ಕೊವಿಡ್-19 ಸೋಂಕು ತಡೆ
ಜನಜಾಗೃತಿಗೆ ಹೆಚ್ಚಿನ ಒತ್ತು, ಇಲಾಖೆಗಳ ಸಮನ್ವಯಕ್ಕೆ
ಸಚಿವ ಪಾಟೀಲ ಸೂಚನೆ


ಮುಂಡರಗಿ) ಜು.6: ಮುಂಡರಗಿ ತಾಲೂಕಿನಲ್ಲಿ ಕೊವಿಡ್-19 ಸೋಂಕು ಸಂಪರ್ಕದಿಂದಲೇ ಹೆಚ್ಚಳವಾಗಿದ್ದು ಜನ ಮುಖಕ್ಕೆ ಮಾಸ್ಕ ಧರಿಸುವ, ಯಾವುದೇ ಪರಿಸ್ಥಿತಿಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವದು ಸಾರ್ವಜನಿಕ ಆರೋಗ್ಯ ರಕ್ಷಣೆ ದೃಷ್ಟಿಯಿಂದ ಹೆಚ್ಚು ಅಗತ್ಯವಾಗಿದೆ ಎಂದು ರಾಜ್ ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ. ಸಿ. ಪಾಟೀಲ ನುಡಿದರು. ಮುಂಡರಗಿ ತಹಶಿಲ್ದಾರರ ಕಛೇರಿಯಲ್ಲಿ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ತಾಲೂಕಿನಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ವೈದ್ಯಕೀಯ ಸೌಲಭ್ಯ, ಆಸ್ಪತ್ರೆಗಳ ಸ್ಥಿತಿಗತಿ, ಹಾಗೂ ಸೋಂಕು ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಪರಿಶೀಲನೆ ನಡೆಸಿದ ಸಚಿವರು ಗ್ರಾಮಗಳಲ್ಲಿ, ನಗರ ಪ್ರದೇಶದಲ್ಲಿ ವಾರ್ಡವಾರು ಕೊವಿಡ್-19 ಸೋಂಕು ತಡೆ ಕುರಿತಂತೆ ಜನರು ಅನುಸರಿಸಬೇಕಾದ ಸುರಕ್ಷಾ ಹಾಗೂ ಸಾಮಾಜಿಕ ನಿಯಮಗಳ ಕುರಿತು ಹೆಚ್ಚಿನ ಜಾಗೃತಿ ಮೂಡಿಸಲು
ಇಲಾಖೆಗಳು ಪರಸ್ಪರ ಸಮನ್ವಯದಿಂದ ಕಾರ್ಯ ಮಾಡಲು ನಿರ್ದೇಶನ ನೀಡಿದರು.
ತಾಲೂಕಿನ ಸೋಂಕು ಪೀಡಿತರಾಗಿ ನ್ಯುಮೋನಿಯಾದಿಂದ ಮೃತರಾದ ವೃದ್ದರ ಅಂತ್ಯ ಸಂಸ್ಕಾರವನ್ನು ಮಾನವೀಯತೆಯಿಂದ ನಡೆಸಿ ಇತರರಿಗೆ ಮಾದರಿಯಾದ ತಾಲೂಕಿನ ತಹಶೀಲ್ದಾರ ಜಿ.ಬಿ.ಜಕ್ಕಣ್ಣನವರ ಹಾಗೂ ತಾ.ಪಂ ಅಧಿಕಾರಿಗಳಿಗೆ ಸಚಿವ ಸಿ.ಸಿ.ಪಾಟೀಲ ಅಭಿನಂದಿಸಿದರು.

ಶಾಸಕರಾದ ಕಳಕಪ್ಪ ಜಿ ಬಂಡಿ, ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ ಹಾಗೂ ತಾಲೂಕ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

Please follow and like us:
error