ಕೋವಿಡ್-19ಗೆ ಕೊಪ್ಪಳದಲ್ಲಿ 2ನೇ ಬಲಿ : ಜನತೆಯಲ್ಲಿ ಆತಂಕ

ಕೊಪ್ಪಳ: ಜಿಲ್ಲೆಯಲ್ಲಿ ಕೋವಿಡ್-19ಗೆ ಮತ್ತೊಂದು ಬಲಿಯಾಗಿದ್ದು, ಜಿಲ್ಲೆಯಲ್ಲಿ ಕರೋನದಿಂದ ಮೃತಪಟ್ಟವರ ಸಂಖ್ಯೆ ಎರಡಕ್ಕೆ ಏರಿಕೆಯಾಗಿದೆ.
ಕೊಪ್ಪಳ ನಗರದ ದಿವಟರ್ ಸರ್ಕಲ್ ಪ್ರದೇಶದ ನಿವಾಸಿಯಾಗಿದ್ದ 49 ವರ್ಷದ ಸೋಂಕಿತ ವ್ಯಕ್ತಿಬಉಸಿರಾಟದ ತೊಂದರೆ (SARI) ಯಿಂದ ಬಳಲುತ್ತಿದ್ದ. ಜೂನ್ 28ರಂದು ಸ್ವ್ಯಾಬ್ ಟೆಸ್ಟ್ ಗೆ ಕಳುಹಿಸಲಾಗಿತ್ತು. ಜೂನ್ 30ರಂದು ಕೋವಿಡ್-19 ಸೋಂಕು ದೃಢಪಟ್ಟಿತ್ತು. ಸೋಂಕಿತ ಕಳೆದ ಎರಡು ದಿನದಿಂದ ಕೊಪ್ಪಳದ ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ತೀವ್ರ ಉಸಿರಾಟದ ತೊಂದರೆಯಿಂದಾಗಿ ಕೊನೆಯುಸಿರೆಳೆದರು ಎಂದು ಜಿಲ್ಲಾಧಿಕಾರಿ ಎಸ್.ವಿಕಾಸ್ ಕಿಶೋರ್ ತಿಳಿಸಿದ್ದಾರೆ.

Please follow and like us:
error