ಕ್ಯಾಮರಾಮೆನ್ ಬಸವರಾಜ ಕೋಟಿ, ಆಯುಕ್ತ ಕೆವಿಆರ್ ಠ್ಯಾಗೂರ್ ನಿಧನ : ಕೆಯುಡಬ್ಲ್ಯೂಜೆ ಸಂತಾಪ

ನಿವೃತ್ತ ವಾರ್ತಾ ಇಲಾಖೆಯ ಆಯುಕ್ತ ಕೆವಿಆರ್ ಠ್ಯಾಗೂರ್
ಕೋವಿಡ್ ಗೆ ಬಲಿಯಾಗಿದ್ದಾರೆ.

ಸದಾ ಲವಲವಿಕೆಯಿಂದ ಇರುತ್ತಿದ್ದ ಕ್ರಿಯಾಶೀಲವಾಗಿದ್ದ ಠ್ಯಾಗೂರ್,
ವಾರ್ತಾ ಇಲಾಖೆಯ ಆಯುಕ್ತರಾಗಿ ಸೇವೆ ಸಲ್ಲಿಸಿದ್ದರು.
2006 ರಲ್ಲಿ ನಡೆದ ಶ್ರವಣಬೆಳಗೊಳ ಶ್ರೀ ಬಾಹುಬಲಿ ಮಹಾಮಸ್ತಕಾಭಿಷೇಕದ ಪ್ರಚಾರ ಉಸ್ತುವಾರಿ ನಿಭಾಯಿಸಿದ್ದರು.

ಕೆಯುಡಬ್ಲ್ಯೂಜೆ ಸಂತಾಪ:

ನಿವೃತ್ತ ವಾರ್ತಾ ಇಲಾಖೆ ಆಯುಕ್ತ ಕೆವಿಆರ್ ಠ್ಯಾಗೂರ್ ಮತ್ತು ಪಬ್ಲಿಕ್ ಟಿವಿ ಕ್ಯಾಮರಾಮೆನ್ ಬಸವರಾಜ ಕೋಟಿ ಅವರ ನಿಧನಕ್ಕೆ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (KUWJ) ತೀವ್ರ ಸಂತಾಪ ವ್ಯಕ್ತಪಡಿಸಿದೆ.

ಕ್ರಿಯಾಶೀಲವಾಗಿದ್ದ ಕೆವಿಆರ್ ಠ್ಯಾಗೂರ್ 2006 ರಲ್ಲಿ ಶ್ರವಣಬೆಳಗೊಳದಲ್ಲಿ ನಡೆದ ಶ್ರೀ ಬಾಹುಬಲಿ ಮಹಾಮಸ್ತಕಾಭಿಷೇಕದ ಪ್ರಚಾರ ಜವಾಬ್ದಾರಿ ನಿಭಾಯಿಸಿದ್ದನ್ನು ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು ಶ್ಲಾಘಿಸಿದ್ದಾರೆ.

ಕೆವಿಆರ್ ಠ್ಯಾಗೂರ್ ಮತ್ತು ಬಸವರಾಜ ಕೋಟಿ ಅವರ ಆತ್ಮಕ್ಕೆ ಶಾಂತಿ ಸಿಗಲಿ. ದುಃಖ ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಪ್ರಾರ್ಥಿಸಿದ್ದಾರೆ.

Please follow and like us:
error