ಉದ್ಯೋಗ ಮೇಳದಲ್ಲಿ ನೋಂದಣಿ ಕಾರ್ಯ ಚುರುಕು

ಶ್ರೀಗವಿಸಿದ್ಧೇಶ್ವರ ಜಾತ್ರೆಯ ಅಂಗವಾಗಿ ಕಳೆದ ವರ್ಷದಂತೆ ಈ ವರ್ಷವು ಸಹ ನಮ್ಮ ಭಾಗದ ಪ್ರತಿಭಾವಂತ ಅಭ್ಯರ್ಥಿಗಳಿಗೆ ಅನುಕೂಲವಾಗಲು ಪೂಜ್ಯ ಶ್ರೀಗಳು ಬೃಹತ್ ಉದ್ಯೋಗಮೇಳವನ್ನು ಹಮ್ಮಿಕೊಂಡಿದ್ದಾರೆ. ಈ ಉದ್ಯೋಗಮೇಳದಲ್ಲಿ ಶಾಲೆ ತೊರೆದವರು ಅಲ್ಲದೇ ಎಸ್.ಎಸ್.ಎಲ್.ಸಿ, ಪಿಯುಸಿ, ಐ.ಟಿ.ಐ, ಜೆ.ಓ.ಸಿ, ಡಿಪ್ಲೋಮಾ, ಪದವೀಧರರು ಹಾಗೂ ಸ್ನಾತಕೋತ್ತರ ಪದವೀಧರರು ಭಾಗವಹಿಸಬಹುದು.  ಉದ್ಯೋಗದ ಆಕಾಂಕ್ಷಿಗಳು ಮೊದಲು ತಮ್ಮ ಹೆಸರನ್ನು ದಿನಾಂಕ ೨೦-೦೧-೨೦೧೭ ರ ಒಳಗಾಗಿ ಶ್ರೀ ಗವಿಮಠದ ಮುಂದೆ ಇರುವ ಪೋಲಿಸ್ ಚೌಕಿಯ ಪಕ್ಕದಲ್ಲಿ ಇರುವ  ನೊಂದಣಿ ಕೇಂದ್ರದಲ್ಲಿ ವಿದ್ಯಾರ್ಹತೆಯ ಅಂಕಪಟ್ಟಿ ಹಾಗೂ ಇತರ ಪ್ರಮಾಣಪತ್ರಗಳ ಝರಾಕ್ಸ ಪ್ರತಿಗಳನ್ನು ಸಲ್ಲಿಸಿ ತಮ್ಮ ಹೆಸರನ್ನು ನೊಂದಾಯಿಸಬೇಕು. ನೊಂದಣಿ ಮಾಡಿಸಿದಂತಹ ಅಭ್ಯರ್ಥಿಗಳು  ದಿನಾಂಕ ೨೨-೦೧-೨೦೧೭ ರಂದು ಶ್ರೀಗವಿಸಿದ್ಧೇಶ್ವರ ಪ್ರೌಢಶಾಲೆಯ ಮುಂಭಾಗದ ಆವರಣದಲ್ಲಿ ಬೆಳಿಗ್ಗೆ ೯ ರಿಂದ ಜರುಗಲಿರುವ ಕೌಶಲ್ಯ ತರಬೇತಿಯಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು.   ವಿಶೇಷವೆಂದರೆ ಈ ಉದ್ಯೋಗ ಮೇಳದಲ್ಲಿ ೪೦ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಲಿವೆ. ಈ ಬಾರಿ ಸ್ಥಳಿಯ ಕಂಪನಿಗಳು ಭಾಗವಹಿಸುತ್ತಿರುವದು ವಿಶೇಷವಾಗಿದೆ. ಈಗಾಗಲೆ ಹಲವು ಉದೋಗಕಾಂಕ್ಷಿಗಳು ಹೆಸರನ್ನು ನೋಂದಾಯಿಸಿದ್ದಾರೆ. ಅಭ್ಯರ್ಥಿಗಳು ಕೊನೆಯ ದಿನಾಂಕವನ್ನು ಕಾಯದೇ ಹೆಸರು ನೋಂದಾಯಿಸಬೇಕು. ಮೊದಲು ಹೆಸರು ನೊಂದಾಯಿಸಿದ ೫೦೦೦ ಉದ್ಯೋಗಾಕಾಂಕ್ಷಿಗಳಿಗೆ ಮಾತ್ರ ಪ್ರವೇಶ ಸೀಮಿತವಿದೆ.
ದಿನಾಂಕ ೨೪-೦೧-೨೦೧೭ ಹಾಗೂ ದಿನಾಂಕ ೨೫-೦೧-೨೦೧೭ ರಂದು ಎರಡು ದಿವಸಗಳ ಕಾಲ ಸಂದರ್ಶನವನ್ನು ಏರ್ಪಡಿಸಲಾಗಿದೆ.

ಮಾಹಿತಿಗಾಗಿ ಮೊಬೈಲ್ ಸಂಖ್ಯೆಗಳಾದ ೯೮೪೫೦೦೨೨೫೯, ೮೯೦೪೬೧೮೭೯೦ ಸಂಪರ್ಕಿಸಬಹುದು.  ಉದ್ಯೋಗ ಮೇಳದಲ್ಲಿ ನಿವೃತ್ತ ಪ್ರಾಧ್ಯಾಪಕರಾದ ಎಸ್.ಬಿ.ಹಿರೇಮಠ, ಬಿ.ಇಡಿ ಕಾಲೇಜಿನ ಪ್ರಾಚಾರ್ಯ ಪ್ರಕಾಶ ಬಡಿಗೇರ ಉಸ್ತುವಾರಿ ವಹಿಸಿಕೊಂಡಿದ್ದಾರೆ.

Leave a Reply