You are here
Home > Koppal News-1 > koppal news > ಕೊಪ್ಪಳದಲ್ಲಿ ಕರ್ನಾಟಕ ನವ ನಿರ್ಮಾಣ ಸೇನೆಯಿಂದ ಪ್ರತಿಭಟನೆ

ಕೊಪ್ಪಳದಲ್ಲಿ ಕರ್ನಾಟಕ ನವ ನಿರ್ಮಾಣ ಸೇನೆಯಿಂದ ಪ್ರತಿಭಟನೆ

ಉತ್ತರ ಕರ್ನಾಟಕದ ಪ್ರಮುಖ ಕುಡಿಯುವ ನೀರಿನ ಯೋಜನೆಯಾದ ಮಹದಾಯಿ ನೀರಿನ ಹಂಚಿಕೆ ವಿಚಾರವಾಗಿ ನ್ಯಾಯಾಧಿಕರಣ ನೀಡಿದ ನಾಡ ವಿರೋಧಿ ತೀರ್ಪನ್ನು ಕರ್ನಾಟಕ ನವ ನಿರ್ಮಾಣ ಸೇನೆ ಬಲವಾಗಿ ಖಂಡಿಸುತ್ತದೆ. ರಾಜ್ಯ ಸರಕಾರ ಮಹದಾಯಿ ನ್ಯಾಯಾಧಿಕರಣ ವಿಚಾರದಲ್ಲಿ ಮುಂಚೆಯಿಂದಲು ಜಾಣ ಕುರುಡು ಅನುಸರಿಸುತ್ತಾ ಕೇಂದ್ರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಿಕೊಂಡು ಬಂದಿದೆ. ಕೇಂದ್ರ ಸರಕಾರವು ರಾಜ್ಯ ಸರಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದೆ. ಯಾವ ಸರಕಾರಗಳು ಕೂಡ ಈ ಯೋಜನೆಯ ವಿಚಾರದಲ್ಲಿ ಗಂಭೀರವಾಗಿ ಪ್ರಯತ್ನ ಮಾಡಲೇ ಇಲ್ಲ. ಬೆಳಿಗ್ಗೆ  ರಾಜ್ಯದ ಮುಖ್ಯಮಂತ್ರಿಯ ಸಿದ್ದರಾಮಯ್ಯ ಹಾಗೂ ಪ್ರಧಾನ ಮಂತ್ರಿಯರಿಗೆ ಸಿರಿ ಉಡಿಸಿ ಬಳೆ ತೊಡಿಸಿ ಪ್ರತಿಕೃತಿ ದಹಿಸಿ,  ಟೈಯರಿಗೆ ಬೆಂಕಿ ಹಚ್ಚ ಹೋರಾಟ ಮಾಡಲಾಯಿತು. ಪ್ರಧಾನಮಂತ್ರಿಗಳು ಸರ್ವಪಕ್ಷಗಳ ಹಾಗೂ ಉಭಯ ರಾಜ್ಯಗಳ ಸಭೆ ಕರೆದು ಸಮಸ್ಯೆಯನ್ನು ಬಗೆಹರಿಸದೇ ಹೋದರೆ ಮುಂದಿನ ದಿನಮಾನಗಳಲ್ಲಿ ಉಗ್ರವಾದ ಹೋರಾಟ ಮಾಡಲಾಗುವುದು. ಈ ಸ0ದರ್ಭದಲ್ಲಿ ವಿಜಯಕುಮಾರ ಕವಲೂರು, ಆನಂದ ಮಡಿವಾಳರ, ಮರಿಯಪ್ಪ ಮಂಗಳೂರು, ಬಸೀರ ಅಹ್ಮದ ಪಲ್ಟನ್, ವಿರೇಶ ಸಿದ್ದಪ್ಪ ಬಾರಕೇರ, ಶಾಂತಿ ಕವಜಗೇರಿ, ವಿರೇಶ ಅಂಗಡಿ, ಬಸವರಾಜ ಗೊಂದಿ, ರವಿ ಪಾಟೀಲ, ಪ್ರಕಾಶ ಮೈದೂರ, ಉಮೇಶ ಮಾಳಗಿ ಪದಾಧಿಕಾರಿಗಳು ಹಾಜರಿದ್ದರು. band

Leave a Reply

Top