fbpx

ಕೋವಿಡ್-19 :  ಗದಗ ಜಿಲ್ಲೆ  
6 ಪ್ರತಿಬಂಧಿತ ಪ್ರದೇಶಗಳ ಘೋಷಣೆ


ಗದಗ : ಗದಗ ಜಿಲ್ಲೆಯಲ್ಲಿ  ಕೋವಿಡ್-19  ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ   6  ಪ್ರತಿಬಂಧಿತ ಪ್ರದೇಶಗಳನ್ನು ಗದಗ ಜಿಲ್ಲಾಧಿಕಾರಿ ಎಂ. ಸುಂದರೇಶ ಬಾಬು ಘೋಷಿಸಿದ್ದಾರೆ.

ಗದಗ ತಾಲೂಕು ಲಕ್ಕುಂಡಿ ಗ್ರಾಮ ಪಂಚಾಯತ್ ವಾರ್ಡ ಸಂಖ್ಯೆ 9 ಗೌರಿ ಓಣಿ ಹಾಗೂ ವಾರ್ಡ ಸಂಖ್ಯೆ 5 ಕರಿಯವರ ಓಣಿ ಪ್ರತಿಬಂಧಿತ ಪ್ರದೇಶಗಳಾಗಿ ಮತ್ತು  ಆ ಪ್ರದೇಶಗಳ ಸುತ್ತಲಿನ 7 ಕಿ.ಮೀ ವ್ಯಾಪ್ತಿಯ ಪ್ರದೇಶವನ್ನು ಬಫರ್ ಝೋನ್ ಎಂದು ಘೋಷಿಸಿ  ಗದಗ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎ. ರಡ್ಡೇರ ಇವರನ್ನು   ಇನ್ಸಿಡೆಂಟ್ ಕಮಾಂಡರ್ ಎಂದು ನೇಮಿಸಲಾಗಿದೆ.
 
ಗದಗ ಬೆಟಗೇರಿ ವಾರ್ಡ ಸಂಖ್ಯೆ 18 ಜವುಳಗಲ್ಲಿ ಪ್ರತಿಬಂಧಿತ ಪ್ರದೇಶವಾಗಿ ಮತ್ತು  ಆ ಪ್ರದೇಶದ ಸುತ್ತಲಿನ 5 ಕಿ.ಮೀ ವ್ಯಾಪ್ತಿಯ ಪ್ರದೇಶವನ್ನು ಬಫರ್ ಝೋನ್ ಎಂದು ಘೋಷಿಸಿ  ಗದಗ ಜಿಲ್ಲೆ ನಗರಾಭಿವೃದ್ಧಿ ಕೋಶದ ಸಹಾಯಕ ಕಾರ್ಯಕಾರಿ ಅಭಿಯಂತ ಎಸ್.ಬಿ. ಮರಿಗೌಡರ ಇವರನ್ನು   ಇನ್ಸಿಡೆಂಟ್ ಕಮಾಂಡರ್ ಎಂದು ನೇಮಿಸಲಾಗಿದೆ.
ಗದಗ ಬೆಟಗೇರಿ ವಾರ್ಡ ಸಂಖ್ಯೆ 29 ಹಮಾಲರ ಪ್ಲಾಟ ಪ್ರತಿಬಂಧಿತ ಪ್ರದೇಶವಾಗಿ ಮತ್ತು  ಆ ಪ್ರದೇಶದ ಸುತ್ತಲಿನ 5 ಕಿ.ಮೀ ವ್ಯಾಪ್ತಿಯ ಪ್ರದೇಶವನ್ನು ಬಫರ್ ಝೋನ್ ಎಂದು ಘೋಷಿಸಿ  ಗದಗ ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ ಇವರನ್ನು   ಇನ್ಸಿಡೆಂಟ್ ಕಮಾಂಡರ್ ಎಂದು ನೇಮಿಸಲಾಗಿದೆ.
ಗದಗ ಬೆಟಗೇರಿ ವಾರ್ಡ ಸಂಖ್ಯೆ 12 ಮೈಲಾರ ಲಿಂಗೇಶ್ವರ ದೇವಸ್ಥಾನದ ಹತ್ತಿರ ಪ್ರತಿಬಂಧಿತ ಪ್ರದೇಶವಾಗಿ ಮತ್ತು  ಆ ಪ್ರದೇಶದ ಸುತ್ತಲಿನ 5 ಕಿ.ಮೀ ವ್ಯಾಪ್ತಿಯ ಪ್ರದೇಶವನ್ನು ಬಫರ್ ಝೋನ್ ಎಂದು ಘೋಷಿಸಿ  ಗದಗ ಬೆಟಗೇರಿ ನಗರಸಭೆ ಪರಿಸರ ಅಭಿಯಂತ ಗಿರೀಶ ತಳವಾರ ಇವರನ್ನು   ಇನ್ಸಿಡೆಂಟ್ ಕಮಾಂಡರ್ ಎಂದು ನೇಮಿಸಲಾಗಿದೆ.

             ನಿಯಂತ್ರಿತ ಪ್ರದೇಶಗಳಿಂದ ಇತರೆ ಪ್ರದೇಶಗಳಿಗೆ ಅಥವಾ ಇತರೆ ಪ್ರದೇಶಗಳಿಂದ ನಿಯಂತ್ರಿತ ಪ್ರದೇಶಗಳಿಗೆ  ಕರ್ತವ್ಯ ನಿರತ ಅಧಿಕಾರಿ ಸಿಬ್ಬಂದಿ ಹೊರತುಪಡಿಸಿ ಜನರ ಪ್ರವೇಶವನ್ನು ನಿರ್ಬಂಧಿಸಿದೆ. ಬಫರ್ ಝೋನ್‌ನ  ಮೊದಲ ಒಂದು ಕಿ.ಮೀ ವ್ಯಾಪ್ತಿಯಲ್ಲಿ ತೀವ್ರ ಬಫರ್‌ಝೋನ್ ಇರಲಿದ್ದು ಅಲ್ಲಿ ಪ್ರತಿ ಮನೆ ಮನೆಗಳಲ್ಲೂ ಆರೋಗ್ಯ  ತಪಾಸಣೆ ನಡೆಸಲಾಗುವುದು. ನಿಯಂತ್ರಿತ ವಲಯಗಳಲ್ಲಿ ಎಲ್ಲ ದಿನಸಿ ಅಂಗಡಿಗಳು, ಹಾಲಿನ ಅಂಗಡಿಗಳು, ಮಾಂಸ, ಔಷಧ ಸೇರಿದಂತೆ ಎಲ್ಲ ಅಂಗಡಿಗಳನ್ನು ಕಡ್ಡಾಯವಾಗಿ ಬಂದ್ ಮಾಡುವುದು. ನಿಯಂತ್ರಿತ ವ್ಯಾಪ್ತಿ ಪ್ರದೇಶಗಳಲ್ಲಿ ಧಾರ್ಮಿಕ ಉರುಸು, ಜಾತ್ರೆ, ಮೆರವಣಿಗೆ, ಜನ ಗುಂಪು ಸೇರುವಿಕೆ, ಸಭೆ ಅಥವಾ ಮದುವೆ ಸಮಾರಂಭಗಳನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಅಗತ್ಯ ವಸ್ತುಗಳ ಪೂರೈಕೆಯನ್ನು ಸಂಬAಧಿತ ಇಲಾಖೆಗಳ ಮೂಲಕವೇ ಪಡೆಯಬೇಕು. ಖಾಸಗಿ ಮೂಲಗಳಿಗೆ ಅವಕಾಶವಿಲ್ಲ, ಈ ಪ್ರದೇಶಗಳ ಜನರು ಮನೆ ಬಿಟ್ಟು ಹೊರಗೆ ತಿರುಗುವುದನ್ನು ನಿಷೇಧಿಸಲಾಗಿದೆ. ಈ ಪ್ರದೇಶಗಳ ಎಲ್ಲ ಶಾಲಾ, ಕಾಲೇಜು, ಕಚೇರಿಗಳನ್ನು ಮುಚ್ಚಲು, ಜನಗುಂಪು ಸೇರುವಿಕೆ, ಕರ್ತವ್ಯ ನಿರತ ವಾಹನ ಹೊರತುಪಡಿಸಿ ವಾಹನ ಸಂಚಾರವನ್ನು ನಿರ್ಭಂಧಿಸಿದೆ. ನಿಯಂತ್ರಿತ ವಲಯ ಎಂದು ಘೋಷಣೆ ಮಾಡಿದ 28  ದಿನಗಳ ಒಳಗೆ ಅಲ್ಲಿ ಯಾವುದೇ ಹೊಸ ಕೋವಿಡ್-19 ಪ್ರಕರಣ ವರದಿಯಾಗದೇ ಇದ್ದಲ್ಲಿ ಅಥವಾ ಆ ನಿಯಂತ್ರಿತ ವಲಯದಲ್ಲಿ ಹತ್ತಕ್ಕಿಂತ ಕಡಿಮೆ ಸಂಪರ್ಕಗಳು/ ಗೃಹ ದಿಗ್ಬಂಧನದಲ್ಲಿ ಸಕ್ರಿಯವಾಗಿದ್ದರೆ ಆಗ ಆ ನಿಯಂತ್ರಿತ ವಲಯವು ಸಾಮಾನ್ಯ ವಲಯವಾಗಿ ಮತ್ತು ಬಫರ್ ಝೋನ್ ಸಾಮಾನ್ಯ ವಲಯವಾಗಿ ಬದಲಾಗುತ್ತದೆ ಎಂದು ಗದಗ ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿರುತ್ತಾರೆ.    
           ಕಂಟೈನ್‌ಮೆAಟ್, ಬಫರ್ ಝೋನ್ ಮತ್ತು ಕ್ಲಸ್ಟರ್‌ಗಳಲ್ಲಿ ಕೊರೋನಾ ವೈರಸ್ ನಿಯಂತ್ರಿಸುವ ಕುರಿತು ಕಾರ್ಯನಿರ್ವಹಿಸುವ ಅಧಿಕಾರಿಗಳಿಗೆ ಹಾಗೂ ಇಲಾಖೆಗಳಿಗೆ ಸರ್ಕಾರದ ಮಾರ್ಗಸೂಚಿಗಳನ್ವಯ ಜಿಲ್ಲಾಧಿಕಾರಿಗಳು ಕರ್ತವ್ಯಗಳನ್ನು ನಿಗದಿಪಡಿಸಿರುತ್ತಾರೆ. ಈ ಆದೇಶವನ್ನು ಉಲ್ಲಂಘಿಸಿದವರ ಮೇಲೆ ವಿಪತ್ತು ನಿರ್ವಹಣಾ ಕಾಯ್ದೆ- 2005 ರನ್ವಯ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿಗಳ ಆದೇಶದಲ್ಲಿ ನಿರ್ದೇಶಿಸಲಾಗಿದೆ.    

Please follow and like us:
error
error: Content is protected !!