ಕಂಪ್ಯೂಟರ್ ಏಜ್ಯುಕೇಶನ್ ಉದ್ಘಾಟನೆ

ಕೊಪ್ಪಳ-ಆ- 01. ಎಸ್ ಎಸ್ ಏಜ್ಯುಕೇಶನ್ ಸುಸೈಟಿ(ರಿ) ಕೊಪ್ಪಳ ವತಿಯಿಂದ ನಗರದ ಬಹಾರಪೇಟ್ ಶಾಲೆಯ ಹತ್ತಿರ ಎಸ್ ಆರ್ ಮಂಜೀಲ್ ಸಂಕೀರ್ಣದಲ್ಲಿ ಟ್ಯಾಲೆಂಟ್‌ಟಚ್ ಕಂಪ್ಯೂಟರ್ ಎಜ್ಯುಕೇಶನ್ ಸೆಂಟರ್ ಎಂಬ ಶಾಖೆ ಜಿಎಮ್ ಪ್ಲಾಜಾ ಸಂಕೀರ್ಣದಿಂದ ಎಸ್‌ಆರ್ ಮಂಜೀಲ್ ಸಂಕೀರ್ಣಕ್ಕೆ ಸ್ಥಳಾಂತರ ಗೊಂಡು ನೂತನವಾಗಿ ಪ್ರಾರಂಭಗೊಂಡಿದ್ದು  ಬೆಳಿಗ್ಗೆ ಪ್ರಾರಂಭೋತ್ಸವ ಕಾರ್ಯಕ್ರಮ ಉದ್ಘಾಟಿಸಲಾಯಿತು.lokaಮುಸ್ಲೀಂ ಸಮಾಜದ ಗುರುಗಳಾದ ಮೌಲಾನ ಮುಫ್ತಿ ಮಹಮ್ಮದ್ ನಜೀರ ಅಹಮದ್ ರವರ ದಿವ್ಯಸಾನಿದ್ಯದಲ್ಲಿ ಈ ನೂತನ ಕೇಂದ್ರದ ಉದ್ಘಾಟನೆಯನ್ನು ಕೊಪ್ಪಳ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ದೇವು ನಾಗನೂರವರು  ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಪ್ರೂಪ್ರೈಟರ್ ಸೈಯದ್ ಯಜ್‌ದಾನಿಪಾಷಾಖಾದ್ರಿ, ಹಿರಿಯ ಪತ್ರಕರ್ತರಾದ ಎಂ.ಸಾಧೀಕ ಅಲಿ, ಪ್ರಕರ್ತರ ಸಂಘದ ರಾಜ್ಯ ಸದಸ್ಯ ಹರೀಶ ಎಚ್.ಎಸ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ಎಮ್ ದೊಡ್ಡಮನಿ, ಉಪಾಧ್ಯಕ್ಷ ಬಸವರಾಜ್ ಗುಡ್ಲಾನೂರ. ವೀರ ಕನ್ನಡಿಗ ಸಂಘದ ಅಧ್ಯಕ್ಷ ಶಿವಾನಂದ ಹೊದ್ಲೂರ ಪಾಲ್ಗೊಂಡಿದ್ದರು.

Leave a Reply