ಕೊವಿಡ್ ಸೋಂಕಿನಿಂದ ಮೃತಪಟ್ಟವರ ಅಂತಿಮ ಸಂಸ್ಕಾರಕ್ಕೆ ಅವಕಾಶ ನೀಡಲು ಪಿಎಫ್ ಐ ಮನವಿ

ಕೋವಿಡ್-19 ಸೋಂಕಿನಿಂದಾಗಿ ಮರಣ ಹೊಂದಿದವರನ್ನು ಆಯಾ ಜಾತಿ – ಜನಾಂಗದ ಗೌರವಯುತವಾಗಿ ಅಂತಿಮ ಸಂಸ್ಕಾರ ನಡೆಸಲು ಸ್ವಯಂ ಸೇವಕರನ್ನು ಒದಗಿಸುವ ಕುರಿತು ಜಿಲ್ಲಾಧಿಕಾರಿಗಳಿಗೆ ಪಿಎಪ್ ಐ ಮನವಿ ಸಲ್ಲಿಸಿದೆ.

, ಕೊವಿಡ್ -19 ಮಹಾಮಾರಿಯಿಂದಾಗಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು , ಸಾವಿನ ಸಂಖ್ಯೆಯೂ ಏರಿಕೆಯಾಗುತ್ತಿರುವುದು ಆತಂಕಕಾರಿಯಾಗಿದೆ , ಈ ವಿಷಯದಲ್ಲಿ ವಿದೇಶಗಳಲ್ಲಿ ಅತ್ಯಂತ ಹೆಚ್ಚು ಸಾವು ಸಂಭವಿಸುತ್ತಿದ್ದ ವರದಿ ಅನ್ವಯ “ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ” ಮುನ್ನೆಚ್ಚರಿಕಾ ಕ್ರಮವಾಗಿ 2 ತಿಂಗಳ ಮೊದಲೇ ದೇಶದಾದ್ಯಂತ ತನ್ನ ಸ್ವಯಂ ಸೇವಕರಿಗೆ ಕೊವಿಡ್ -19 ರ ಸಂಕಷ್ಟಗಳನ್ನು ಎದುರಿಸುವ ಬಗ್ಗೆ ವಿವಿಧ ತರಬೇತಿಗಳನ್ನು ನೀಡಲಾಗಿತ್ತು . ಅದರಲ್ಲೂ ವಿಶೇಷವಾಗಿ ಸಾವನ್ನಪ್ಪಿರುವವರ ಅಂತ್ಯ ಸಂಸ್ಕಾರವನ್ನು ವೈಜ್ಞಾನಿಕ ರೀತಿಯಲ್ಲಿ ಮಾಡುವ ತರಬೇತಿ ನೀಡಲಾಗಿದೆ . ಹೀಗಾಗಿ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಆಯಾ ಜಿಲ್ಲಾಡಳಿತದ ಸಹಕಾರದೊಂದಿಗೆ ಅಂತ್ಯ ಸಂಸ್ಕಾರದ ಕಾರ್ಯವನ್ನು ಯಶಸ್ವಿಯಾಗಿ ನೆರವೇರಿಸಲಾಗುತ್ತಿದೆ . ಈ ಬಗ್ಗೆ ರಾಜ್ಯದ ಪತ್ರಿಕೆ ಮತ್ತು ದೃಶ್ಯ ಮಾಧ್ಯಮಗಳು ವರದಿ ಮಾಡಿರುವುದನ್ನು ತಾವು ಗಮನಿಸಿರುತ್ತೀರಿ ಎಂದು ಭಾವಿಸುತ್ತೇವೆ . ಈ ವಿಚಾರದಲ್ಲಿ ಕೊಪ್ಪಳ ಜಿಲ್ಲಾದ್ಯಾಂತ 20 ಸ್ವಯಂ ಸೇವಕರನ್ನು ತರಬೇತಿ ನೀಡಿ ಅಣಿಗೊಳಿಸಲಾಗಿದೆ . ಈ ಸ್ವಯಂ ಸೇವಕರು ತಲಾ 10 ಮಂದಿಯಂತೆ 2 ತಂಡಗಳಾಗಿ ಕಾರ್ಯ ನಿರ್ವಹಿಸುತ್ತಾರೆ . ಈ ಸ್ವಯಂ ಸೇವಕರ ತಂಡವು ಜಾತಿ , ಧರ್ಮದ ಭೇಧಭಾವವಿಲ್ಲದೆ ಯಾವುದೇ ವ್ಯಕ್ತಿಯ ಕೊವಿಡ್ -19 ಮೃತದೇಹವನ್ನು ಅವರ ಸಂಬಂಧಿಕರ ಹಾಗೂ ಸಮುದಾಯದವರ ಭಾವನೆಗಳಿಗೆ ಧಕ್ಕೆಯಾಗದಂತೆ “ ಗೌರವಯುತವಾಗಿ ” ಅಂತ್ಯ ಸಂಸ್ಕಾರ ಮಾಡಲು ಸಿದ್ದವಾಗಿದೆ . ಇದಕ್ಕೆ ತಮ್ಮ ಮತ್ತು ಜಿಲ್ಲಾ ವೈದ್ಯಾಧಿಕಾರಿಗಳ ಹಾಗೂ ತಾಲೂಕ ವೈದ್ಯಾಧಿಕಾರಿಗಳ ಮಾರ್ಗದರ್ಶನದಲ್ಲಿ ನಮ್ಮ ಸ್ವಯಂ ಸೇವಕರ ಸೇವೆಯನ್ನು ನಮ್ಮ ಕೊಪ್ಪಳ ಜಿಲ್ಲಾಡಳಿತ ಬಳಿಸಿಕೊಳ್ಳಬೇಕೆಂದು ತಮ್ಮಲ್ಲಿ ಈ ಮೂಲಕ ಕೋರಿಕೊಳ್ಳುತ್ತೇವೆ . ಎಂದು ಜಿಲ್ಲಾಧ್ಯಕ್ಷ ಜಹೀರ್ ಅಬ್ಬಾಸ್, ಪ್ರದಾನ ಕಾರ್ಯದರ್ಶಿ ಅಬ್ದಲ್ ಫಯಾಜ್,ಸಲಿಂಖಾದ್ರಿ, ನಯೀಮ್ ಖಯ್ಯೂಮ್, ಯಾಸಿನ್ ಹಸನ್ ಮನವಿ ಮಾಡಿಕೊಂಡಿದ್ದಾರೆ

Please follow and like us:
error