fbpx

ಕೊವಿಡ್-19 : ಜಿಲ್ಲೆಯಲ್ಲಿ 19 ಸೋಂಕು ದೃಢ

ಗದಗ : ಗದಗ ಜಿಲ್ಲೆಯಲ್ಲಿ ಶುಕ್ರವಾರ ದಿ. 03 ರಂದು 19 ಜನರಿಗೆ ಕೊವಿಡ್-19 ಸೋಂಕು ದೃಢ ಪಟ್ಟಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಈವರೆಗೆ ಒಟ್ಟು 199 ಸೋಂಕು ದೃಢಪಟ್ಟಿವೆ. ಅವುಗಳಲ್ಲಿ 4 ವ್ಯಕ್ತಿಗಳು ಮೃತಪಟ್ಟಿದ್ದು, 81 ಜನ ಗುಣಮುಖರಾಗಿದ್ದಾರೆ. ಸದ್ಯ ಜಿಲ್ಲೆಯಲ್ಲಿ 114 ಕೊವಿಡ್-19 ಸೋಂಕಿನ ಸಕ್ರಿಯ ಪ್ರಕರಣಗಳಿವೆ.
ಗದಗಿನ ಸಿದ್ದರಾಮೇಶ್ವರ ನಗರ ನಿವಾಸಿ 31 ವರ್ಷದ ಪುರುಷ (ಪಿ-10148) ಸೋಂಕಿತರ ಸಂಪರ್ಕದಿAದಾಗಿ ಅದೇ ಪ್ರದೇಶದ 31 ವರ್ಷದ ಪುರುಷ (ಪಿ-18272) ಹಾಗೂ 24 ವರ್ಷದ ಮಹಿಳೆ((ಪಿ-18273)ಗೆ ಸೋಂಕು ದೃಢವಾಗಿದೆ.
ಗುಜರಾತ್ ರಾಜ್ಯದಿಂದ ಜುಲೈ 2ರಂದು ಜಿಲ್ಲೆಗೆ ಆಗಮಿಸಿದ್ದ ಗದಗ ತಾಲ್ಲೂಕಿನ ಮಲ್ಲಸಮುದ್ರದ ಜಿಮ್ಸ್ ಹಾಸ್ಟೆಲ್‌ನ 19 ವರ್ಷದ ಯುವಕ (ಪಿ-18283), ಮಹರಾಷ್ಟçದಿಂದ ಜೂನ್ 30ರಂದು ಆಗಮಿಸಿದ್ದ ಕಳಸಾಪುರ ರಿಂಗ್ ರೋಡ್ ಪ್ರದೇಶದ 33 ವರ್ಷದ ಪುರುಷ ((ಪಿ-18289) ಹಾಗೂ ಹಾವೇರಿ ಜಿಲ್ಲೆಯಿಂದ ಜೂನ್ 26 ರಂದು ಜಿಲ್ಲೆಗೆ ಆಗಮಿಸಿದ ಗದಗ-ಬೆಟಗೇರಿಯ ನರಸಾಪುರದ ರಂಗಪ್ಪಜ್ಜ ಮಠದ ಹತ್ತಿರದ ನಿವಾಸಿ 60 ವರ್ಷದ ಮಹಿಳೆ (ಪಿ-18271) ಇವರಿಗೆ ಜ್ವರ ಹಾಗೂ ಕೆಮ್ಮು ರೋಗ ಲಕ್ಷಣದಿಂದಾಗಿ ಕೋವಿಡ್-19 ಸೋಂಕು ದೃಢಪಟ್ಟಿದೆ.
ಇನ್‌ಪ್ಲೂಯೆಂಜಾ ರೋಗ ಲಕ್ಷಣಗಳಿರುವ ಜ್ವರ ಮತ್ತು ಶೀತದಿಂದ ಬಳಲುತ್ತಿದ್ದ ಮಲ್ಲಸಮುದ್ರದ ಅಂಜುಮನ್ ಕಾಲೇಜ್ ಹತ್ತಿರದ ನಿವಾಸಿ 31 ವರ್ಷದ ಪುರುಷ(ಪಿ-18280), ಗದಗ ನಗರದ ಕಾಗದಗೆರೆ ನಿವಾಸಿ 60 ವರ್ಷದ ಮಹಿಳೆ (ಪಿ-18281)  ಹಾಗೂ ಹರ್ತಿ ಗ್ರಾಮದ ಈರಣ್ಣ ದೇವಸ್ಥಾನ ಹತ್ತಿರದ ನಿವಾಸಿ 22 ವರ್ಷದ ಮಹಿಳೆ (ಪಿ-18287)ಗೆ ಸೋಂಕು ದೃಢಪಟ್ಟಿದೆ.
ತಾಲ್ಲೂಕಿನ ಬೆಳದಡಿ ಗ್ರಾಮದ ಶಾಲೆಯ ಹಿಂಭಾಗದ ನಿವಾಸಿ 40 ವರ್ಷದ ಪುರುಷ (ಪಿ-18286), ಅಡವಿ ಸೋಮಾಪುರ ತಾಂಡಾ ನಿವಾಸಿ 60 ವರ್ಷದ ಮಹಿಳೆ (ಪಿ-18288)ಗೆ ಸೋಂಕು ದೃಢವಾಗಿದೆ. ಸೋಂಕಿನ ಪತ್ತೆ ಕಾರ್ಯ ನಡೆಯುತ್ತಿದೆ.
ನರಗುಂದ ಪಟ್ಟಣದ ಗಡಿ ಓಣಿ ನಿವಾಸಿ 39 ವರ್ಷದ ಪುರುಷ (ಪಿ-15320) ಸಂಪರ್ಕದಿAದ ಅದೇ ಪ್ರದೇಶದ 7 ವರ್ಷದ ಬಾಲಕಿ (ಪಿ-18275), 65 ವರ್ಷದ ಮಹಿಳೆ (ಪಿ-18276), 36 ವರ್ಷದ ಮಹಿಳೆ (ಪಿ-18277), 15 ವರ್ಷದ ಯುವಕ (ಪಿ-18278), 42 ವರ್ಷದ ಪುರುಷ (ಪಿ-18279) ಸೋಂಕು ದೃಢಪಟ್ಟಿದೆ. ಧಾರವಾಡ ಜಿಲ್ಲೆಯಿಂದ ಜೂನ್ 30ರಂದು ಆಗಮಿಸಿದ ನರಗುಂದ ಗುಡ್ಡದ ಕೇರಿ ಅಂಬಾಭವಾನಿ ದೇವಸ್ಥಾನದ ಹತ್ತಿರದ ನಿವಾಸಿ 25 ವರ್ಷದ ಮಹಿಳೆ (ಪಿ-18274) ಕೋವಿಡ್-19 ಸೋಂಕು ದೃಢವಾಗಿದೆ.
ಜಿಮ್ಸ್ಸ್ ಆಸ್ಪತ್ರೆಗೆ ದಾಖಲಾಗಿರುವ ಧಾರವಾಡ ಜಿಲ್ಲೆ ನವಲಗುಂದ ತಾಲ್ಲೂಕಿನ ಅಡ್ನೂರು ಗ್ರಾಮದ 31 ವರ್ಷದ ಪುರುಷ (ಪಿ-18284) ಇನ್‌ಪ್ಲೂಯೆಂಜಾ ರೋಗ ಲಕ್ಷಣದಿಂದಾಗಿ ಸೋಂಕು ದೃಢವಾಗಿದೆ.
ಲಕ್ಷ್ಮೇಶ್ವರದ 39 ವರ್ಷದ ಪುರುಷ (ಪಿ-11230) ಸಂಪರ್ಕದಿಂದಾಗಿ ಲಕ್ಷ್ಮೇಶ್ವರದ ಹೊಸ ಬಸ್ ನಿಲ್ದಾಣದ ಹತ್ತಿರದ ಇಂದಿರಾ ನಗರ ನಿವಾಸಿ 40 ವರ್ಷದ ಮಹಿಳೆ (ಪಿ-18285) ಸೋಂಕು ದೃಢವಾಗಿದೆ. ಶಿರಹಟ್ಟಿ ತಾಲ್ಲೂಕಿನ ಗೊಜನೂರು ಗ್ರಾಮದ 23 ವರ್ಷದ ಮಹಿಳೆ (ಪಿ-18282) ಸೋಂಕು ದೃಢವಾಗಿದ್ದು, ಸೋಂಕಿನ ಪತ್ತೆ ಕಾರ್ಯ ನಡೆಯುತ್ತಿದೆ.
ಇವರಿಗೆ ನಿಗದಿತ ಕೊವಿಡ್-19 ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಗದಗ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ತಿಳಿಸಿದ್ದಾರೆ.

Please follow and like us:
error
error: Content is protected !!