ಬಿಇಒ ಕಚೇರಿ ಗುಮಾಸ್ತ ವಿರುದ್ಧ ಕ್ರಮಕ್ಕೆ ಡಿಡಿಪಿಐಗೆ ಮನವಿ

ಗಂಗಾವತಿ.
ಕೊಪ್ಪಳ: ಭ್ರಷ್ಟಾಚಾರ, ಸಾರ್ವಜನಿಕ ಹಿತಾಸಕ್ತಿಗೆ ದಕ್ಕೆ ಬರುವಂತೆ ನಡೆದುಕೊಳ್ಳುತ್ತಿರುವ ಗಂಗಾವತಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಗುಮಾಸ್ತ ರುದ್ರಪ್ಪ ತಟ್ಟಿ ವಿರುದ್ಧ ಶೀಘ್ರ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಕೊಪ್ಪಳ ಜಿಲ್ಲಾಧ್ಯಕ್ಷ ರಾಜೇಶ್ ಅಂಗಡಿ ನೇತೃತ್ವದಲ್ಲಿ ಕರವೇ ಸ್ವಾgvtಭಿಮಾನಿ ಬಣದ ಕಾರ್ಯಕರ್ತರು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
ಭ್ರಷ್ಟಾಚಾರ, ದುರ್ನೆಡತೆ, ಅನೈತಿಕ ನಡಾವಳಿಕೆ ಹಾಗೂ ಮದ್ಯ ಸೇವಿಸಿ ಕರ್ತವ್ಯಕ್ಕೆ ಹಾಜರಾಗುವುದು ಸೇರಿದಂತೆ ಶಿಕ್ಷಕ ವೃಂದಕ್ಕೆ ವಿನಾಕಾರಣ ಕಿರುಕುಳ ನೀಡುವ ರುದ್ರಪ್ಪ ತಟ್ಟಿ ಅವರನ್ನು ಕೂಡಲೆ ಅಮಾನತ್ತಿನಲ್ಲಿಡಬೇಕು ಮತ್ತು ತನಿಖೆ ನಡೆಸಿ ಅವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕೆಂದು ಅಗ್ರಹಿಸಿದ್ದಾರಲ್ಲದೆ, ವಿಳಂಬ ಮಾಡಿದರೆ, ಜಿಲ್ಲಾಧಿಕಾರಿ ಕಚೇರಿ ಮುಂದೆ ಅನಿರ್ಧಿಷ್ಟಾವಧಿ ಧರಣಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಹೋರಾಟವನ್ನು ಹಂತಹಂತವಾಗಿ ಜಿಲ್ಲೆಯ ಎಲ್ಲಾ ತಾಲೂಕಾ ಕೇಂದ್ರಗಳಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ರಾಜೇಶ್ ಅಂಗಡಿ ಈ ಸಂದರ್ಭದಲ್ಲಿ ತಿಳಿಸಿದರು.
ಕರವೇ (ಸ್ವಾಭಿಮಾನಿಬಣ) ಕೊಪ್ಪಳ ತಾಲೂಕಾ ಅಧ್ಯಕ್ಷ ನಾಗರಾಜ್, ಯುವ ಘಟಕದ ಅಧ್ಯಕ್ಷ ಕೋಟೇಶ್, ರಫಿ, ಮಹೆಬೂಬ್ ಸೇರಿದಂತೆ ಇತರರು ಇದ್ದರು.

Leave a Reply