ಜನಸಂಪರ್ಕ ಸಭೆ – ಅಹವಾಲು ಸ್ವೀಕಾರ ಪ್ರಾರಂಭ

ಕೊಪ್ಪಳ -ಆ-04 (ಕ ವಾ): ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಅವರು ಸಾರ್ವಜನಿಕ ಕುಂದುಕೊರತೆಗಳಿಗೆ ಸಂಬಂಧಿಸಿದಂತೆ ಆ. 06 ರಂದು ಕೊಪ್ಪಳದಲ್ಲಿ ಜನಸಂಪರ್ಕ ಸಭೆ ನಡೆಸಲಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ವತಿಯಿಂದ ಸಾರ್ವಜನಿಕ ಕುಂದುಕೊರತೆ ಅಹವಾಲು ಅರ್ಜಿಗಳನ್ನು ಸ್ವೀಕರಿಸುವ ಪ್ರಕ್ರಿಯೆಯನ್ನು ಗುರುವಾರದಂದು ಆರಂಭಿಸಿದೆ.ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್ ಬಳಿ  ಕುಂದುಕೊರತೆ ಅಹವಾಲುಗಳ ಅರ್ಜಿ ಸ್ವೀಕರಿಸಲು ಕೌಂಟರ್ ತೆರೆಯಲಾಗಿದ್ದು, ಗುರುವಾರದಂದು ಸಾರ್ವಜನಿಕರು ಅರ್ಜಿ ಸಲ್ಲಿಸಿ, ಸ್ವೀಕೃತಿ ಪಡೆಯುತ್ತಿರುವುದು ಕಂಡುಬಂದಿತು. ಅರ್ಜಿ ಸ್ವೀಕೃತಿ ಕೌಂಟರ್‍ನಲ್ಲಿ ಆ. 05 ರಂದು ಸಂಜೆ 5-30 ಗಂಟೆಯವರೆಗೆ ಸಾರ್ವಜನಿಕರಿಂದ ಅರ್ಜಿಗಳನ್ನು ಸ್ವೀಕರಿಸಲಾಗುವುದು ಎಂದು ಜಿಲ್ಲಾಧಿಕಾರಿಗಳ ಕಚೇರಿ  ತಿಳಿಸಿದೆ.dc

Leave a Reply