ವ್ಯಕ್ತಿತ್ವ ವಿಕಸನ ಕಾರ್ಯಕ್ರಮ

ಕೊಪ್ಪಳ : ಕೊಪ್ಪಳ ತಾಲೂಕಿನ ಶ್ರೀ ಶಿವಶರಣೆ ಬುಡ್ಡಮ್ಮದೇವಿ ಸರಕಾರಿ ಪ್ರೌಢಶಾಲೆ ಮೈನಳ್ಳಿ ಯಲ್ಲಿ ವೃತ್ತಿ ಮಾರ್ಗದರ್ಶನ ಮತ್ತು ವ್ಯಕ್ತಿತ್ವ ವಿಕಸನ ಕುರಿತಂತೆ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.  ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಕೊಪ್ಪಳದ ಬಿ.ಪಿ.ಡಿ ರಾಜೇಶ, ಪ್ರವೀಣ ಹಿರೇಮಠ ಹಾಗೂ ರಮೇಶ ಅವೋಜಿ ಆಗಮಿಸಿದ್ದರು.ಸಂಪನ್ಮೂಲ ವ್ಯಕ್ತಿ ಪ್ರವೀಣ ಹಿರೇಮಠ ಮಾತನಾಡುತ್ತಾ ಎಸ್.ಎಸ್.ಎಲ್.ಸಿ ನಂತರ ಅವಕಾಶ ವಿರುವ ವಿವಿಧ ಅಧ್ಯಯನದ ವಲಯಗಳನ್ನ ತಿಳಿಸಿದರು. ವೈಯಕ್ತಿಕ ವ್ಯಕ್ತಿತ್ವ ವಿಕಸನದ ಜೊತೆಗೆ ಸ್ವಾವಲಂಬಿ ಜೀವನಕ್ಕೆ ವಿವಿಧ ವೃತ್ತಿಪರ ಶಿಕ್ಷಣದ ಕುರಿತು. ಸವಿಸ್ತಾರವಾಗಿ ಶಾಲಾ ಮಕ್ಕಳಿಗೆ ಉಪನ್ಯಾಸ ನೀಡಿದರು.ಇನ್ನೋರ್ವ ಸಂಪನ್ಮೂಲ ವ್ಯಕ್ತಿ ಬಿ.ಪಿ.ಡಿ ರಾಜೇಶ ಮುತ್ತಾಳ ರವರು ಮಾತನಾಡುತ್ತಾ ಕಲಿಕೆಯ ಜೊತೆಗೆ ಸಮಾಜ ಹಾಗೂ ನಾಡಿನ ಪ್ರಗತಿ ಹಾಗೂ ಏಳಿಗೆಗೆ, ನಿರ್ವಹಿಸಬೇಕಾದ ಪ್ರಮುಖ ಪಾತ್ರದ ಕುರಿತು ಮಕ್ಕಳಲ್ಲಿ ಮಾರ್ಮಿಕವಾಗಿ ಉತ್ತಮ ಅಂಶಗಳನ್ನು ತಿಳಿಯಪಡಿಸಿದರು. ಈ ದೇಶಕ್ಕಾಗಿ ಚಿಕ್ಕ ವಯಸ್ಸಿನಲ್ಲಿ ಪ್ರಾಣ ಕೊಟ್ಟ ಭಗತ್‌ಸಿಂಗ, ರಾಜಗುರು, ಸುಖದೇವ, ಸ್ವಾಮಿ ವಿವೆಕಾನಂದರು, ಖುದಿರಾಮ್ ಭೋಸ್, ಚಂದ್ರಶೇಖರ ಅಜಾದ್ ಇವರಲ್ಲರ ಬಗ್ಗೆ  ಮಾತನಾಡಿ ಇಂತಹ ಮಹಾನ್ ವ್ಯಕ್ತಿಗಳ ಆದರ್ಶ ಗುಣಗಳನ್ನು ಬೆಳಸಿಕೊಳ್ಳಬೇಕು  ನಿಮ್ಮ ಜೀವನ ಸಾರ್ಥಕತೆಯಾಗುವುದು ಎಂದು ಸವಿಸ್ತಾರವಾಗಿ ಮಕ್ಕಳಿಗೆ ಪ್ರೆರಣೆ ನೀಡಿದರು. ಇನ್ನೋರ್ವ ಸಂಪನ್ಮೂಲ ವ್ಯಕ್ತಿ ರಮೇಶ ಅವೋಜಿ ಯವರು ಓದಿನಲ್ಲಿ ನಿವೇಕೆ ಹಿಂದಿರುವರಿ, ಪರಿಣಾಮಕಾರಿ ಕಲಿಕೆಗೆ ಇರುವ ಸಮಸ್ಯೆಗಳೇನು,ಆ ಸಮಸ್ಯೆಯಿಂದ ಹೊರ ಬರುವುದು ಹೇಗೆ, ಎಂದು ಸಂಕ್ಷಿಪ್ತವಾಗಿ ಮಾತನಾಡಿದರು. ಅಧ್ಯಕ್ಷತೆಯನ್ನು ಮುಖ್ಯೋ ಪಾಧ್ಯಯರಾದ ಅಶೋಕ ಭದ್ರಶೆಟ್ಟರ, ಕಾರ್ಯಕ್ರಮದಲ್ಲಿ ಶಾಲೆಯ ಎಲ್ಲಾ ಶಿಕ್ಷಕ ವೃಂದ ಹಾಗೂ ಶಾಲಾ ಮಕ್ಕಳು ಹಾಜರಿದ್ದರು. p1 pಕೊನೆಯಲ್ಲಿ  ಸಸಿ ನಡೆವುದರ ಮುಖಾಂತರ ಮುಕ್ತಾಯಗೊಳಿಸಲಾಯಿತು.

 

Please follow and like us:
error