” ಗಾಂಧಿತಾತ”

ಯಾರು ಈತ, ಯಾರು ಈತ?
ಸಣಕಲು ದೇಹದ ತಾತ!
ಸ್ವಾತಂತ್ರ್ಯ ಕಹಳೆ ಮೊಳಗಿಸಿದಾತ
ಸ್ವಾತಂತ್ರ್ಯ ತಂದು ಪ್ರಾಣ ಬಿಟ್ಟಾತ.

ಒಡೆದ ಕನ್ನಡಕ ಮೂಗಿನ ತುದಿಯಲಿ
ಸವೆದ ಚಪ್ಪಲಿ ದಣಿಯದ ಕಾಲಲಿ
ನಮ್ಮಯ ಹೆಮ್ಮೆ ಖಾದಿಯು ಮೈಯಲಿ
ಆಂಗ್ಲರ ಕಾಡಿದ ಕೋಲು ಕೈಯಲಿ

ಪಾದ ಯಾತ್ರೆಯ ಮೈಲುಗಳೆಷ್ಟೋ
ಉಪವಾಸ ಕುಳಿತ ದಿನಗಳದೆಷ್ಟೋ!
ಆಂಗ್ಲರ ಲಾಟಿಯ ಏಟುಗಳೆಷ್ಟೋ
ಜೈಲಲಿ ಕಳೆದ ಇರುಳುಗಳದೆಷ್ಟೋ!

ಸತ್ಯ ಶಾಂತಿ ಅಹಿಂಸೆಯೇ ಮಂತ್ರ
ಖಡ್ಗ-ಅಲಗಿಗೂ ಹರಿತ ಈ ತಂತ್ರ
ನಡೆಯಲೇ ಇಲ್ಲಾ ಆಂಗ್ಲರ ಕುತಂತ್ರ
ಗಡ-ಗಡ ನಡುಗುತ ಕೊಟ್ಟರು ಸ್ವಾತಂತ್ರ್ಯ

ರಾಮ ರಾಜ್ಯದ ಕನಸು ಕಂಡಾತ
ರಾಮ-ರಹೀಮರು ಒಂದೇ ಎಂದಾತ
ಹರಿಜನ ಕೇರಿಯ ಕಸವ ಗೂಡಿಸುತ
ಸ್ವಚ್ಛ ಭಾರತಕ್ಕೆ ನಾಂಧಿಯಾದಾತ
ಈತನೇ ನಮ್ಮಯ ಗಾಂಧಿತಾತ
ಭಾರತ ದೇಶದ ಹೆಮ್ಮೆಯ ಪಿತ
ದುರುಳನ ಗುಂಡಿಗೆ ಎದೆಯ ಕೊಟ್ಟಾತ
ಹರೇ ರಾಮ್ ಎನ್ನುತ ಪ್ರಾಣಬಿಟ್ಟಾತ

     *****
ಕಂಡಕ್ಟರ್‌ನಾಗೇಶ್ ಬಿನ್ನಾಳ
ಸಾ: ಬಿನ್ನಾಳ.
ತಾ: ಯಲಬುರ್ಗಾ.
ಜಿ: ಕೊಪ್ಪಳ.gandui
ಮೊ.ನಂ: ೯೬೧೧೯೭೮೨೪೨

Leave a Reply