ಕ್ರಾಂತಿಕಾರಿ,ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ರವರ 113 ನೇ ಜನ್ಮದಿನ ಆಚರಣೆ

ಗಂಗಾವತಿ: ನಗರದ ಸಿಬಿಎಸ್ ಸರ್ಕಲ್ ನಲ್ಲಿ ನಿನ್ಮೆ ಎಸ್ಎಫ್ಐ ಸಂಘಟನೆಯ ನೇತೃತ್ವದಲ್ಲಿ ಭಗತ್ ಸಿಂಗ್ ಜನ್ಮದಿನಾಚರಣೆ ಆಚರಣೆ ಮಾಡಲಾಯಿತು, ಈ ಸಂದರ್ಭದಲ್ಲಿ ಎಸ್ಎಫ್ಐನ ರಾಜ್ಯಾಧ್ಯಕ್ಷ ಅಮರೇಶ ಕಡಗದ ಮಾತನಾಡಿ ಭಗತ್ ಸಿಂಗ್ ಅವರ ಹಲವು ವಿಚಾರಗಳು ಒಂದು ಸಮಕಾಲೀನ ಪ್ರಸ್ತುತತೆ ಮತ್ತು ತುರ್ತಿನಿಂದ ಮಾರ್ದನಿ ಗೊಳ್ಳುತ್ತವೆ, ತಮ್ಮ 23 ವರ್ಷಗಳ ಅವಧಿಯಲ್ಲಿ ಅವರು ಬ್ರಿಟಿಷ್ ಸರ್ಕಾರಕ್ಕೆ ಸಿಂಹಸ್ವಪ್ನವಾಗಿದ್ದರು ಅಲ್ಲದೆ ದೇಶಾದ್ಯಂತ ಅನೇಕ ಕ್ರಾಂತಿಕಾರಿ ಹೋರಾಟಗಳನ್ನು ಮಾಡಿದ್ದಾರೆ ಹೋರಾಟದ ಮಧ್ಯೆಯೂ ಅವರು ರಚಿಸಿದ ಕೃತಿಗಳು ನಮ್ಮನ್ನು ಇಂದಿಗೂ ಮಾನವ ಜೀವನದ ಎಲ್ಲಾ ಆಯಾಮಗಳ ಕುರಿತು ಹಲವಾರು ಪ್ರಶ್ನೆಗಳ ಮೇಲೆ ಅವರು ದಿಗ್ಬ್ರಮೆ ಗೊಳ್ಳುವಂತೆ ಬರೆದಿದ್ದಾರೆ. ತಮ್ಮ ಕ್ರಾಂತಿಕಾರಿ ಚಟುವಟಿಕೆಗಳ ಮಧ್ಯೆಯೂ ಸಮಯ ಬಿಡುವು ಮಾಡಿಕೊಂಡು ಅವರು ಬಹಳಷ್ಟು ಓದುತ್ತಿದ್ದರು ಹಾಗೂ ವಿಶ್ವದ ಬಹುತೇಕ ಬರಹಗಾರರು ಮತ್ತು ಕವಿಗಳಿಂದ ಸ್ಫೂರ್ತಿ ಪಡೆದಿದ್ದರು.
ಇಂದು ಭಾರತದ ಸಂಸತ್ ಆಗಿರುವ, ಅಂದಿನ ದೆಹಲಿ ಕೇಂದ್ರೀಯ ಅಸೆಂಬ್ಲಿಯಲ್ಲಿ ಅಂದಿನ ಬ್ರಿಟಿಷ್ ಸರ್ಕಾರ ಜಾರಿ ಮಾಡಲು ಹೊರಟಿದ್ದ ಕಾರ್ಮಿಕರ ಕಾಯ್ದೆ ವಿರೋಧಿಸಿ ಎಪ್ರಿಲ್ 8, 1929 ರಂದು ಹಾನಿಕಾರಕವಲ್ಲದ ಬಾಂಬ್ ಎಸೆದು ಬ್ರಿಟಿಷ್ ಸರ್ಕಾರಕ್ಕೆ ಎಚ್ಚರಿಕೆ ನೀಡಿ ಸ್ವಾತಂತ್ರ್ಯದ ಹೋರಾಟಕ್ಕಾಗಿ ಬಂಧನಕ್ಕೆ ಒಳಗಾಗಿದ್ದು ದೇಶದ ಮತ್ತು ವಿಶ್ವದ ಗಮನ ಸೆಳೆದಿತ್ತು ಇಂದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ರೈತ ಕಾರ್ಮಿಕರ ವಿರೋಧಿ ಮಸೂದೆಗಳನ್ನು ಜಾರಿ ಮಾಡಲು ಹೊರಟಿರುವುದನ್ನು ಹೋರಾಟದ ಮೂಲಕ ಎದುರಿಸಬೇಕು ಆಗಿದೆ ಎಂದರು.
ಕ್ರಾಂತಿ ಅಂದರೆ ರಕ್ತಪಾತ ಪೂರ್ಣ ಕಲಹವನ್ನು ಹೊಂದಿರಬೇಕು ಎಂದುನಿಲ್ಲ ಅದರಲ್ಲಿ ವೈಯಕ್ತಿಕ ದ್ವೇಷ ಅಸೂಯೆಗಳಿಗೆ ಜಾಗವಿಲ್ಲ ಇದು ಬಾಂಬ್ ಮತ್ತು ಪಿಸ್ತೂಲುಪಿಸ್ತೂಲಿನ ಪಂಥ ವಲ್ಲ, ಕ್ರಾಂತಿಯೆಂದರೆ ಎದ್ದುಕಾಣುವ ಅನ್ಯಾಯವನ್ನು ಒಳಗೊಂಡಿರುವ ಪ್ರಸಕ್ತ ವ್ಯವಸ್ಥೆ ಬದಲಾಗಬೇಕು ಎಂದು ನಮ್ಮ ಅರ್ಥ ಎಂದರು.
ಈ ಸಂದರ್ಭದಲ್ಲಿ Sfi ತಾಲೂಕ ಅಧ್ಯಕ್ಷ ಗ್ಯಾನೇಶ ಕಡಗದ,ಕಾರ್ಯದರ್ಶಿ ಶಿವಕುಮಾರ, ಹನುಮೇಶ, ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ G.ನಾಗರಾಜ, CITU ಜಿಲ್ಲಾ ಅಧ್ಯಕ್ಷ ನಿರುಪಾಧಿ ಬೆಣಕಲ್,ದಲಿತ ಸಂಘಟನೆ ಮುಖಂಡರಾದ ತಿಪ್ಪಣ್ಣ ಆರತಿ,ವಕೀಲರಾದ ಶರಣೇಗೌಡ, ಕಾಂಗ್ರೆಸ್ ಮುಖಂಡರಾದ ರುದ್ರೇಶ ಡ್ಯಾಗಿ, ಬಾಳಪ್ಪ ಹುಲಿಹೈದರ,ಮಂಜುನಾಥ ಡಗ್ಗಿ,ಇತರರು ಇದ್ದರು

Please follow and like us:
error