ಕೋವಿಡ್19 ನಿಂದ ಮೃತಪಟ್ಟವರ ಶವ ಸಂಸ್ಕಾರಕ್ಕೆ ಅಡ್ಡಿ : ಲಘು ಲಾಠಿ ಪ್ರಹಾರ

ಕೊಪ್ಪಳ : ಜಿಲ್ಲೆಯಲ್ಲಿ ಕೋವಿಡ್19 ನಿಂದ ಮೃತಪಟ್ಟವರ ಶವ ಸಂಸ್ಕಾರಕ್ಕೆ ಅಡ್ಡಿಪಡಿಸಿದ ಘಟನೆ ನಿನ್ನೆ ರಾತ್ರಿ ನಡೆದಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿಯ ಸಂಗಾಪುರ ಗ್ರಾಮದಲ್ಲಿ ಜನರು ಪ್ರತಿಭಟನೆ ಮಾಡಿ ಶವಸಂಸ್ಕಾರ ಮಾಡದಂತೆ ತಡೆದರು. ಎಷ್ಟು ತಿಳಿಹೇಳಿದರೂ ಜನರು ಕೇಳದೇ ಪ್ರತಿಭಟನೆ ಮಾಡಿದಾಗ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಘು ಲಾಠಿ ಬೀಸಿದರು. ಮೊದಲು ಹಿರೇಜಂತಕಲ್ ಗ್ರಾಮದ ಜನರಿಂದ ಶವ ಸಂಸ್ಕಾರಕ್ಕೆ ವಿರೋಧ ವ್ಯಕ್ತವಾಯಿತು. ಇದರಿಂದ ಸಂಗಾಪೂರ ಗ್ರಾಮಕ್ಕೆ ಶವವನ್ನು ಕೊಂಡೊಯ್ಯಲಾಯಿತು. ಜಿಲ್ಲಾಡಳಿತದ ಕ್ರಮಕ್ಕೆ ಸಂಗಾಪೂರ- ಮಲ್ಲಾಪುರ‌ ಗ್ರಾಮಸ್ಥರಿಂದಲು ವಿರೋಧ ವ್ಯಕ್ತವಾಯಿತು. ಜನ ರಸ್ತೆಗಿಳಿದು ಪ್ರತಿಭಟನೆ ಮಾಡಿದರು. ಕೊನೆಗು ಅಧಿಕಾರಿಗಳು ಪ್ರತಿಭಟನಾಕಾರರ ಮನವೊಲಿಸಿ ಮಧ್ಯರಾತ್ರಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ಅಧಿಕಾರಿಗಳು ಸಂಗಾಪೂರ ಕೆರೆ ಬಳಿ ಅಂತ್ಯಕ್ರಿಯೆ ಮಾಡಿದರು.

Please follow and like us:
error