ಗ್ರಾಮೀಣ ಪ್ರದೇಶದಲ್ಲೂ ಕೇಬಲ್ ಡಿಜಿಟೈಜೇಶನ್ ಕಡ್ಡಾಯ

ಕೊಪ್ಪಳ- ಆ-01 (ಕ ವಾ) : ಕೊಪ್ಪಳ lllllಜಿಲ್ಲೆಯ ಎಲ್ಲ ಗ್ರಾಮೀಣ ಪ್ರದೇಶಗಳಲ್ಲೂ ಡಿಸೆಂಬರ್ 31 ರೊಳಗಾಗಿ ಸೆಟ್‍ಟಾಪ್ ಬಾಕ್ಸ್ ಕಡ್ಡಾಯವಾಗಿ ಅಳವಡಿಸಿಕೊಳ್ಳಲೇಬೇಕು ಎಂದು ಕೊಪ್ಪಳ ಅಪರ ಜಿಲ್ಲಾಧಿಕಾರಿ ಇಸ್ಮಾಯಿಲ್ ಸಾಹೇಬ್ ಶಿರಹಟ್ಟಿ ಅವರು ಸೂಚನೆ ನೀಡಿದ್ದಾರೆ.ಜಿಲ್ಲೆಯ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಈಗಾಗಲೆ ಸೆಟ್‍ಟಾಪ್ ಬಾಕ್ಸ್ ಅಳವಡಿಕೆ ಮುಕ್ತಾಯ ಹಂತದಲ್ಲಿದೆ. ಕೇಂದ್ರ ಸರ್ಕಾರದ ವಾರ್ತಾ ಮತ್ತು ಪ್ರಸಾರ ಮಂತ್ರಾಲಯದ ಆದೇಶದನ್ವಯ ಇದೇ ಡಿ. 31 ರ ನಂತರ ಅನಲಾಗ್ ಸಿಸ್ಟಂ ಕೇಬಲ್ ಪ್ರಸಾರ ಸಂಪೂರ್ಣ ಸ್ಥಗಿತಗೊಳ್ಳಲಿದ್ದು, ಜಿಲ್ಲೆಯ ಎಲ್ಲ ಗ್ರಾಮೀಣ ಪ್ರದೇಶಗಳ ಕೇಬಲ್ ಟಿ.ವಿ. ಗ್ರಾಹಕರು ಡಿ. 31 ರೊಳಗಾಗಿ ಸೆಟ್‍ಟಾಪ್ ಬಾಕ್ಸ್ ಅಳವಡಿಸಿಕೊಳ್ಳಲೇಬೇಕಿದೆ. ಯಾವುದೇ ಕಾರಣಕ್ಕೂ ಅವಧಿ ವಿಸ್ತರಣೆ ಮಾಡುವ ಅವಕಾಶವಿಲ್ಲ ಎಂದು ಸರ್ಕಾರದ ಕಂದಾಯ ಇಲಾಖೆ ಕಾರ್ಯದರ್ಶಿಗಳು ಈಗಾಗಲೆ ಸ್ಪಷ್ಟಪಡಿಸಿದ್ದಾರೆ.  ಈ ವ್ಯವಸ್ಥೆಯನ್ನು ಸಂಬಂಧಪಟ್ಟ ಕೇಬಲ್ ಆಪರೇಟರ್ಸ್‍ಗಳು ಹಾಗೂ ಮಲ್ಟಿ ಸಿಸ್ಟಂ ಆಪರೇಟರ್ಸ್‍ಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಿ, ಅಳವಡಿಸಿಕೊಳ್ಳಬೇಕು. ಕೇಬಲ್ ಗ್ರಾಹಕರಿಗೆ ಈ ಕುರಿತು ಮನವರಿಕೆ ಮಾಡಿಕೊಟ್ಟು, ಡಿ. 31 ರ ಒಳಗಾಗಿ ಅನುಷ್ಠಾನಗೊಳಿಸಲೇಬೇಕಿದೆ. ಸೆಟ್‍ಟಾಪ್ ಬಾಕ್ಸ್ ಅಳವಡಿಕೆಯಿಂದ ಕೇಬಲ್ ಟಿ.ವಿ. ಗ್ರಾಹಕರಿಗೆ ಆಗುವ ಅನುಕೂಲಗಳ ಬಗ್ಗೆ ತಿಳುವಳಿಕೆ ಮೂಡಿಸಿ, ಅವರ ಮನವೊಲಿಸುವ ಕಾರ್ಯವನ್ನು ಕೈಗೊಳ್ಳಬೇಕು. ಡಿ. 31 ರ ನಂತರ ಅನಲಾಗ್ ವ್ಯವಸ್ಥೆಯಲ್ಲಿ ಕೇಬಲ್ ಟಿ.ವಿ. ಪ್ರಸಾರ ಕೈಗೊಳ್ಳುವ ಕೇಬಲ್ ಸಂಸ್ಥೆಗಳ ಉಪಕರಣವನ್ನು ಜಪ್ತಿ ಮಾಡಲಾಗುವುದು. ಇದಕ್ಕೆ ಅವಕಾಶ ನೀಡದಂತೆ, ಕೇಬಲ್ ಆಪರೇಟರ್ಸ್‍ಗಳು ಜಿಲ್ಲೆಯ ನಗರ, ಪಟ್ಟಣ ಮತ್ತು ಎಲ್ಲ ಗ್ರಾಮೀಣ ಪ್ರದೇಶಗಳಲ್ಲಿ ಡಿಸೆಂಬರ್ 31 ರ ಒಳಗಾಗಿ ಸೆಟ್‍ಟಾಪ್ ಬಾಕ್ ಅಳವಡಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ಅಪರ ಜಿಲ್ಲಾಧಿಕಾರಿ ಇಸ್ಮಾಯಿಲ್ ಸಾಹೇಬ್ ಶಿರಹಟ್ಟಿ ಅವರು ತಿಳಿಸಿದ್ದಾರೆ.

Please follow and like us:
error