ಕೌಟುಂಬಿಕ ಕಲಹ ಹಿನ್ನೆಲೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ದಂಪತಿ

Bagalakote : ಕೌಟುಂಬಿಕ ಕಲಹ ಹಿನ್ನೆಲೆ ಪತಿ, ಪತ್ನಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಚಿಂಚಖಂಡಿ ಕೆಡಿ ಗ್ರಾಮದ ಬಳಿಯ ಘಟಪ್ರಭಾ ನದಿಯಲ್ಲಿ ನಡೆದಿದೆ. ೨೦ ವರ್ಷದ ಅಕ್ಷತಾ ಹಾಗೂ ೨೮ ವರ್ಷದ ಮೌನೇಶ್ ಕಮ್ಮಾರ ನದಿಗೆ ಹಾರಿ 
ಆತ್ಮಹತ್ಯೆ ಮಾಡಿಕೊಂಡಿರುವ ದಂಪತಿಗಳು. ಇನ್ನು ಮೃತ ದಂಪತಿಗಳು ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ಕಮಕೇರಿ ಗ್ರಾಮದ ನಿವಾಸಿಗಳು ಎನ್ನಲಾಗ್ತಿದೆ. ಮೃತ ಅಕ್ಷತಾ ಮುಧೋಳ ತಾಲ್ಲೂಕಿನ ನಿಂಗಾಪುರ ಗ್ರಾಮದವಳು. ಕಮಕೇರಿ ಗ್ರಾಮದ ಮೌನೇಶ್ ಜೊತೆ ಮದುವೆ ಮಾಡಿ ಕೊಡಲಾಗಿತ್ತು. ಸದ್ಯ ದಂಪತಿ ನದಿಗೆ ಹಾರಿದ ಸುದ್ದಿ ತಿಳಿದ ಮುಧೋಳ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯ ಮೀನುಗಾರರು ಶವಗಳಿಗಾಗಿ ಶೋಧಕಾರ್ಯ ನಡೆಸಿದ್ದಾರೆ. .

Please follow and like us:
error