ಕೋವಿಡ್ ಸೋಂಕಿತರಿಗೆ ಆತ್ಮಸ್ಥೈರ್ಯ ಮುಖ್ಯ : ಗುಣಮುಖರಾದವರ ಮನದಾಳದ ಮಾತು

ಚಾಮರಾಜನಗರ, :- ಸಮಾಜದಲ್ಲಿ ಕೋವಿಡ್ ಸೋಂಕಿತರನ್ನು ನೋಡುವ ಮನೋಭಾವ ಬದಲಾಗಿ ಆತ್ಮಸ್ಥೈರ್ಯ ತುಂಬುವ ಕೆಲಸವಾಗಬೇಕು. ಕೋವಿಡ್ ಮಾರಣಾಂತಿಕ ಕಾಯಿಲೆಯಲ್ಲ ಎಂದು ಜಿಲ್ಲೆಯಲ್ಲಿ ಕೋವಿಡ್‍ನಿಂದ ಗುಣಮುಖರಾಗಿರುವ ಇಬ್ಬರು ತಮ್ಮ ಮನದಾಳದ ಮಾತನ್ನು ಹಂಚಿಕೊಂಡರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು ನಡೆಸಿದ ಪತ್ರಿಕಾಗೋಷ್ಠಿ ವೇಳೆ ಕೋವಿಡ್ ಚಿಕಿತ್ಸೆ, ಆಸ್ಪತ್ರೆಯಲ್ಲಿ ನೀಡಿದ ಆರೈಕೆ, ವೈದ್ಯರು, ಅಧಿಕಾರಿಗಳು ತೋರಿದ ಕಾಳಜಿ ಕುರಿತು ಕೋವಿಡ್‍ನಿಂದ ಗುಣಮುಖರಾದ ದಂಪತಿ ತಮ್ಮ ಮನದಾಳದ ಮಾತುಗಳನ್ನು ಮಾಧ್ಯಮ ಪ್ರತಿನಿಧಿಗಳ ಮುಂದೆ ತೆರೆದಿಟ್ಟರು.

ಜಿಲ್ಲೆಯ ಕೋವಿಡ್ ಆಸ್ಪತ್ರೆಯಲ್ಲಿ ಅತ್ಯುತ್ತಮವಾಗಿ ಔಷಧ, ಉಪಚಾರ ನಡೆಯಿತು. ವೈದ್ಯರು ವಿಶೇಷವಾಗಿ ರೋಗಿಗಳೊಂದಿಗೆ ಹೆಚ್ಚಿನ ಕಾಳಜಿ ವಹಿಸಿ ಚಿಕಿತ್ಸೆ ನೀಡುತ್ತಿದ್ದಾರೆ. ಇವರೊಂದಿಗೆ ಇತರೆ ವೈದ್ಯಕೀಯ ಸಿಬ್ಬಂದಿ ಸಹ ಅತ್ಯಂತ ಪ್ರೀತಿಯಿಂದ ರೋಗಿಗಳ ಆರೈಕೆ ಮಾಡುತ್ತಿದ್ದಾರೆ ಎಂದರು.

ಔಷಧ ಚಿಕಿತ್ಸೆಗಿಂತ ರೋಗಿಗಳಿಗೆ ಧೈರ್ಯ ತುಂಬುವ ಕೆಲಸ ವೈದ್ಯರಿಂದ ಆಗುತ್ತಿದೆ. ಇದರಿಂದ ರೋಗಿಗಳಲ್ಲಿ ಮನೋಸ್ಥೈರ್ಯ ಹೆಚ್ಚಾಗುತ್ತಿದೆ. ನಕಾರಾತ್ಮಕ ಯೋಚನೆಗಳಿಗೆ ಅವಕಾಶವಿಲ್ಲದಂತೆ ಗುಣಮುಖರಾಗಿ ನಾವು ಬಂದಿದ್ದೇವೆ. ಜಿಲ್ಲಾಧಿಕಾರಿಗಳ ಮುಂಜಾಗ್ರತಾ ಕ್ರಮಗಳು ಹಾಗೂ ನಿರ್ದೇಶನ ಅನುಸಾರ ಆಸ್ಪತ್ರೆಯಲ್ಲಿ ಎಲ್ಲಾ ಸೌಲಭ್ಯಗಳು ಉತ್ತಮವಾಗಿವೆ. ಚಿಕಿತ್ಸೆ, ಔಷಧೋಪಚಾರ ಊಟ, ಉಪಹಾರಗಳ ಗುಣಮಟ್ಟಮ ವಿತರಣೆ ಸಹ ಚೆನ್ನಾಗಿ ನಿರ್ವಹಿಸಲಾಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸೋಂಕಿನಿಂದ ಗುಣಮುಖರಾದವರನ್ನು ಸಮಾಜ ನೋಡುವ ದೃಷ್ಠಿಕೋನ ಸಕಾರಾತ್ಮಕವಾಗಿರಬೇಕು. ಧೈರ್ಯ ತುಂಬಿ ಪ್ರೀತಿ ವಿಶ್ವಾಸದಿಂದ ಕಾಣಬೇಕು. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಆಗಬೇಕೆಂಬುದು ತಮ್ಮ ಆಶಯವಾಗಿದೆ ಎಂದರು.

Please follow and like us:
error