯಸ್ಸಿಗೆ ಬ್ರಿಟಿಷ್ ನೇಣಿಗೆ ಕೊರಳೊಡ್ಡಿದ ಕ್ರಾಂತಿಕಾರಿ ಸ್ವಾತಂತ್ರ್ಯಯೋಧ ಅಷ್ಫಾಖುಲ್ಲಾ ಖಾನ್ ಜನ್ಮದಿನಾಚರಣೆಯನ್ನು ಕೊಪ್ಪಳದಲ್ಲಿ ಅರ್ಥಪೂರ್ಣವಾಗಿ ಸರಳವಾಗಿ ಆಚರಿಸಲಾಯಿತು.  ನಗರದ ಶಾದಿ ಮಹಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಷ್ಫಾಖುಲ್ಲಾ ಖಾನ್ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. 

ಈ ಸಂದರ್ಭದಲ್ಲಿ ಮಾತನಾಡಿದ ಪತ್ರಕರ್ತ ಸಿರಾಜ್ ಬಿಸರಳ್ಳಿ  ಒಕ್ಕಣ್ಣಿನ ಇತಿಹಾಸಕಾರರು ಬರೆದ ಇತಿಹಾಸದಲ್ಲಿ ಇಂತಹ ಕ್ರಾಂತಿಕಾರಿ ತ್ಯಾಗಿಗಳ ವೀರರ ಇತಿಹಾಸವನ್ನೇ ಮರೆಮಾಚಲಾಗಿದೆ.  ಶತಮಾನಗಳ ಕಾಲ ದೇಶವನ್ನು ಆಳಿದ ಸಮುದಾಯದ ತ್ಯಾಗ ಬಲಿದಾನ ಶೌರ್ಯವನ್ನು ಮರೆಮಾಚಲಾಗುತ್ತಿದೆ. ಇಂದಿನ ಜನಾಂಗಕ್ಕೆ ನಿಜ ಇತಿಹಾಸವೇ ಗೊತ್ತಿಲ್ಲ. ಅಂತಹ ಮರೆಮಾಚಲಾದ ಇತಿಹಾಸದ ಸ್ವಾತಂತ್ರ್ಯದ ಹೋರಾಟಗಾರನೇ ಕ್ರಾಂತಿಕಾರಿ ವೀರನೇ ಅಷ್ಫಾಖುಲ್ಲಾ ಖಾನ್ ಅಂತವರ ಜೀವನ ಸಾಧನೆ ತ್ಯಾಗ ಜೀವನ ಎಲ್ಲರಿಗೂ ಮಾದರಿಯಾಗುವಂಥಹದ್ದು. ಇಂತಹ ವೀರನಿಗೆ ಗೌರವ ನೀಡುವ ಕೆಲಸವಾಗಬೇಕಿದೆ. ಮುಂದಿನ ದಿನಗಳಲ್ಲಿ ಹೆಚ್ಚು ಹೆಚ್ಚು ಕಾರ್ಯಕ್ರಮಗಳು ನಡೆಯಬೇಕು. ಕೊಪ್ಪಳದ ಗೆಳೆಯರು ಹಮ್ಮಿಕೊಂಡಿರುವ ಈ ಕಾರ್ಯಕ್ರಮ ಶ್ಲಾಘನೀಯವಾದದ್ದು ಎಂದು ಹೇಳಿ ಅಷ್ಫಾಖುಲ್ಲಾ ಖಾನ್ ರ ಜೀವನದ ಬಗ್ಗೆ ಮಾತನಾಡಿದರು. 

ಈ ಸಂದರ್ಭದಲ್ಲಿ  ಮೈಲೈಕ್ ಜಿಲಾನ್,  ಪೀರಸಾಬ. ಬೆಳಗಟ್ಟಿ,  ಸೈಯದ್ ನಾಸೀರ್, ಸಮೀರ್ ಹುಸೇನಿ,  ಅಜರುದ್ದೀನ್,  ರಾಜಾಬಕ್ಷಿ ಎಚ್.ವಿ., ರಾಜು ಬಿ.ಆರ್,  ಸಯೈದ್ ಅಸೀಪ್ ಹುಸೇನಿ, ಸದ್ದಾಂ ಖಾಜಿ, ಸೈಯದ ಮಹ್ಮದ್ ಹುಸೇನಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Please follow and like us:
error