ಯೋಗದ ನಿರಂತರ ಸೇವೆಯಿಂದಲೆ ಜನಮನ್ನಣೆ – ಭವರ್‌ಲಾಲ್

????????????????????????????????????

????????????????????????????????????

ಕೊಪ್ಪಳ – ಕೇವಲ ಯೋಗದ ನಿರಂತರ ಸೇವೆಯಿಂದಲೇ ಮಾತ್ರ ಜನಮನ್ನಣೆ ಸಾಧ್ಯ ಎಂದು ಪತಂಜಲಿ ರಾಜ್ಯ ಪ್ರಭಾರಿ ಭವರ್‌ಲಾಲ್ ಆರ್ಯ ಅಭಿಪ್ರಾಯಪಟ್ಟರು.

ಅವರು ನಗರದ ಶ್ರೀ ಪಾಂಡುರಂಗ ದೇವಸ್ಥಾನ ಭವನದಲ್ಲಿ ಹಮ್ಮಿಕೊಳ್ಳಲಾಗಿರುವ 26 ದಿನಗಳ ಸಹ ಯೋಗ ಶಿಕ್ಷಕರ ಶಿಬಿರದಲ್ಲಿ ಶಿಕ್ಷಕರಿಗೆ ಪ್ರಮಾಣ ಪತ್ರ ಮತ್ತು ಗುರುತಿನ ಚೀಟಿ ವಿತರಣಾ ಕಾರ್ಯಕ್ರಮಕ್ಕೆ ಸಸಿಗೆ ನೀರು ಹಾಕುವ ಮೂಲಕ ಆರಂಭಿಸಿ ಮಾತನಾಡಿದರು.ನಾವು ಕರ್ಮಫಲ ಸಿದ್ಧಾಂತದಲ್ಲಿ ಜೀವಿಸಿದ್ದೇವೆ, ಒಂದು ಬೀಜ ಹೇಗೆ ಮರವಾಗಿ ಹೇಗೆ ಬಹಳಷ್ಟು ಬೀಜಗಳು ಬರುತ್ತವೆ, ಅದೇ ರೀತಿ ನಾವು ಇತರರಿಗೆ ಏನ್ನು ಕೊಡುತ್ತೇವೆ ಅದು ಸಾವಿರ ಪಟ್ಟು ಹಿಂದಿರುಗತ್ತದೆ, ಅದರಿಂದ ಮನುಷ್ಯ ಸತ್ಸಂಗದಲ್ಲಿ ಜೀವಿಸುವ ಅಗತ್ಯವೆ ಇಂದು ಇಡೀ ವಿಶ್ವ ಯೋಗದತ್ತ ಮುಖ ಮಾಡಿದೆ, ಭಾರತವನ್ನು ವಿಶ್ವ ಗುರುವಾಗಿ ಮತ್ತೊಮ್ಮೆ ವಿಶ್ವ ಸ್ವೀಕರಿಸಿದೆ, ಯೋಗವನ್ನು ಸರಿಯಾಗಿ ಮಾಡಬೇಕು, ಉತ್ತಮ ಶಿಕ್ಷಕರ ಮಾರ್ಗದರ್ಶನದಲ್ಲಿ ಕಲಿಯಬೇಕು ಅಂದಾಗ ಮಾತ್ರ ಅದರ ಫಲ ಸಿಗುತ್ತದೆ, ಈ ನಿಟ್ಟಿನಲ್ಲಿ ಯೋಚಿಸಿರುವ ಪತಂಜಲಿ ಪೀಠ ದೇಶದ ಎಲ್ಲಾ ಭಾಗಗಳಲ್ಲಿ ಸಹ ಯೋಗ ಶಿಕ್ಷಕರನ್ನು ತಯಾರಿ ಮಾಡುತ್ತಿದೆ. ಕೊಪ್ಪಳ ಜಿಲ್ಲೆಯಲ್ಲಿ ಈಗ ಸುಮಾರು ೪೦೦ ಸಹ ಯೋಗ ಶಿಕ್ಷಕರು ತಯಾರಿಗಿದ್ದಾರೆಂಬುದು ಹೆಮ್ಮೆಯ ವಿಷಯವೆಂದ ಅವರು, ಅತೀ ಶೀಘ್ರ ಭೊಜ್ಜು ನಿವಾರಣೆ ಶಿಬಿರ ಮತ್ತು ಮಧುಮೇಹ ನಿವಾರಣ ಶಿಬಿರ ಆಯೋಜಿಸಲಾಗುವದು ಎಂದರು.ಪತಂಜಲಿ ಯೋಗ ಪೀಠ ಹರಿಧ್ವಾರದ ಮಾರ್ಗದರ್ಶನದಲ್ಲಿ ಜಿಲ್ಲಾ ಪತಂಜಲಿ ಯೋಗ ಸಮಿತಿ, ಭಾರತ್ ಸ್ವಾಭಿಮಾನ ಟ್ರಸ್ಟ್, ಮಹಿಳಾ ಸಮಿತಿ, ಯುವ ಭಾರತ್, ಕಿಸಾನ್ ಯೋಗ ಸೇವಾ ಸಮಿತಿ ಜಂಟಿಯಾಗಿ ಶಿಬಿರ ಹಮ್ಮಿಕೊಂಡಿವೆ.

Please follow and like us:
error