ನೂತನ ಅಪರ ಜಿಲ್ಲಾಧಿಕಾರಿಯಾಗಿ ಡಾ. ರುದ್ರೇಶ್ ಘಾಳಿ

ಕೊಪ್ಪಳ – (ಕ ವಾ): ಕೊಪ್ಪಳ ಜಿಲ್ಲೆಯ ನೂತನ ಅಪರ ಜಿಲ್ಲಾಧಿಕಾರಿಯಾಗಿ ಡಾ. ರುದ್ರೇಶ್ ಘಾಳಿ ಅವರು ಗುರುವಾರದಂದು ಅಧಿಕಾರ ವಹಿಸಿಕೊಂಡರು.ಈ ಮೊದಲು ಅಪರ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಡಾ. ಪ್ರವೀಣಕುಮಾರ್ ಅವರು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಅವರ ಆಪ್ತ ಕಾರ್ಯದರ್ಶಿಯಾಗಿ ನೇಮಕಗೊಂಡು ವರ್ಗಾವಣೆಯಾಗಿದ್ದರು. ಡಾ. ರುದ್ರೇಶ್ ಘಾಳಿ ಅವರು 2008 ನೇ ಸಾಲಿನ ಕೆಎಎಸ್ ಬ್ಯಾಚ್ ಅಧಿಕಾರಿಯಾಗಿದ್ದು, ಪ್ರೊಬೆಷನರಿ ಸೇವೆಯನ್ನು ಕಲಬುರಗಿ ಜಿಲ್ಲೆಯಲ್ಲಿ ಸಲ್ಲಿಸಿದ್ದಾರೆ. 2012-13 ರಲ್ಲಿ ಗದಗ ಉಪವಿಭಾಗಾಧಿಕಾರಿಯಾಗಿ, 2013 ರಿಂದ ಎರಡು ವರ್ಷಗಳ ಕಾಲ ಚಿಕ್ಕೋಡಿ ಉಪವಿಭಾಗಾಧಿಕಾರಿಯಾಗಿ ಅಲ್ಲದೆ ಬೆಳಗಾವಿಯ ಬಿಮ್ಸ್ ಮೆಡಿಕಲ್ ಕಾಲೇಜಿನ ಮುಖ್ಯ ಆಡಳಿತಾಧಿಕಾರಿಯಾಗಿ, 2015 ರ ಅಕ್ಟೋಬರ್ ತಿಂಗಳಿನಿಂದ ಈವರೆಗೆ ರಾಯಚೂರು ಅಪರ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. adc

Please follow and like us:
error