ಮಹಾದಾಯಿ ಯೋಜನೆಗೆ ಅನುಮತಿ ನಿಡುವಬಗ್ಗೆ

ಕೊಪ್ಪಳ: ರಾಜಕೀಯ ಸೇರಿದಂತೆ ಎಲ್ಲ ಕಾರಣಗಳನ್ನು ಬದಿಗೊತ್ತಿ ಮಹಾದಾಯಿ ಯೋಜನೆಗೆ ಅನುಮತಿ ನಿಡುವಂತೆ ಇತ್ತಿಚಿಗೆ ಹೊರಬಿದ್ದ ನ್ಯಾಯಾಧಿಕಾರಣ ತೀರ್ಪಿನಿಂದ ಉತ್ತರ ಕರ್ನಾಟಕದ ಪ್ರಮುಖ ಮಹಾದಾಯಿ ಯೋಜನೆಗೆ ಮರಣ ಶಾಸನ ನೀಡಿದಂತಾಗಿದೆ. ರಾಜಕೀಯ ಹಾಗೂ ಯೋಜನೆಯ ತಾಂತ್ರಿಕ ಅಡೆತಡೆಗಳು ಏನೇ ಇದ್ದರೂ ಅವನ್ನು ಬದಿಗಿಟ್ಟು ಕೂಡಲೇ ತೀರ್ಪನ್ನು ಮರುಪರಿಶೀಲಿಸಿ ಈಗ ಆಗಿರುವ ಅನ್ಯಾಯ ಸರಿಪಡಿಸಬೇಕು ನೀರನ್ನು ಕಳೆದುಕೊಳಲು ನ್ಯಾವ್ಯಾರೂ ತಯಾರಿಲ್ಲ ರಾಜ್ಯ ಸರಕಾರ ಕೂಡ ನ್ಯಾಯಾಧಿಕರಣ ತೀರ್ಪಿನ ವಿರುದ್ದ ಕೂಡಲೇ ಮರುಪರಿಶೀಲನಾ ಅರ್ಜಿ ಸಲ್ಲಿಸಬೇಕೆಂದು ನಾವು ಆಗ್ರಹಿಸುತ್ತೆವೆ.ಮಹಾದಾಯಿ ತೀರ್ಪಿನ ವಿರುದ್ದ ನಡೆದ ಬಂದ್ ಹೋರಾಟದ ಸಂದರ್ಭದಲ್ಲಿ ಯಮನೂರು-ನವಲಗುಂದ-ನರಗುಂದದಲ್ಲಿ ರೈತರು, ಮಹಿಳೆಯರು, ವೃದ್ಧರು ಹಾಗೂ ಮಕ್ಕಳ ಮೇಲೆ ನಡೆದ ಪೊಲೀಸರ ಅಮಾನವೀಯತೆ ಲಾಠಿ ಚಾರ್ಜ್ ಕ್ರಮವನ್ನು ನಾವು ಉಗ್ರವಾಗಿ ಖಂಡಿಸುತ್ತೇವೆ. ರಾಜ್ಯ ಸರಕಾರ ಕೂಡಲೇ ಮಹಾದಾಯಿ ಹೋರಾಟಗಾರರು ಹಾಗೂ ಅಮಾಯಕರ ಮೇಲೆ ಹಾಕಿರುವ ಎಲ್ಲ ಪ್ರಕರಣಗಳನ್ನು ಕೈ ಬಿಡಬೇಕೆಮದು ಆಗ್ರಹಿಸುತ್ತೇವೆ.
ಇಂದು ಕೊಪ್ಪಳದ ಬಸ್ ನಿಲ್ದಾಣದಿಂದ ಅಶೋಕ ಸರ್ಕಲ್‌ವರೆಗೆ , ಕೊಪ್ಪಳ ಜಿಲ್ಲಾಯbasaha ಎಲ್ಲಾ ಕಲಾವಿದರು ನಮ್ಮ ನಾಡಿನ ಸಂಸ್ಕೃತಿ ಬಿಂಬಿಸುವ ನಾಡಗೀತೆಗಳನ್ನು, ರೈತಗೀತೆಗಳನ್ನು ಹಾಡುತ್ತಾ ಈ ಮನವಿಯನ್ನು ಮಾನ್ಯ ತಹಿಶೀಲ್ದಾರರು ಕೊಪ್ಪಳರವರ ಮೂಲಕ ಟಿ, ಮಾಜಿದ್‌ಖಾನ, ಮೊಹ್ಮದ್ ರಫೀ, ರಾಮಚಂದ್ರಪ್ಪ ಉಪ್ಪಾರ, ಮಹೇಶ ಸಂಕನೂರು, ನಾಗರಾಜ ಕಾರಟಗಿ, ಮಂಜು ಚಿಲವಾಡ್ಗಿ ಹಾಗೂ ಸಮ್ಮದ್ ಮುಸಾಪೂರ ಇವರೊಂದಿತಮಗೆ ಸಲ್ಲಿಸುತ್ತಿದ್ದೇವೆ.
ಈ ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷರು ಪರಶುರಾಮ ಬನ್ನಿಗಿಡದ, ಅಧ್ಯಕ್ಷರು ಭಾಷಾ ಹಿರೇಮನಿ, ಉಪಾಧ್ಯಕ್ಷರು ಫಕಿರಪ್ಪ ಹೊರಟ್ನಾಳ, ತಾಲೂಕಾಧ್ಯಕ್ಷರು ಖಾಜಾವಲಿ ಗಂಗಾವತಿ, ಕೊಟ್ಟ್ರೇಯ್ಯ ಹೀರೇಮಠ, ಡಿ.ಎಸ್ ಪೂಜಾರ, ಜ್ಯೂ.ಉಪೇಂದ್ರ ಮಂಗಳೂರು,ಕುದ್ರಿಮೋತಿ ವಿಶೇಷ ಕಲಾವಿದರು, ಗವೀಶ ಬಸಾಪಟ್ಟಣ, ಪರಶುರಾಮ ಗಂಗಾವತಿ ಶರಣಪ್ಪ ಕುಕನೂರು, ಶರಣಯ್ಯ ಕುಡಕುಂಗೆ ಇನ್ನಿತರು ಉಪಸ್ಥಿತಿಯಿದ್ದರು

Leave a Reply