ಕೊಪ್ಪಳ 155 ಪಾಜಿಟಿವ್ : 3 ಸಾವು, 61 ಡಿಸ್ಚಾರ್ಜ

ಕೊಪ್ಪಳ : ಜಿಲ್ಲೆಯಲ್ಲಿ ಕರೋನಾ ಹಾವಳಿ ಮುಂದುವರೆದಿದ್ದು ಇಂದು ೧೫೫ ಪಾಜಿಟಿವ್ ಪ್ರಕರಣಗಳು ವರದಿಯಾಗಿವೆ. ೩ ಜನ ಸಾವನ್ನಪ್ಪಿದ್ದು ೬೧ ಜನ ರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ ಮಾಡಲಾಗಿದೆ. ಅತೀ ಹೆಚ್ಚು ಕೊಪ್ಪಳ ತಾಲೂಕಿನಲ್ಲಿ 84, ಗಂಗಾವತಿ ತಾಲ್ಲೂಕಿನಲ್ಲಿ ೫೦, ಕುಷ್ಟಗಿ ತಾಲೂಕಿನಲ್ಲಿ ೧೮ ಹಾಗು ಯಲಬುರ್ಗಾ ತಾಲ್ಲೂಕಿನ ಲ್ಲಿ ೩ ಪ್ರಕರಣಗಳು ವರದಿಯಾಗಿವೆ. ಈವರೆಗೆ ಜಿಲ್ಲೆಯಲ್ಲಿ ೧೭೫೭ ಪಾಜಿಟಿವ್ ಪ್ರಕರಣಗಳು ವರದಿಯಾಗಿವೆ. ಅದರಲ್ಲಿ ೯೪೨ ಜನರನ್ನಜ ಡಿಸ್ಚಾರ್ಜ ಮಾಡಲಾಗಿದೆ.‌ ೩೫ ಜನ ಸಾವನ್ನಪ್ಪಿದ್ದಾರೆ. ಇನ್ನೂ ೧೦೩೫ ಜನರ ವರದಿ ಬರುವುದು ಬಾಕಿ ಇದೆ ಎಂದು ಜಿಲ್ಲಾಧಿಕಾರಿ ಎಸ್ ವಿಶಾಲ್ ಕಿಶೋರ್ ಹೇಳಿದ್ದಾರೆ.

Please follow and like us:
error