ಶಿಕ್ಷಣ ಮತ್ತು ತರಬೇತಿ ಸಂಸ್ಥೆ – ದಾಖಲಾತಿ ಪ್ರಾರಂಭ.

ಕೊಪ್ಪಳ. ಜು – 19 (ಕ ವಾ) : ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ಮುನಿರಾಬಾದ ಇವರಿಂದ ಪ್ರಸಕ್ತ ಸಾಲಿನ ಡಿ.ಇ.ಎಲ್.ಇಡಿ ಹಾಗೂ ಡಿ.ಪಿ.ಇಡಿ ದಾಖಲಾತಿಯನ್ನು ಕೊಪ್ಪಳದ ಬಾಲಕರ ಪ.ಪೂ ಕಾಲೇಜು ಆವರಣದಲ್ಲಿರುವ ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ ಪ್ರಾರಂಭಿಸಲಾಗಿದೆ.
ದಾಖಲಾತಿ ಪ್ರಕ್ರಿಯೆ ಜು. 22 ವರೆಗೆ ನಡೆಯಲಿದ್ದು, ಡಿ.ಇ.ಎಲ್.ಇಡಿ ಹಾಗೂ ಡಿ.ಪಿ.ಇಡಿ ದಾಖಲಾತಿಗೆ ಆಯ್ಕೆಯಾದ ಅಭ್ಯರ್ಥಿಗಳು ಸಂಬಂಧಿಸಿದ ದಾಖಲಾತಿಗಳೊಂದಿಗೆ ನಿಗದಿತ ಸಮಯದೊಳಗಾಗಿ ಹಾಜರಾಗಿ ದಾಖಲಾತಿ ಪಡೆಯಬೇಕು ಎಂದು ಮುನಿರಾಬಾದ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಪ್ರಾಚಾರ್ಯರು dedತಿಳಿಸಿದ್ದಾರೆ.

Leave a Reply