ವಿಸ್ತಾರ್ ರಂಗಶಾಲೆ ಉಧ್ಘಾಟನೆ

????????

ಕೊಪ್ಪಳ -ಆ- 01. ಇಂದು ವಿಸ್ತಾರ್ ಆವರಣದಲ್ಲಿ ನಡೆದ ವಿಸ್ತಾರ್ ರಂಗಶಾಲೆಯ ಉಧ್ಘಾಟನೆ ನೆರವೇರಿಸಲಾಯಿತು. ಸಮಾರಂಭದಲ್ಲಿ ಉಧ್ಘಾಟಕರಾಗಿ ಆಗಮಿಸಿದ ಹಿರಿಯ ಸಾಹಿತಿ ಶ್ರೀ ಮಾಹಂತೇಶ್ ಮಲ್ಲನಗೌಡರ್ ಮಾತನಾಡಿ ಕುವೆಂಪು ಅವರ ಮನುಜಮತ ವಿಶ್ವಪಥ ಹೇಳಿದಂತೆ ನಾವು ಮಾನವರಾಗಬೇಕು, ಮಾನವ ಧರ್ಮವನ್ನು ಅನುಸರಿಸಬೇಕು ಮನುಷತ್ವವನ್ನು ನಿರ್ಮಿಸಿಕೊಳ್ಳಬೇಕಾದರೆ ರಂಗಭೂಮಿಯ ಅವಶ್ಯಕತೆ ಮಾನವನಿಗೆ ಅತಿ ಅಗತ್ಯ. ಕೊಪ್ಪಳ ಜಿಲ್ಲೆಯಲ್ಲಿ ರಂಗಶಾಲೆ ಪ್ರಾರಂಭವಾಗಿರುವುದು ಹೆಮ್ಮೆಯ ವಿಷಯ ಎಂದು ಶ್ಲಾಘಿಸಿದರು. ಮುಖ್ಯಅತಿಥಿಗಳಾಗಿ ಆಗಮಿಸಿದ ಸಮಾಜ ಚಿಂತಕಿ ಶ್ರೀಮತಿ ಇಂದಿರಾ ಬಾವಿಕಟ್ಟಿ ಮಾತನಾಡಿ ಸಮಾಜದ ಸರಿದೂಗುಗಳಿಗೆ ದನಿಗೂಡಿ ಸರಿಮಾಡುವುದೇ ರಂಗಭೂಮಿ. ವಿಧ್ಯಾರ್ಜನೆಗಾಗಿ ಶ್ರಮಪಡುತ್ತಿರು  ವಿಸ್ತಾರ್ ಸಂಸ್ಥೆಗೆ ಸಲ್ಲಬೇಕು ಎಂದು ಹೇಳಿದರು.ಇನ್ನೊಬ್ಬರು ಮುಖ್ಯಅತಿಥಿಯಾಗಿ ಬಸವರಾಜ್ ಕನಕಪುರ ಮಾತನಾಡಿ, ಈ ರಂಗಭೂಮಿಯ ಕೆಲಸ ನಮ್ಮ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಯುತ್ತಿರುವುದು ಬಹಳ ಸಂತೋಷದ ವಿಷಯ. ನಾವೆಲ್ಲರು ನಿಮ್ಮ ಜೊತೆಗಿದ್ದು, ಈ ರಂಗಭೂಮಿ ಚಳುವಳಿಗೆ ಕೈ ಜೋಡಿಸುತ್ತೇವೆ ಎಂದರು.????????

ಅಧ್ಯಕ್ಷತೆ ವಹಿಸಿದ ವಿಸ್ತಾರ್ ಸಂಸ್ಥೆಯ ಸಂಯೋಜಕರಾದ ಆಶಾ.ವಿ ರವರು ಸಮಾಜ ಪರಿವರ್ತನೆಗಾಗಿ ರಂಗಭೂಮಿ ಕೆಲಸದಲ್ಲಿ ತೊಡಗಿಕೊಂಡಿದೆ. ಉತ್ತರ ಕರ್ನಾಟಕ ಭಾಗದ ಯುವಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಭಾರತೀಯ ರಂಗಭೂಮಿಯಲ್ಲಿ ಇವತ್ತಿನ ದಿನ ದಪ್ಪಕ್ಷರಗಳಲ್ಲಿ ಬರೆದಿಡುವ ದಿನ ಎಂದರು. ಲಕ್ಷ್ಮಣ ಪಿರಗಾರ್, ಯೋಸೆಪ್ ಡಣಾಪುರ್, ಗ್ರಾಮ ಪಂಚಾಯಿತಿಯ ಸದಸ್ಯರುಗಳಾದ ಪುಂಡಪ್ಪ,ಬೆಟ್ಟದಪ್ಪ,ಮಹಾಲಿಂಗಪ್ಪ ರವರು ವೇದಿಕೆಯನ್ನು ಅಲಂಕರಿಸಿದರು.

Please follow and like us:
error