ಕುಡಿಯುವ ನೀರು ಪೂರೈಕೆಗಾಗಿ ಪ್ರತಿಭಟನೆ

ಕೊಪ್ಪಳ-೦೩: ಕೊಪ್ಪಳ ನಗರದ 12 ಮತ್ತು 13ನೇ ವಾರ್ಡಿನ ಜನತೆಗೆ ಕುಡಿಯುವ ನೀರು ಪೂರೈಕೆಗಾಗಿ ಒತ್ತಾಯಿಸಿ ನಗರದ ಅಂಬೇಡ್ಕರ್ ಸರ್ಕಲ್ ಬಳಿ ವಾರ್ಡಿನ ಸಮಸ್ತ ಸಾರ್ವಜನಿಕರು ಖಾಲಿಕೊಡಗಳ ಪ್ರದರ್ಶನಮಾಡಿ ಬೃಹತ್ ಪ್ರತಿಭಟನೆ ನಡೆಸಿದರು.ನಗರಸಭೆಯ ಕಾರ್ಮಿಕರು ನೀರಿನ ಸಹಾಯಕರು ತಮ್ಮ ಬೇಡಿಕೆಗಾಗಿ ಒತ್ತಾಯಿಸಿ ಧರಣಿ ನಡೆಸುತ್ತಿದ್ದು ಇದರಿಂದ ನೀರು ಪೂರೈಕೆಗೆ ತೊಂದರೆಯಗಿದೆ ಅವರ ಬೇಡಿಕೆ ಈಡೇರಿಸಿ ಹಾಗೂ ಅಲ್ಲಿಯ ವರೆಗೆ ನಗರಸಭೆಯ ವತಿಯಿಂದ ಪರ್ಯಾಯ ವ್ಯವಸ್ಥೆ ಟ್ಯಾಂಕರ್ ಮೂಲಕ ನೀರು ಪೂರೈಸಿ ಎಂದು ಕೇಳಿಕಪಂಡರು ನಗರಸಭೆಯ ಅಧಿಕಾರಿವರ್ಗದವರು ನಿರ್ಲಕ್ಷ್ಯ ದೋರಣೆ ತಾಳುತ್ತಿದ್ದಾರೆಂದು ೧೩ನೇ ವಾರ್ಡಿನ ಸದಸ್ಯ ಹಾಗೂ ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಖಾಜಾವಲಿ ಬನ್ನಿಕೊಪ್ಪ ಹೇಳಿದರು.ಅವರು ಸಹ ವಾರ್ಡಿನ ಜನರ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರ ಬೇಡಿಕೆಗಳ ಪೂರೈಕೆಗೆ ಹಾಗೂ ಕುಡಿಯುವ ನೀರು ಪೂರೈಕೆಗೆ ನಡೆಸಿದ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.ಈ ಸಂದರ್ಭದಲ್ಲಿ ೧೨ನೇ ವಾರ್ಡಿನ ನಾಯಕರಾದ ಸುಧಾಕರ ಹೊಸಮನಿ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಮಹಿಳೆಯರು, ಯುವಕರು ಕಾರ್ಯಕರ್ತರು  ಪಾಲ್ಗೊಂಡಿದ್ದರು.

????????????????????????????????????

Please follow and like us:
error

Related posts

Leave a Comment