ಕೋಳಿ ಪಂದ್ಯಾಟ ದಾಳಿ : ಪೋಲಿಸರಿಂದ ಹುಂಜಗಳ ಜಪ್ತಿ

ಕೋಳಿ ಪಂದ್ಯಾಟ ದಾಳಿ , ದಿನಾಂಕ 20/10/2020 ರಂದು ಪ್ರಶಾಂತ ಹೆಚ್.ಎಸ್ . ಪಿ.ಎಸ್.ಐ ಕನಕಗಿರಿ ಪೊಲೀಸ್ ಠಾಣೆ ರವರು ಠಾಣಾ ವ್ಯಾಪ್ತಿಯ ಗೋಡಿನಾಳ ಸೀಮಾದ ಗೋಡಿನಾಳ – ಗುಡದೂರ ಕಚ್ಚಾ ರಸ್ತೆಯಲ್ಲಿ ಬರುವ ಹನುಮಗೌಡರ ಗೌಡರ ಇವರ ಪಾಳು ಬಿದ್ದ ಹೊಲದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಸುಮಾರು 7 ಜನ ಆರೋಪಿತರು ಸಾರ್ವಜನಿಕರ ಪ್ರಾಣಕ್ಕೆ ಅಪಾಯಕಾರಿಯಾದ ಕೋರೋನಾ ( ಕೋವಿಡ್ -19 ) ನ ವೈರಸ್ ಸೋಂಕಿನ ಬಗ್ಗೆ ತಿಳಿದಿದ್ದರೂ ಸಹ ನಿರ್ಲಕ್ಷತೆ ವಹಿಸಿ ಸರ್ಕಾರದ ಆದೇಶವನ್ನು ಪಾಲಿಸದೇ ಯಾವುದೇ ಸಾಮಾಜಿಕ ಅಂತರಕಾಯ್ಡುರೊಳ್ಳುವಿಕೆ ಇತರೇ ನಿಯಮಗಳನ್ನು ಪಾಲಿಸದೇ 2 ಹುಂಜಗಳ ಮೇಲೆ ಹಣವನ್ನು ಪಣಕ್ಕೆ ಹಚ್ಚಿ ಅದೃಷ್ಟದ ಲೋಳಿ ಪಂದ್ಯಾಟದ ಜೂಜಾಟದ ತೊಡಗಿದ್ದಾರೆ ಅಂತಾ ಮಾಹಿತಿ ಪಡೆದು ಪಂಚರ ಮತ್ತು ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಅವರಿಂದ ನಗದು ಹಣ ರೂ .100 / – ಮತ್ತು ಪಂದ್ಯಾಟಕ್ಕೆ ಬಳಸಿದ 2 ಹುಂಜಗಳನ್ನು ಪಂಚರ ಸಮಕ್ಷಮ ಜಿಪ್ತ ಮಾಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ .

ಮಟ್ಕಾ ಜೂಜಾಟ ದಾಳಿ .

ದಿ: 20-10-2020 ರಂದು ಮುನಿರಾಬಾದ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸನಿಂಗಾಪೂರ ಗ್ರಾಮದ ಹೆಚ್.ಆರ್.ಜಿ ಆಶ್ರಯ ಕಾಲೋನಿಯ ಸಾಯಿಬಾಬಾ ಗುಡಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತವಾದ ಪಾಂಡು ತಂದೆ ಕಣ್ಣನ್ ಸಾ . ಹೊಸನಿಂಗಾಪೂರ ಇತನು ಮಟ್ಕಾ ಜೂಜಾಟದಲ್ಲಿ ತೊಡಗಿದ್ದಾಗ ಸುಪ್ರೀತ್ ಪಿ.ಎಸ್.ಐ. ಮುನಿರಾಬಾದ ಠಾಣೆರವರು ಸಿಬ್ಬಂದಿಯವರೊಂದಿಗೆ ಹೋಗಿ ದಾಳಿ ಮಾಡಿ ಆರೋಪಿತನ ಹತ್ತಿರ ಜೂಜಾಟಕ್ಕೆ ಸಂಬಂಧಿಸಿದ ವಸ್ತುಗಳಾದ ಮಟಕಾ ಚೀಟಿ , ಒಂದು ಬಾಲ್ ಪೆನ್ನು , ನಗದು ಹಣ 1150-00 ರೂ.ಗಳನ್ನು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ .

Please follow and like us:
error