ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ

ಕೊಪ್ಪಳ -ಜು.29 : ತಾಲೂಕಿನ ಹಲಗೇರಿ ಗ್ರಾಮದ ಸರಕಾರಿ ಪ್ರೌಢ ಶಾಲೆ ಆವರಣ ಸೇರಿದಂತೆ ಗ್ರಾಮದ ಎಲ್ಲಾ ಶಾಲೆಗಳಲ್ಲಿ  1೦೦1 ಸಸಿಗಳನ್ನು ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಗ್ರಾಮ ಪಂಚಾಯತಿ ಅಧ್ಯಕ್ಷರಾದ ದೇವಪ್ಪ ಓಜನಹಳ್ಳಿ ಅವರು ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಗ್ರಾ.ಪಂ.ಉಪಾಧ್ಯಕ್ಷರಾದ ಸರ್ವಮಂಗಳ ಹಿರೇಮಠ, ಸದಸ್ಯರಾದ ಮಲ್ಲಣ್ಣ ಸಜ್ಜನ್, ವೀರಭದ್ರಗೌಡ ಪಾಟೀಲ್, ಮಹಾಂತೇಶ ಬಂಡಿವಡ್ಡರ್, ಹನುಮಂತ ಹಳ್ಳಿಕೇರಿ, ದೇವಪ್ಪ ವದ್ನಾಳ, ಪಂಚಾಯತ್ ಅಭಿವೃದ್ದಿ ಅಧಿಕಾರಿಗಳಾದ ಮಂಜುಳಾ ಪಾಟೀಲ್, ಕಾರ್ಯದರ್ಶಿ ಮಂಜುನಾಥ ಗುಂಡೂರು, ಶಾಲೆಯ ಮುಖ್ಯೋಪಾಧ್ಯಾಯರಾದ ಗೋಪಾಲಕೃಷ್ಣ ಅಡವಿ ಸೇರಿದಂತೆ ಶಾಲೆಯ ಶಿಕ್ಷಕರು, ಗ್ರಾಮದ ಯುವಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

 

halgeri

Please follow and like us:
error