ಕೋವಿಡ್ ನಿಯಂತ್ರಣಕ್ಕೆ ಜಿಲ್ಲಾಡಳಿತದಿಂದ ಸಕಲ ಕ್ರಮ : ಡಾ. ಎಂ.ಆರ್. ರವಿ

ಚಾಮರಾಜನಗರ, :- ಜಿಲ್ಲೆಯಲ್ಲಿ ಕೋವಿಡ್-19 ಪರಿಸ್ಥಿತಿಯು ನಿಯಂತ್ರಣದಲ್ಲಿದ್ದು, ಜಿಲ್ಲಾಡಳಿತ ಸೋಂಕಿತರ ಆರೈಕೆಯನ್ನು ಉತ್ತಮವಾಗಿ ನಿರ್ವಹಿಸುತ್ತಿರುವುದರಿಂದ ಜಿಲ್ಲೆಯ ಜನತೆ ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು ತಿಳಿಸಿದ್ದಾರೆ.

ಕೋವಿಡ್ ನಿಯಂತ್ರಣ ಸಂಬಂಧ ಜಿಲ್ಲಾಡಳಿತ ತೆಗೆದುಕೊಂಡಿರುವ ಕ್ರಮಗಳ ಕುರಿತು ಫೇಸ್‍ಬುಕ್ ಲೈವ್ ಮೂಲಕ ಇಂದು ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು ಈ ಬಗ್ಗೆ ವಿವರಣೆ ನೀಡಿದರು.

ಜಿಲ್ಲೆಯಲ್ಲಿ ಕೋವಿಡ್ ಸೋಂಕಿತ ಪ್ರಕರಣಗಳು ನಿಯಂತ್ರಣದಲ್ಲಿವೆ. ನಿನ್ನೆಯ(ಶುಕ್ರವಾರ)ವರೆಗೆ 245 ಸಕ್ರಿಯ ಪ್ರಕರಣಗಳಿದ್ದು, ಬಹಳ ಪ್ರಮುಖವಾದ ಅಂಶವೆಂದರೇ ನಮ್ಮ ಜಿಲ್ಲೆಯಲ್ಲಿ ಗುಣಮುಖರಾಗುತ್ತಿರುವವರ ಪ್ರಮಾಣ ಶೇ. 62ರಷ್ಟಿದೆ. ರಾಜ್ಯದ ಪಾಸಿಟಿವಿಟಿ ಪ್ರಮಾಣ ಶೇ. 12ರಷ್ಟಿದ್ದರೆ, ಜಿಲ್ಲೆಯ ಪಾಸಿಟಿವಿಟಿ ಪ್ರಮಾಣ ಶೇ. 1ರಷ್ಟು ಮಾತ್ರ ಇದೆ. ಇದು ಅತ್ಯಂತ ಸಮಾಧಾನಕರ ಸಂಗತಿಯಾಗಿದೆ. ಪ್ರತಿ ವಾರ ಸಂಪರ್ಕಿತರ ಪತ್ತೆ ಹಚ್ಚುವಿಕೆ ಹಾಗೂ ಪ್ರಯೋಗಾಲಯ ಪರೀಕ್ಷಾ ಕಾರ್ಯವಿಧಾನವನ್ನು ಬದಲಿಸಿಕೊಂಡು ಕೋವಿಡ್ ನಿಯಂತ್ರಣಕ್ಕೆ ಅಗತ್ಯ ಕ್ರಮ ತೆಗೆದುಕೊಂಡಿದ್ದೇವೆ ಎಂದರು.

ಕೋವಿಡ್ ಸೋಂಕಿಗೆ ಒಳಪಟ್ಟು ದಾಖಲಾದವರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಿದ್ದಾರೆ. 7 ತಿಂಗಳಿನ ಮಗುವಿನಿಂದ 70 ವರ್ಷದವರೆಗಿನ ಸೋಂಕಿತರು ಸಹ ಉತ್ತಮ ಆರೈಕೆಯಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಶ್ರವಣದೋಷ ಹೊಂದಿರುವವರು, ಗರ್ಭಿಣಿಯರು, ಕ್ಷಯರೋಗಿಗಳು ಹಾಗೂ ಎಚ್.ಐ.ವಿ ಸೋಂಕಿತರು ಸಹ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿರುವುದು ಆತ್ಮಸ್ಥೈರ್ಯ ಹೆಚ್ಚಿಸಿದೆ ಎಂದು ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು ವಿವರಿಸಿದರು.

ಜಿಲ್ಲೆಯಲ್ಲಿ ಕೋವಿಡ್ ಪರೀಕ್ಷೆಗಳ ಸಂಖ್ಯೆಯನ್ನು ಹೆಚ್ಚಳ ಮಾಡÀಲಾಗಿದೆ. ಇದುವರೆಗೆ 23428 ಟೆಸ್ಟ್‍ಗಳನ್ನು ಮಾಡಲಾಗಿದೆ. ಈ ಪೈಕಿ ಜುಲೈ ತಿಂಗಳಿನಲ್ಲೇ 8 ಸಾವಿರ ಪರೀಕ್ಷೆಗಳನ್ನು ಮಾಡಿರುವುದು ವಿಶೇಷವಾಗಿದೆ. ಕಳೆದ ಒಂದು ವಾರದಿಂದ ರ್ಯಾಪಿಡ್ ಆಂಟಿಜೆನ್ ಟೆಸ್ಟ್‍ಗಳನ್ನು ಹೆಚ್ಚಿಸಲಾಗಿದ್ದು, 5 ಸಾವಿರ ಟೆಸ್ಟ್‍ಗಳನ್ನು ಮಾಡಲಾಗಿದೆ. ರ್ಯಾಪಿಡ್ ಆಂಟೆಜೆನ್ ಟೆಸ್ಟ್‍ನಿಂದ 1 ಗಂಟೆಯೊಳಗೆ ಫಲಿತಾಂಶ ಬರುತ್ತಿದೆ. ಪರೀಕ್ಷೆ ಸಂಖ್ಯೆಯನ್ನು ಹೆಚ್ಚಳ ಮಾಡಿರುವ ಹಿನ್ನೆಲೆಯಲ್ಲಿ ಸೋಂಕಿತರ ಪ್ರಮಾಣವು ಹೆಚ್ಚು ತಿಳಿಯುತ್ತಿದೆ ಎಂದರು.

ಮೊದಲಿಗೆ ಪಟ್ಟಣ ಪ್ರದೇಶದಲ್ಲಿ ಹೆಚ್ಚು ಕಂಡುಬರುತ್ತಿದ್ದ ಕೋವಿಡ್ ಪ್ರಕರಣಗಳು ಇತ್ತೀಚೆಗೆ ಗ್ರಾಮೀಣ ಪ್ರದೇಶಗಳಲ್ಲಿಯೂ ಗಮನಾರ್ಹವಾಗಿ ಕಂಡುಬರುತ್ತಿವೆ. ಕೋವಿಡ್ ಪರೀಕ್ಷೆಗಳನ್ನು ಹೆಚ್ಚಾಗಿ ಮಾಡುತ್ತಿರುವ ಹಿನ್ನೆಲೆಯಲ್ಲಿ ತಕ್ಷಣವೇ ಸೋಂಕಿತರನ್ನು ಪ್ರತ್ಯೇಕಿಸಿ ಚಿಕಿತ್ಸೆಗೆ ದಾಖಲು ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.

ಸೋಂಕು ಪ್ರಕರಣಗಳು ದಾಖಲಾಗುತ್ತಿದ್ದಂತೆ ಅದರ ನಿರ್ವಹಣೆಗಾಗಿ ಜಿಲ್ಲಾಡಳಿತ ಸಕಲ ಸಿದ್ದತೆ ಕೈಗೊಂಡಿದೆ. ನಿಗದಿತ ಕೋವಿಡ್ ಆಸ್ಪತ್ರೆ, ಅಲ್ಲದೆ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು, ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಸೇರಿದಂತೆ ಒಟ್ಟು 625 ಹಾಸಿಗೆಗಳ ಸಾಮಥ್ರ್ಯವಿದ್ದು, ಸೋಂಕಿತರ ಆರೈಕೆಗೆ ಎಲ್ಲಾ ವ್ಯವಸ್ಥೆಗಳು ¯ಭ್ಯವಿದೆ. ಅಲ್ಲದೆ ಮೈಸೂರು ವಿಶ್ವವಿದ್ಯಾಲಯದ ಡಾ. ಬಿ.ಆರ್. ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರ, ನಗರದ ಕರ್ನಾಟಕ ಮುಕ್ತ ವಿ.ವಿ. ಪ್ರಾದೇಶಿಕ ಕೇಂದ್ರದಲ್ಲಿಯೂ ಕನಿಷ್ಠ 400 ಹಾಸಿಗೆ ಸಾಮಥ್ರ್ಯವುಳ್ಳ ಕೋವಿಡ್ ಕೇರ್ ಕೇಂದ್ರ ಸಿದ್ದಪಡಿಸಲಾಗುತ್ತಿದೆ. ಸಂತೆಮರಹಳ್ಳಿಯಲ್ಲಿ 100 ಹಾಸಿಗೆ ಸಾಮಥ್ರ್ಯದ ಕೋವಿಡ್ ಆಸ್ಪತ್ರೆ ಸಿದ್ದವಾಗಿದೆ. ಒಟ್ಟಾರೆ ಕೋವಿಡ್ ನಿಯಂತ್ರಣಕ್ಕೆ ಯಾವುದೇ ಸೌಲಭ್ಯಗಳ ಕೊರತೆಯಿಲ್ಲ. ವೈದ್ಯರು, ನರ್ಸ್‍ಗಳು ಹಾಗೂ ಹೌಸ್‍ಕೀಪಿಂಗ್ ಸೇರಿದಂತೆ ಎಲ್ಲಾ ಸಿಬ್ಬಂದಿ ಲಭ್ಯರಿದ್ದಾರೆ ಎಂದರು.

ಸಾರ್ವಜನಿಕರು ಕೆಮ್ಮು, ನೆಗಡಿ, ಶೀತ, ಜ್ವರದಂತಹ ಲಕ್ಷÀಣಗಳು ಕಂಡುಬಂದಲ್ಲಿ ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ತಪಾಸಣೆಗೆ ಒಳಪಡಬೇಕು. ಜನರು ಕೋವಿಡ್ ಸೋಂಕು ವ್ಯಾಪಿಸದಂತೆ ಸಹಕರಿಸಬೇಕೆಂದು ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು ಮನವಿ ಮಾಡಿದ್ದಾರೆ.

Please follow and like us:
error