ಕೊಪ್ಪಳ ರೈಲ್ವೆ ನಿಲ್ದಾಣಕ್ಕೆ ಮಹಾ ನಾಯಕರ ನಾಮಕರಣಕ್ಕೆ ಭೀಮ ಆರ್ಮಿ ಮನವಿ

ಕೊಪ್ಪಳ : ಕೊಪ್ಪಳ ರೈಲ್ವೆ ನಿಲ್ದಾಣಕ್ಕೆ ಹೊಸನಾಮಕರಣ ಮಾಡಲು ಕೊಪ್ಪಳ ಜಿಲ್ಲಾ ಭೀಮ ಆರ್ಮಿ ಘಟಕದ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಕೇಂದ್ರ ರೈಲ್ವೆ ಸಚಿವರು , ರಾಷ್ಟ್ರಪತಿಗಳು , ಪ್ರಧಾನ ಮಂತ್ರಿಗಳಿಗೆ ಜಿಲ್ಲಾಧಿಕಾರಿಗಳ ಮುಖಾಂತರ ಮನವಿ ಸಲ್ಲಿಸಿದ ಪದಾಧಿಕಾರಿಗಳು

ಕೊಪ್ಪಳದ ರೈಲ್ವೆ ನಿಲ್ದಾಣಕ್ಕೆ ಕುರುಬ ಸಮುದಾಯದ ಬಹುಜನರ ನಾಯಕ ಭಾರತದ ಮೊಟ್ಟಮದಲ ಮಿಸಲಾತಿ ಹರಿಕಾರ ಕೊಲ್ಲಾಪುರ ಸಂಸ್ಥಾನದ ಛತ್ರಪತಿ ಶಾಹು ಮಹರಾಜರ ಹೆಸರು ಮತ್ತು ಕರ್ನಾಟಕದ ಮಿಸಲಾತಿ ಹರಿಕಾರನ್ನಾಗಿ ಬಡವರು ಹಾಗೂ ದಲಿತ ಹಿಂದುಳಿದ ಜಾತಿಗಳ ಆಶಾ ಕಿರಣವಾದ ಮೈಸುರು ಸಂಸ್ಥಾನದ ಶ್ರೀ ಕೃಷ್ಣರಾಜಾ ಒಡೆಯದ ಹೆಸರು ಮತ್ತು ಭಾರತದ ಇತಿಹಾಸದಲ್ಲಿ ಚರಿತ್ರೆಯಾದ ಛತ್ರಪತಿ ಶಿವಾಜಿ ಮಹಾರಾಜ ಮತ್ತು ಟಿಪ್ಪು ಸುಲ್ತಾನ ಮಹಾರಾಜರು ಹಾಗೂ ಸಮಸಮಾಜ ನಿರ್ಮಾಣಕ್ಕಾಗಿ ಸರ್ವ ಜಾತಿ ಧರ್ಮಗಳನ್ನು ಒಗ್ಗೂಡಿಸಿ ಸರ್ವ ಜನಾಂಗದಲ್ಲು ಸಕಥೆ ಮೇರೆದ ಮಹಾಪುರುಷರಾದ ಬುದ್ಧ ಬಸವ ಅಂಬೇಡ್ಕರ ಅಂತಹ ಮಹಾನ ಸಾಧಕರ ಹೆಸರು ಹಾಗೂ ಒಟ್ಟಾರೆ ಭಾರತದ ಇತಿಹಾಸದಲ್ಲಿ ಹೊಸ ಅಧ್ಯಾಯವನ್ನು ಸೃಷ್ಟಿಸಿದ ಮಹಾನಾಯಕರ ಹೆಸರು ಈ ಮನವಿ ಪತ್ರದಲ್ಲಿ ಇರುವ ಯಾರಾದರು ಒಬ್ಬರ ಹೆಸರನ್ನು ಆಯ್ದುಕೊಂಡು ನಾಮಕರಣ ಮಾಡಬೇಕು ಕಾರಣ ಹಿಂದು ಮುಸ್ಲಿಂ ಭಾವೈಕತೆಗೆ ಹೆಸರು ವಾಸಿಯಾದ ಕೊಪ್ಪಳ ಜಿಲ್ಲೆಯ ಕೊಪ್ಪಳ ರೈಲ್ವೆ ನಿಲ್ದಾಣಕ್ಕೆ ಹೆಸರು ಇಡಬೆಕೆಂದು ವಿನಂತಿ ಮಾಡಿಕೊಂಡಿದ್ದಾರೆ.


ಈ ಸಂದರ್ಭ ದಲ್ಲಿ ರಾಘವೇಂದ್ರ ಡಿ . ಚಾಕ್ರಿ ಭೀಮ ಆರ್ಮಿ ಜಿಲ್ಲಾ ಅಧ್ಯಕ್ಷರು , ಉಪಾಧ್ಯಕ್ಷ ಶರಣಪ್ಪ ಸಾಲ್ಮನಿ
ಜಿಲ್ಲಾ ಸಂಘಟನೆ ಸಂಚಾಲಕ, ಮಾರ್ಕೆಂಡಪ್ಪ ಬೆಲ್ಲದ್ತಾಲೂಕು ಸಂಘಟನ ಸಂಚಾಲಕರಾದ ಶರಣಪ್ಪ ಬಂಗಳ್ಗಿಡ ಸತೀಶ್ ಬನ್ನಿಕೊಪ್ಪ ಉಪಸ್ಥಿತ ಇದ್ದರು

Please follow and like us:
error