ಪ್ರಧಾನಿ ಮೋದಿ ಮೌನ ಮುರಿದು ಮಧ್ಯಪ್ರವೇಶಿಸಲಿ -ಶ್ರೀ ಬಸವಜಯ ಮೃತ್ಯಂಜಯ ಸ್ವಾಮಿಗಳು

ಕೊಪ್ಪಳ-೦೩: ಉತ್ತರ ಕರ್ನಾಟಕ ಜನರಿಗೆ ಕುಡಿಯುವ ನೀರು ಪೂರೈಕೆ ಮಾಡುವ ಮಹದಾಯಿ ಯೋಜನೆಯ ವಿಷಯದಲ್ಲಿ ಹೊರಬಿದ್ದಿರುವ ಮಹದಾಯಿ ತೀರ್ಪಿನಿಂದ ಕನ್ನಡ ನಾಡಿನ ಜನತೆಗೆ ಮತ್ತು ರೈತರಿಗೆ ಅನ್ಯಾಯವಾಗಿದೆ ಈ ವಿವಾದದಲ್ಲಿ ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿ ಮೌನಮುರಿದು ಮಧ್ಯ ಪ್ರವೇಶಿಸಲಿ ಎಂಧು ಪಂಚಮಸಾಲಿ ಗುರು ಪೀಠ ಕೂಡಲ ಸಂಗಮದ ಶ್ರೀ ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳು ಹೇಳಿದರು. ಅವರು  ಭಾಗ್ಯನಗರದಲ್ಲಿ ಅಖಿಲ ಭಾರತ ಲಿಂಗಾಯತ ಸಮಾಜ ನಾಗರ ಪಂಚಮಿ ಹಾಗೂ ಶ್ರಾವಣಮಾಸದ ಪ್ರಯುಕ್ತ ಇಲ್ಲಿನ ಬಾಲಮಂದಿರದ ಅನಾಥ ಮಕ್ಕಳಿಗೆ ಹಾಲು ಕುಡಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಸಂದರ್ಭದಲ್ಲಿ ಮಾಧ್ಯಮದೊಂದಿಗೆ  ತಮ್ಮ ಪ್ರತಿಕ್ರೀಯೆ ವ್ಯಕ್ತ ಪಡಿಸಿದರು  ಮಹದಾಯಿ ತೀರ್ಪು ವಿವಾದ ಖಂಡಿಸಿ ಉತ್ತರ ಕರ್ನಾಟಕದಲ್ಲಿ ರೈತರು ಮತ್ತು ಜನಸಾಮಾನ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ ಇವರ ಈ ನ್ಯಾಯಯುತ ಹೋರಾಟವನ್ನು ಬೆಂಬಲಿಸಿ ನಾಡಿನಾಧ್ಯಂತ ವ್ಯಾಪಕ ಪ್ರತಿಬಟನೆ ನಡೆಯುತ್ತಿದೆ ಇವೆಲ್ಲವನ್ನು ಗಮನಿಸಿದ ಕೆಂದ್ರದ ಪ್ರಧಾನಿ ನರೇಂದ್ರ ಮೋದಿ ಮೌನ ವಹಸಿಸುವುದು ಸರಿಯಲ್ಲ ತಮ್ಮ ಮೌನವನ್ನು ಬಿಟ್ಟು ಮಧ್ಯಪ್ರವೇಶಿಸಿ ಸಮಸ್ಯ ಇಥ್ಯರ್ಥಕ್ಕೆ ಕೈಜೋಡಿಸಬೇಕು ಬಂಧನಕ್ಕೊಳಗಾಗಿರುವ ಅಮಾಯಕ ರೈತರನ್ನು ಕೂಡಲೇ ಬಿಡುಗಡೆಮಾಡಬೇಕು ರೈತರಮೇಲೆ ಪೊಲೀಸರು ನಡೆಸಿದ ಹಲ್ಲೆ ಖಂಡನಾರ್ಹವಾಗಿದೆ ತನಿಖೆನಡೆಸಿ ತಪ್ಪಿತಸ್ತರಮೇಲೆ ಕಾನುನೂಕ್ರಮ ಜರುಗಿಸಿಬೇಕು. ಮಹದಾಯಿ ವಿವಾದವನ್ನು ಸರ್ವಪಕ್ಷದವರನ್ನು ಕರೆಸಿ ಚರ್ಚಿಸಿ ಪ್ರಧಾನಿ  ಬಗೆಹರಿಸಬೇಕೆಂದು ಪಂಚಮಸಾಲಿ ಗುರು ಪೀಠ ಕೂಡಲ ಸಂಗಮದ ಶ್ರೀ ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳು ಹೇಳಿದರು. ಈ ಸಂದರ್ಭದಲ್ಲಿ ಅವರೊಂದಿಗೆ ಪಂಚಮಸಾಲಿ ಹಿರಿಯ ಮುಖಂಡ ಬಸವಲಿಂಗಪ್ಪ ಲಾಡಿ, ಸಮಾಜದ ಯುವ ನಾಯಕ ಶೇಖರಪ್ಪ ಮುತ್ತೇನವರ ತಾವರಗೇರಿ ಶೇಖರಗೌಡ ಹಿರೇ ಅರಳಿಹಳ್ಳಿ, ಕರಿಯಪ್ಪ ಮೇಟಿ, ಗವಿಸಿದ್ದಪ್ಪ ಕರ್ಕಿಹಳ್ಳಿ, ವಿರೇಶ ಹಾಲಸಮುದ್ರ ದೇವರಾಜ 1 2ಸೇರಿದಂತೆ ಸಮಾಜದ ಅನೇಕ ಜನ ಯುವಕರು ಕಾರ್ಯಕರ್ತರು  ಪಾಲ್ಗೊಂಡಿದ್ದರು.

Please follow and like us:
error

Related posts

Leave a Comment