ಕೊರೋನಾ ಸೊಂಕಿತರ ಚಿಕಿತ್ಸೆ , ಆಸ್ಪತ್ರೆಯ ಸಂಪರ್ಕಕ್ಕಾಗಿ ಉಚಿತ ವಾಹನ ಸೇವೆಗೆ ಡಾ.ಈಶ್ವರ ಸವಡಿ ಚಾಲನೆ

ಕನ್ನಡನೆಟ್ ಗಂಗಾವತಿ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಕೊರೋನಾ ಸೊಂಕಿತರ ಚಿಕಿತ್ಸೆ ಹಾಗೂ ಆಸ್ಪತ್ರೆಯ ಸಂಪರ್ಕಕ್ಕಾಗಿ ಉಚಿತ ವಾಹನ ಸೇವೆಗೆ ನಗರದ ಉಪವಿಭಾಗ ಆಸ್ಪತ್ರೆ ಆವರಣದಲ್ಲಿ ವೈದ್ಯಾಧಿಕಾರಿ ಡಾ. ಈಶ್ವರ ಸವಡಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಗ್ರಾಮೀಣ ಪೋಲೀಸ್ ಠಾಣೆ ಸಿಪಿಐ ಉದಯರವಿ, ಯೋಜನಾಧಿಕಾರಿ ಬಾಲಕೃಷ್ಣಗೌಡ, ಜಿಲ್ಲಾ ಜನಜಾಗೃತಿ ವೇದಿಕೆಯ ಜಂಟಿ ಕಾರ್ಯದರ್ಶಿ ನೀಲಕಂಠಪ್ಪ ನಾಗಶೆಟ್ಟಿ, ಮೇಲ್ವಿಚಾರಕ ಬಸವರಾಜ, ಶ್ರೀಮತಿ ಸುನಿತಾ, ಆರೋಗ್ಯ ರಕ್ಷಾ ಸಮಿತಿ ಸದಸ್ಯ ಶಿವಕುಮಾರ ಅರಿಕೇರಿ ಸೇರಿದಂತೆ ಇನ್ನಿತರರು ಇದ್ದರು.

Please follow and like us:
error