ಕೊರೊನಾ ವಾರಿಯರ್ಸ್‌ ಗೆ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ಸೇವಾ ಸಂಘದಿಂದ ಸತ್ಕಾರ

ಕೊಪ್ಪಳ : ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ಸೇವಾ ಸಂಘ ಕೊಪ್ಪಳ ಜಿಲ್ಲಾ ಘಟಕದಿಂದ ಕೊರೊನಾ ವಾರಿಯರ್ಸ್‌ ಗೆ ಸನ್ಮಾನ ಕಾರ್ಯಕ್ರಮವನ್ನು ಜಿಲ್ಲೆಯ ಗಂಗಾವತಿ ಐಎಮ್ಎ ಭವನದಲ್ಲಿ ರವಿವಾರದಂದು ಹಮ್ಮಿಕೊಳ್ಳಲಾಗಿತ್ತು. ಸಮಾರಂಭದಲ್ಲಿ ಕೊರೊನಾ ತಡೆಗಟ್ಟಲು ಸೇವೆ ಸಲ್ಲಿಸಿದ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಹಾಗೂ ಆಶಾ ಕಾರ್ಯಕರ್ತರಿಗೆ, ವೈದ್ಯರಿಗೆ ಪೌರಕಾರ್ಮಿಕರಿಗೆ ಸನ್ಮಾನಿಸಿ ಗೌರವಿಸಲಾಯಿತು. ಇದೇ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ನಗರಸಭೆ ಸದಸ್ಯರಾದ ಶಾಮೀದ್ ಮನಿಯಾರ್
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಂದು ಸಾಮಾಜಿಕ ಸೇವೆ ಮೂಲಕ ಸಂಘಟನೆ ಹುಟ್ಟಿಕೊಳ್ಳುತ್ತಿದೆ. ಸಂಘಟನೆಯನ್ನು ಕೇವಲ ಉದ್ಘಾಟಸಿ ಬಿಡಬಾರದು ಸಂಘಟನೆಯಿಂದ ವಿವಿಧ ರೀತಿಯಲ್ಲಿ ಒಳ್ಳೆಯ ಸಾಮಾಜಿಕ ಕೆಲಸ ಆಗಬೇಕು. ನಿಮ್ಮ ಜೊತೆಗೆ ನಾವು ಸದಾ ಕೈ ಜೋಡಿಸುತ್ತೇವೆ ಎಂದರು. ಇನ್ನು ಆಶಾ ಕಾರ್ಯಕರ್ತರಿಗೆ ಮತ್ತು ವೈದ್ಯರಿಗೆ, ಪೌರ ಕಾರ್ಮಿಕರಿಗೆ ಸನ್ಮಾನಿಸಿ ಗೌರವಿಸಿ ಸಂಘಟನೆ ಒಳ್ಳೆಯ ಕೆಲಸ ಮಾಡಿದೆ. ಆದರೆ ಸರ್ಕಾರದ ಮಟ್ಟದಲ್ಲಿ ಆಶಾ ಕಾರ್ಯಕರ್ತರ ಬೇಡಿಕೆಗಳನ್ನು ಒದಗಿಸಿಕೊಡಲು ಸರ್ಕಾರ ಹಿಂದೇಟು ಹಾಕುತ್ತಿದೆ. ಅವರ ಬಗ್ಗೆ ಸರ್ಕಾರ ಕಾಳಜಿವಹಿಸಲಿ ಎಂದರು.
ಈ ಸಂದರ್ಭದಲ್ಲಿ ರಾಜ್ಯ ನಿರ್ದೇಶಕರಾದ ಜಬ್ಬಾರ್ ಖಾನ್ , ಸಂಘದ ಜಿಲ್ಲಾ ಉಸ್ತುವಾರಿ ಅಧ್ಯಕ್ಷರಾದ ಹಮೀದ್ ಮುಲ್ಲಾ, ತಾ.ಪಂ.ಅಧ್ಯಕ್ಷರಾದ ಮೊಹಮ್ಮದ್ ರಫಿ, ನಗರಸಭೆ ಸಭೆ ಸದಸ್ಯರಾದ ಮನೋಹರಸ್ವಾಮಿ ಹಿರೇಮಠ , ಎಫ್ ರಾಘವೇಂದ್ರ , ಖಾಸೀಂಸಾಬ ಗದ್ವಾಲ್, ಮೌಲಾಸಾಬ ಅಬಿದ್, ಡಾ. ಮುದ್ದಾಬಳ್ಳಿ , ಹುಲಿಗೆಮ್ಮ ಕಿರಿಕಿರಿ ,
ಕಾಂಗ್ರೆಸ್ ಪಕ್ಷದ ಮುಖಂಡರಾದ ಸೈಯದ್ ಅಲಿ ಗಿರಿ ಗಾಯಕವಾಡ್, ದುರುಗೇಶ ದೊಡ್ಡಮನಿ , ನಗರಸಭೆ ಪೌರಾಯುಕ್ತರಾದ ಅರವಿಂದ ಜಮಕಂಡಿ, ಕರ್ನಾಟಕ ರಾಜ್ಯ ಅಲ್ಪ ಸಂಖ್ಯಾತರ ಅಭಿವೃದ್ಧಿ ಸೇವಾ ಸಂಘದ ರಾಜ್ಯಾಧ್ಯಕ್ಷರಾದ ಸೈಯ್ಯದ್ ಮುದಸ್ಸಿರ್ ಸೇರಿದಂತೆ ಮತ್ತಿತರರು ಇದ್ದರು

Please follow and like us:
error