ನೂತನ ಜಿಲ್ಲಾ ಕಚೇರಿ ಉದ್ಘಾಟನೆ

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ
ಕೊಪ್ಪಳ-೦6: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನೂತನ ಜಿಲ್ಲಾ ಕಚೇರಿಯು ನೂತನ ಕಟ್ಟಡಕ್ಕೆ ಸ್ಥಳಾಂತರ ಗೊಂಡಿದ್ದು ಇಂದಿನಿಂದ ಸದರಿ ಕಟ್ಟಡದಲ್ಲಿ ಜಿಲ್ಲಾ ಮತ್ತು ತಾಲೂಕಾ ಯೋಜನೆಯ ಕಾರ್ಯಾರಂಭಿಸಲಿದೆ ಇದರ ಉದ್ಘಾಟನೆಯನ್ನು ಶ್ರೀಗವಿಮಠದ ಶ್ರೀಗವಿಸಿದ್ದೇಶ್ವರ ಮಹಾಸ್ವಾಮಿಗಳು ಉದ್ಘಾಟನೆ ನೆರವೇರಿಸಿ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದರು.ನೂತನ ಕಚೇರಿಯ ಕಾರ್ಯಾರಂಭಕ್ಕೆ ಹೋಮ ಹವನ ಪೂಜಾ ಕಾರ್ಯಕ್ರಮಗಳು ಜರುಗಿದವು. ಈ ಕಾರ್ಯಕ್ರಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹೈಕ ಕೊಪ್ಪಳ ಪ್ರಾದೇಶಿಕ ಯೋಜನಾಧಿಕಾರಿ ಕೆ.ಬೂದೆಪ್ಪಗೌಡ ಜಿಲ್ಲಾ ಯೋಜನಾಧಿಕಾರಿ ಹೆಚ.ಎಲ್.ಮುರಳೀಧರ್, ತಾಲೂಕಾ ಯೋಜನಾಧಿಕಾರಿ ಸುರೇಂದ್ರ ನಾಯಕ್ ಕೊಪ್ಪಳ ಹರೀಶ ಆರ್ ಎಸ್, ಸದಾಶಿವ ಕುಷ್ಟಗಿ ಅಲ್ಲದೆ ಜಿಲ್ಲಾ ಯೊಜನಾಧಿಕಾರಿ ಶಿಲ್ಪಾ ಸೇರಿದಂತೆ ಜಿಲ್ಲೆಯ ಎಲ್ಲಾ ಸಿಬ್ಬಂದಿ ವರ್ಗದವರು ಕಾರ್ಯಕ್ರಮ ದಲ್ಲಿ ಪಾಲ್ಗೊಂಡಿದ್ದರು.swamy

Please follow and like us:
error